
ಸ್ಮಾರ್ಟ್‌ಫೋನ್‌ಗಳಲ್ಲಿ ಐಫೋನ್ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಐಫೋನ್ ಬಳಕೆದಾರರು ಅಪ್‌ಗ್ರೇಡ್ ಬಯಸಿದರೆ, ಇತರರು ಐಫೋನ್ ಖರೀದಿ ಬಯಸುತ್ತಾರೆ. ಸೆಪ್ಟೆಂಬರ್ ತಿಂಗಳಲ್ಲಿ ಐಫೋನ್ 18 ಪ್ರೋ ಮ್ಯಾಕ್ಸ್ ಸಿರೀಸ್ ಬಿಡುಗಡೆಯಾಗುತ್ತಿದೆ. ಚಿಪ್ ಸಮಸ್ಯೆ , ವೆಚ್ಚ ಹೆಚ್ಚಳ ಸೇರಿದಂತೆ ಹಲವು ಸವಾಲುಗಳ ನಡುವೆ ಐಫೋನ್ 18 ಪ್ರೊ ಮ್ಯಾಕ್ಸ್ ಇದೀಗ ಕುತೂಹಲ ಕೆರಳಿಸಿದೆ. ಮೂಲಗಳ ಪ್ರಕಾರ ಐಫೋನ್ 10 ಪ್ರೋ ಮ್ಯಾಕ್ಸ್ ಸೆಪ್ಟೆಂಬರ್ 8 ಅಥವಾ 9ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಸರಿಸುಮಾರು ಸೆಪ್ಯೆಂಬರ್ 18 ರಂದು ಮಾರಾಟಕ್ಕೆ ಲಭ್ಯವಾಗಲಿದೆ.
ಈ ಬಾರಿ ಐಫೋನ್ 18 ಸೀರಿಸ್ ಬೆಲೆ ಮೇಲೆ ತೀವ್ರ ಕುತೂಹಲವಿದೆ. ಈಗಾಗಲೇ ಆ್ಯಪಲ್ ಕಂಪನಿ ತನ್ನ ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದು, ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಗಿದೆ ಎಂದು ಘೋಷಿಸಿತ್ತು. ಚಿಪ್ ಸಮಸ್ಯೆ, ಉತ್ಪಾದನಾ ವೆಚ್ಚಗಳಿಂದ ಐಪೋನ್ 18 ಪ್ರೋ ಮ್ಯಾಕ್ಸ್ ಬೆಲೆಯಲ್ಲಿ ಕೊಂಚ ಏರಿಕೆ ಕಾಣಲಿದೆ. ಆರಂಭಿಕ ಬೆಲೆ 1,59,900 ರೂಪಾಯಿಯಿಂದ 1,69,900 ರೂಪಾಯಿ ಎಂದು ಅಂದಾಜಿಸಲಾಗಿದೆ.
ಐಫೋನ್ 18 ಪ್ರೋ ಮ್ಯಾಕ್ಸ್ ಫೋನ್ ಹಲವು ಫೀಚರ್ ಹೊಂದಿದೆ. A20 Pro ಟಿಎಸ್‌ಎಂಸಿ ಅತ್ಯಾಧುನಿಕ ಪ್ರೊಸೆಸರ್ ಇರಲಿದೆ. ಇದರಿಂದ ವೇಗ, ಬ್ಯಾಟರಿ ಉಳಿತಾಯ ಹಾಗೂ ಪರ್ಪಾಮೆನ್ಸ್ ಅದ್ಭುತವಾಗಲಿದೆ. ಇದೇ ಮೊದಲ ಬಾರಿಗೆ ಆ್ಯಪಲ್ ತನ್ನ ಐಫೋನ್‌ಗಳಲ್ಲಿ ವೇರಿಯೆಬಲ್ ಅಪೆರ್ಚರ್ ಕ್ಯಾಮೆರಾ ಬಳಸುತ್ತಿದೆ. 48MP ಮೈನ್ ಕ್ಯಾಮೆರಾದಲ್ಲಿ ಅಪೆರ್ಚರ್ ಟೆಕ್ ನೀಡಲಾಗಿದೆ. ಪ್ರೋ ಮ್ಯಾಕ್ಸ್ ಸಿರೀಸ್‌ಗೆ ವಿಶೇಷವಾಗಿ ವಿನ್ಯಾಸ ಮಾಡಿದ ಕ್ಯಾಮೆರಾ ಇದಾಗಿದೆ.
ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಲಾಗಿದೆ. 5,400mAh - 5,500mAh ಬ್ಯಾಟರಿ ನೀಡಲಾಗುತ್ತಿದೆ. ಇದರಿಂದ ಸುದೀರ್ಘ ಬ್ಯಾಟರಿ ಬಳಕೆ ಬರಲಿದೆ. ಡೈನಾಮಿಕ್ ಐಲ್ಯಾಂಡ್ ಡಿಸ್‌ಪ್ಲೇ ಸೇರಿದಂತೆ ಕೆಲ ವಿಶೇಷತೆಗಳು ಈ ಫೋನ್‌ನಲ್ಲಿದೆ. iOS 27 ಆಪರೇಟಿಂಗ್ ಸಿಸ್ಟಮ್, ಆ್ಯಪಲ್ ಇಂಟಲಿಜೆನ್ಸ್ , ಎಐ ಫೀಚರ್, ಇಂಪ್ರೂವ್ಡ್ ಸಿರಿ ವರ್ಶನ್ ಈ ಪೋನ್‌ನಲ್ಲಿ ಲಭ್ಯವಾಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.