
ಬೆಂಗಳೂರು: ಆಪಲ್ನ ಪ್ರೀಮಿಯಂ ಐಫೋನ್ ಖರೀದಿಸಲು ಕಾಯುತ್ತಿರೋರಿಗೆ ಸಿಹಿ ಸುದ್ದಿ ಇದೆ. Apple ಕಂಪನಿಯ iPhone 17 Pro ಮತ್ತು iPhone 17 Pro Max ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಹೊಸ ಐಫೋನ್ ಸರಣಿ ಮಾರುಕಟ್ಟೆಗೆ ಬಂದ ಬೆನ್ನಲ್ಲೇ ಹಳೆಯ ಪ್ರೊ ಮಾಡೆಲ್ಗಳಿಗೆ ಆಕರ್ಷಕ ಆಫರ್ಗಳು ಇವೆ. ಅದರಲ್ಲೂ Reliance Digital ಸ್ಟೋರ್ಗಳಲ್ಲಿ ವಿವಿಧ ಡಿಸ್ಕೌಂಟ್, ಎಕ್ಸ್ಚೇಂಜ್ ಬೋನಸ್ ಮತ್ತು ಕ್ಯಾಶ್ಬ್ಯಾಕ್ ಆಫರ್ಗಳ ಮೂಲಕ ಗ್ರಾಹಕರು ಕಡಿಮೆ ಬೆಲೆಗೆ ಐಫೋನ್ ಖರೀದಿಸಬಹುದಾಗಿದೆ.
256GB ಸ್ಟೋರೇಜ್ ಹೊಂದಿರುವ iPhone 17 Pro ಫೋನ್ನ ಮೂಲ ಬೆಲೆ ₹1,34,900 ಆಗಿದೆ. ಆದರೆ Reliance Digital ನೀಡುತ್ತಿರುವ ವಿವಿಧ ಆಫರ್ಗಳನ್ನು ಬಳಸಿಕೊಂಡರೆ ₹54,990 ರೂಪಾಯಿಗೆ ಐಫೋನ್ ಖರೀದಿಸಬಹುದಾಗಿದೆ. ಈ ಫೋನ್ ಖರೀದಿಸುವವರಿಗೆ ₹9,910 ಸ್ಟೋರ್ ಡಿಸ್ಕೌಂಟ್ ಸಿಗಲಿದೆ. ಜೊತೆಗೆ ಹಳೆಯ ಫೋನ್ ಎಕ್ಸ್ಚೇಂಜ್ ಮಾಡಿದರೆ ಅದರ ಮೌಲ್ಯಕ್ಕೆ ಅನುಗುಣವಾಗಿ ₹55,000 ವರೆಗೆ ಪಡೆಯಬಹುದು. ಇದರೊಂದಿಗೆ ₹10,000 ಎಕ್ಸ್ಚೇಂಜ್ ಬೋನಸ್ ಹಾಗೂ ₹5,000 ಕ್ಯಾಶ್ಬ್ಯಾಕ್ ಆಫರ್ ಕೂಡ ಲಭ್ಯವಿದೆ. ಈ ಎಲ್ಲಾ ಆಫರ್ಗಳನ್ನು ಒಟ್ಟಿಗೆ ಬಳಸಿದರೆ ಗ್ರಾಹಕರು ದೊಡ್ಡ ಮೊತ್ತದ ಉಳಿತಾಯ ಸಿಗಲಿದೆ. ಎಕ್ಸ್ಚೇಂಜ್ ಮೊತ್ತವು ಹಳೆಯ ಫೋನ್ನ ಮಾಡೆಲ್, ಸ್ಥಿತಿ ಮತ್ತು ಇತರ ಷರತ್ತುಗಳ ಮೇಲೆ ಅವಲಂಬಿತವಾಗಿರುತ್ತದೆ.
iPhone 17 Pro Max ಖರೀದಿಸಲು ಬಯಸುವವರಿಗೂ ಇದೇ ರೀತಿಯ ಆಫರ್ ಇದೆ. ₹1,49,900 ಮೂಲ ಬೆಲೆಯ ಈ ಫೋನ್ ಎಲ್ಲಾ ಆಫರ್ಗಳನ್ನು ಅನ್ವಯಿಸಿದ ಬಳಿಕ ₹69,990 ಆರಂಭಿಕ ಬೆಲೆಗೆ ಲಭ್ಯವಾಗಲಿದೆ. ಇದರಲ್ಲಿಯೂ ₹9,910 ಸ್ಟೋರ್ ಡಿಸ್ಕೌಂಟ್, ₹55,000 ವರೆಗೆ ಎಕ್ಸ್ಚೇಂಜ್ ಮೌಲ್ಯ, ₹10,000 ಎಕ್ಸ್ಚೇಂಜ್ ಬೋನಸ್ ಮತ್ತು ₹5,000 ಕ್ಯಾಶ್ಬ್ಯಾಕ್ ಸೇರಿವೆ. ಹಳೆಯ ಫೋನ್ ವಿನಿಮಯ ಮಾಡುವ ಗ್ರಾಹಕರಿಗೆ ಈ ಆಫರ್ ಹೆಚ್ಚು ಪ್ರಯೋಜನಕಾರಿ ಆಗಿದೆ.
iPhone 17 Pro ಮತ್ತು Pro Max ಎರಡೂ ಅತ್ಯಾಧುನಿಕ ಫೀಚರ್ಗಳನ್ನು ಹೊಂದಿವೆ. Apple A19 Pro ಪ್ರೊಸೆಸರ್ ಈ ಫೋನ್ಗಳಿಗೆ ಶಕ್ತಿಯುತ ಕಾರ್ಯಕ್ಷಮತೆ ನೀಡುತ್ತದೆ. 120Hz ರಿಫ್ರೆಶ್ ರೇಟ್ ಹೊಂದಿರುವ Super Retina XDR OLED ಡಿಸ್ಪ್ಲೇ ಉತ್ತಮ ವೀಕ್ಷಣಾ ಅನುಭವ ನೀಡುತ್ತದೆ.
ಹಿಂಭಾಗದಲ್ಲಿ ಮೂರು 48MP ಕ್ಯಾಮೆರಾಗಳಿದ್ದು, ಫೋಟೋ ಮತ್ತು ವಿಡಿಯೋ ಚಿತ್ರೀಕರಣಕ್ಕೆ ಉತ್ತಮ ಆಯ್ಕೆಯಾಗಿವೆ. ಮುಂಭಾಗದಲ್ಲಿ 18MP ಸೆಲ್ಫಿ ಕ್ಯಾಮೆರಾ ಮತ್ತು Centre Stage ಸೌಲಭ್ಯವಿದೆ. ಧೂಳು ಹಾಗೂ ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ನೀಡಲಾಗಿದೆ. ಒಟ್ಟಿನಲ್ಲಿ, ಪ್ರೀಮಿಯಂ ಐಫೋನ್ ಖರೀದಿಸಲು ಬಯಸುವವರಿಗೆ ಈ ಆಫರ್ ಉತ್ತಮ ಅವಕಾಶವಾಗಬಹುದು. ಆದರೆ ₹54,990 ಮತ್ತು ₹69,990 ಬೆಲೆಗಳು ಎಲ್ಲಾ ಆಫರ್ಗಳು, ಬ್ಯಾಂಕ್ ಕ್ಯಾಶ್ಬ್ಯಾಕ್ ಹಾಗೂ ಎಕ್ಸ್ಚೇಂಜ್ ಷರತ್ತುಗಳನ್ನು ಅನ್ವಯಿಸಿದ ನಂತರದ ಬೆಲೆಗಳಾಗಿದ್ದು, ಹಳೆಯ ಫೋನ್ ಇಲ್ಲದ ಗ್ರಾಹಕರಿಗೆ ಇದೇ ಬೆಲೆ ಸಿಗುವುದು ಖಚಿತವಲ್ಲ. ಖರೀದಿಸುವ ಮುನ್ನ Reliance Digital ಸ್ಟೋರ್ನಲ್ಲಿ ಆಫರ್ನ ಷರತ್ತುಗಳನ್ನು ಪರಿಶೀಲಿಸುವುದು ಉತ್ತಮವಾಗಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.