ರೀಲ್ಸ್‌ ಸ್ಕ್ರಾಲ್‌ ಮಾಡೋರಿಗೆ ಖುಷಿ ಸುದ್ದಿ, ಹೊಸ ಫೀಚರ್‌ ತರ್ತಿದೆ ಇನ್ಸ್ಟಾಗ್ರಾಮ್‌

Published : Jul 21, 2025, 03:12 PM ISTUpdated : Jul 21, 2025, 03:15 PM IST
Instagram

ಸಾರಾಂಶ

ಇನ್ಸ್ಟಾಗ್ರಾಮ್‌ ಬಳಕೆದಾರರಿಗೆ ಖುಷಿ ಸುದ್ದಿ ನೀಡಲು ಮುಂದಾಗಿದೆ. ಶೀಘ್ರವೇ ಅದ್ರ ಹೊಸ ಫೀಚರ್‌ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ. ಅದ್ರ ವಿಶೇಷತೆ ಏನು? ಮಾಹಿತಿ ಇಲ್ಲಿದೆ. 

ಇನ್ಸ್ಟಾಗ್ರಾಮ್ (Instagram)ನಲ್ಲಿ ರೀಲ್ಸ್ ನೋಡ್ತಾ ಇದ್ರೆ ಟೈಂ ಹೋಗಿದ್ದೇ ತಿಳಿಯೋದಿಲ್ಲ. ಮಕ್ಕಳಿಗೆ ಬೈಯ್ಯುವ ಪಾಲಕರು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಗಂಟೆಗಟ್ಟಲೆ ರೀಲ್ಸ್ ಸ್ಕ್ರಾಲ್ (Reels Scroll ) ಮಾಡ್ತಾರೆ. ಇಡೀ ದಿನ ರೀಲ್ಸ್ ಸ್ಕ್ರಾಲ್ ಮಾಡೋದು ಕಷ್ಟ. ಯಾಕೆಂದ್ರೆ ರೀಲ್ಸ್ ಸ್ಕ್ರಾಲ್ ಮಾಡೋಕೆ ಒಂದು ಕೈ ಬೇಕೇಬೇಕು. ಕೆಲ್ಸ ಮಾಡ್ತಾ, ಗಾಡಿ ಓಡಿಸ್ತಾ, ಅಡುಗೆ ಮಾಡ್ತಾ ರೀಲ್ಸ್ ನೋಡೋರಿಗೆ ಇದು ಸ್ವಲ್ಪ ಕಿರಿಕಿರಿಯಾಗಿತ್ತು. ಊಟ ಮಾಡ್ಬೇಕಿದ್ರೂ ರೀಲ್ಸ್ ನೋಡೋ ಆಸೆ. ಆದ್ರೆ ಸ್ಕ್ರಾಲ್ ಮಾಡೋದೇ ಕಷ್ಟ ಎನ್ನುವವರಿಗೆ ಇನ್ಮುಂದೆ ಈ ಟೆಕ್ಷನ್ ಇರೋದಿಲ್ಲ. ನೀವು ಕೈ ಬಳಸ್ದೆ ಆರಾಮವಾಗಿ ಒಂದಾದ್ಮೇಲೆ ಒಂದು ರೀಲ್ಸ್ ನೋಡ್ಬಹುದು. ರೀಲ್ಸ್ ನೋಡ್ತಾ ಸೋಮಾರಿಯಾಗಿದ್ದ ನಿಮ್ಮನ್ನು ಮತ್ತಷ್ಟು ಸೋಮಾರಿ ಮಾಡಿ, ಎಂಗೇಜ್ ಮಾಡೋಕೆ ಇನ್ಸ್ಟಾಗ್ರಾಮ್ ಹೊಸ ಫೀಚರ್ ತರ್ತಿದೆ. ಈಗಾಗಲೇ ಆ ಫೀಚರ್ ಟೆಸ್ಟಿಂಗ್ ನಡೆಯುತ್ತಿದೆ. ಟೆಸ್ಟಿಂಗ್ ಗಾಗಿ ಇನ್ಸ್ಟಾಗ್ರಾಮ್ ಕೆಲ ಬಳಕೆದಾರರಿಗೆ ಈ ಫೀಚರ್ ನೀಡಿದೆ.

ಇನ್ಸ್ಟಾಗ್ರಾಮ್ ತಂದ ಹೊಸ ಫೀಚರ್ : ಮೆಟಾ (Meta )ದ ಸೋಶಿಯಲ್ ಅಪ್ಲಿಕೇಶನ್ ಥ್ರೆಡ್ (Thread) ನಲ್ಲಿ ಇದ್ರ ಬಗ್ಗೆ ಬಳಕೆದಾರರೊಬ್ಬರು ಮಾಹಿತಿ ನೀಡಿದ್ದಾರೆ. ಥ್ರೆಡ್ ಬಳಕೆದಾರರ ಮಾಹಿತಿ ಪ್ರಕಾರ, ಇನ್ಸ್ಟಾಗ್ರಾಮ್ ಗ್ರಾಹಕರಿಗಾಗಿ ಆಟೋ ಸ್ಕ್ರಾಲ್ (Auto Scroll) ಫೀಚರ್ ಶುರು ಮಾಡಿದೆ. ಬಳಕೆದಾರರು ಇದನ್ನು ಕಡ್ಡಾಯವಾಗಿ ಬಳಸ್ಬೇಕು ಅಂತೇನಿಲ್ಲ. ಇದನ್ನು ಆನ್ – ಆಫ್ ಮಾಡುವ ಆಯ್ಕೆ ನಿಮಗೆ ಸಿಗಲಿದೆ. ಈಗಾಗಲೇ ಕೋಟ್ಯಾಂತರ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಇನ್ಸ್ಟಾಗ್ರಾಮ್ ನ ಈ ಹೊಸ ಫೀಚರ್, ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಇದು ಕೆಲ ಬಳಕೆದಾರರಿಗೆ ಲಭ್ಯವಿದ್ದ, ಕೆಲವೇ ದಿನಗಳಲ್ಲಿ ಎಲ್ಲ ಬಳಕೆದಾರರಿಗೆ ಸಿಗುವ ಸಾಧ್ಯತೆ ಇದೆ. ಒಂದ್ವೇಳೆ ಇನ್ಸ್ಟಾಗ್ರಾಮ್ ಟೆಸ್ಟಿಂಗ್ ಯಶಸ್ವಿಯಾದ್ರೆ, ರೀಲ್ಸ್ ಪ್ರೇಮಿಗಳು ಹ್ಯಾಂಡ್ಸ್ ಫ್ರೀ ಬ್ರೌಸರ್ ಅನುಭವವನ್ನು ಪಡೆಯಲಿದ್ದಾರೆ.

ಇನ್ಸ್ಟಾಗ್ರಾಮ್ನ ಆಟೋ ಸ್ಕ್ರಾಲ್ ಹೇಗೆ ಕೆಲಸ ಮಾಡುತ್ತೆ? : ಇನ್ಸ್ಟಾಗ್ರಾಮ್ ನಲ್ಲಿ ಈ ಫೀಚರ್ ಬೇಕು ಎನ್ನುವ ಬಳಕೆದಾರರು ಆಪ್ಷನ್ ಸೆಟ್ಟಿಂಗ್ ಗೆ ಹೋಗಿ ಇದನ್ನು ಆನ್ ಮಾಡ್ಬೇಕು. ಈ ಫೀಚರ್ ಆನ್ ಆದ್ಮೇಲೆ ಒಂದು ರೀಲ್ಸ್ ಮುಗಿದ ಮೇಲೆ ಇನ್ನೊಂದು ರೀಲ್ಸ್ ಪ್ಲೇ ಆಗುತ್ತೆ. ಇನ್ಸ್ಟಾಗ್ರಾಮ್ ಜಾರಿಗೆ ತರ್ತಿರುವ ಈ ಆಟೋ ಸ್ಕ್ರಾಲ್, ಎಂಗೇಜ್ಮೆಂಟ್ ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ.

ಆಟೋ ಸ್ಕ್ರಾಲ್ ಬಳಸೋದು ಹೇಗೆ? : ಈ ಫೀಚರ್ ಬಳಸಲು ನೀವು ಯಾವುದಾದ್ರೂ ಒಂದು ರೀಲ್ ಓಪನ್ ಮಾಡಿ. ಅದ್ರ ಕೆಳಗೆ ಬಲಭಾಗದಲ್ಲಿ ಗೋಚರಿಸುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಬೇಕು. ಇಲ್ಲಿ ಟ್ಯಾಪ್ ಮಾಡಿದ ತಕ್ಷಣ ಮೇಲೆ ಆಟೋ ಸ್ಕ್ರಾಲ್ ವೈಶಿಷ್ಟ್ಯವನ್ನು ನೀವು ಕಾಣ್ತೀರಿ. ಅದನ್ನು ಆನ್ ಮಾಡಿದ ತಕ್ಷಣ ಆಟೋ ಸ್ಕ್ರಾಲ್ ಶುರುವಾಗುತ್ತದೆ.

ಟೆಕ್ ಬರ್ನರ್ ಯೂಟ್ಯೂಬರ್ ಹಾಗೂ ವೈರಲ್ ಭಯಾನಿ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಇನ್ಸ್ಟಾಗ್ರಾಮ್ ಹೊಸ ಫೀಚರ್ ಬಗ್ಗೆ ಮಾಹಿತಿ ನೀಡಲಾಗಿದೆ. ಸದ್ಯ ಕೆಲ ಐಫೋನ್ ಬಳಕೆದಾರರಿಗೆ ಇದು ಲಭ್ಯವಾಗಿದೆ ಎನ್ನಲಾಗ್ತಿದೆ. ನೀವೂ ಐಫೋನ್ ಹೊಂದಿದ್ರೆ ಒಮ್ಮೆ ಇನ್ಸ್ಟಾಗ್ರಾಮ್ ಅಪ್ಡೇಟ್ ಮಾಡಿ ಚೆಕ್ ಮಾಡಿ. ಇಲ್ಲ ಅಂದ್ರೆ ಆಟೋ ಸ್ಕ್ರಾಲ್ ಬರೋವರೆಗೂ ವೇಟ್ ಮಾಡಿ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್