Mobile Exports ಪ್ರಸಕ್ತ ಹಣಕಾಸು ವರ್ಷದಲ್ಲಿ 43,500 ಕೋಟಿ ರೂ ಸ್ಮಾರ್ಟ್‌ಫೋನ್ ರಫ್ತು!

By Suvarna News  |  First Published Mar 27, 2022, 7:41 PM IST

*ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಉದ್ಯಮವು ಅದ್ಭುತ ಪ್ರದರ್ಶನ ತೋರಿದೆ
*ಸ್ಮಾರ್ಟ್‌ಫೋನ್ ರಫ್ತು ಹೆಚ್ಚಾಗಲು ಕೇಂದ್ರ ಸರ್ಕಾರ ಜಾರಿಗ ತಂದಿರುವ ಪಿಎಲ್ಐ ಯೋಜನೆ ನೆರವು
*ದಕ್ಷಿಣ ಏಷ್ಯಾ, ಯುರೋಪ್, ಮಧ್ಯ ಪ್ರಾಚ್ಯ ಸೇರಿ ಜಗತ್ತಿನ ಹಲವು ರಾಷ್ಟ್ರಗಳಿಗೆ ರಫ್ತು


ಕೋವಿಡ್ ಸಾಂಕ್ರಾಮಿಕ ಸಂಕಟದ ಸ್ಥಿತಿಯಲ್ಲೂ ಭಾರತದ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಭರವಸೆದಾಯಕ ಪ್ರದರ್ಶನವನ್ನು ತೋರಿಸಿದೆ. ಕೇಂದ್ರ ಸರ್ಕಾರದ ಉತ್ಪಾದನಾ- ಸಂಬಂಧಿ ಉತ್ತೇಜನ (Production Linked Incentive- PLI) ನೆರವಿನಿಂದಾಗಿ ಭಾರತದಿಂದ ಮೊಬೈಲ್‌ ಫೋನುಗಳ ರಫ್ತು ಪ್ರಮಾಣದ ಮೌಲ್ಯವು, 2022ರ ಮಾರ್ಚ್ 31ಕ್ಕೆ ಮುಕ್ತಾಯವಾಗುವ ಹಣಕಾಸು ವರ್ಷದಲ್ಲಿ 43,500 ಕೋಟಿ ರೂ. ಆಗಲಿದೆ. ಸ್ಮಾರ್ಟ್‌ಫೋನ್ ಉದ್ಯಮದ ಬೆಳವಣಿಗೆಗಳನ್ನು ವಿಶ್ಲೇಷಿಸುವ ಇಂಡಿಯಾ ಸೆಲ್ಯೂಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಶಿಯೇಷನ್ (India Cellular and Electronics Association-ICEA) ಈ ಮಾಹಿತಿಯನ್ನು ಹೊರ ಹಾಕಿದೆ. 2020-21ರ ಅಂತ್ಯಕ್ಕೆ 3.16 ಶತಕೋಟಿ ಡಾಲರ್ (ಸುಮಾರು 24,000 ಕೋಟಿ) ನಿಂದ ಈ ತಿಂಗಳ ಆರಂಭದಲ್ಲಿ 5.5 ಶತಕೋಟಿ ಡಾಲರ್ (ಸುಮಾರು 42,000 ಕೋಟಿ)ಗೆ ಒಂದು ವರ್ಷದಲ್ಲಿ ಭಾರತದಿಂದ ಮೊಬೈಲ್ ಫೋನ್‌ಗಳ ರಫ್ತು ಈಗಾಗಲೇ 75 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ICEA ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ರಫ್ತು ಉದ್ಯಮವು ಉತ್ತಮ ಪ್ರದರ್ಶನವನ್ನು ತೋರಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. 

ಪ್ರಸಕ್ತ ಹಣಕಾಸು ವರ್ಷವನ್ನು ಪೂರ್ಣಗೊಳಿಸುವ ಹೊತ್ತಿಗೆ ನಾವು ಸುಲಭವಾಗಿ 5.7 ಶತಕೋಟಿ ಡಾಲರ್ ರಫ್ತು ಮೌಲ್ಯವನ್ನು ದಾಟಿರುತ್ತೇವೆ ಎಂದು ICEA ಚೇರ್ಮನ್‌ರಾದ ಪಂಕಜ್ ಮೊಹಿಂದ್ರೋ (Pankaj Mohindroo) ಅವರು ತಿಳಿಸಿದ್ದಾರೆ.  ಮೊಬೈಲ್ ಫೋನ್ ವಲಯದ ಕಾರ್ಯಕ್ಷಮತೆಯು ಮೂರು ವಿನಾಶಕಾರಿ ಕೋವಿಡ್ ಅಲೆಗಳು, ಉದ್ಯೋಗಿಗಳ ನಷ್ಟ, ಲಾಕ್‌ಡೌನ್‌ಗಳು ಮತ್ತು ಚಿಪ್ಸ್ ಮತ್ತು ಸೆಮಿಕಂಡಕ್ಟರ್‌ಗಳ ತೀವ್ರ ಕೊರತೆ ಸೇರಿದಂತೆ ಪೂರೈಕೆ ಸರಪಳಿಯಲ್ಲಿನ ಅತ್ಯಂತ ಕೆಟ್ಟ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗಮನಾರ್ಹವಾದ ಸಾಧನೆಯೆನ್ನು ತೋರಿದೆ. ಅಂದ ಹಾಗೆ, ಭಾರತದ ಮೊಬೈಲ್ ಫೋನು ರಫ್ತು ಹೆಚ್ಚಳದಲ್ಲಿ ಸ್ಯಾಮ್ಸಂಗ್ (Samsung) ಮತ್ತು ಆಪಲ್ (Apple) ಫೋನುಗಳು ಪ್ರಮುಖ ಪಾತ್ರ ನಿರ್ವಹಿಸಿವೆ.

Tap to resize

Latest Videos

OnePlus Tablet: OLED ಡಿಸ್‌ಪ್ಲೇ, ಫಾಸ್ಟ್ ಚಾರ್ಜಿಂಗ್ ಸೇರಿ ಸೂಪರ್ಬ್ ಫೀಚರ್ಸ್

ಸ್ಮಾರ್ಟ್‌ಫೋನ್ ರಫ್ತುಗಳಲ್ಲಿನ ಅಭೂತಪೂರ್ವ ಹೆಚ್ಚಳವು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಸರ್ಕಾರಿ-ಉದ್ಯಮ ಪಾಲುದಾರಿಕೆಗೆ ಗೌರವವಾಗಿದೆ. ಸರ್ಕಾರವು ತನ್ನ ದೂರ ದೃಷ್ಟಿ ಮತ್ತು ಮೊಬೈಲ್ ಉದ್ಯಮದಲ್ಲಿ ನಂಬಿಕೆಯೊಂದಿಗೆ ಮುನ್ನಡೆಸಿದೆ. ಉದ್ಯಮವು ಪ್ರತಿಯಾಗಿ, ಆತ್ಮನಿರ್ಭರ್ ಭಾರತ್ ಅನ್ನು ಪ್ರಪಂಚಕ್ಕಾಗಿ ಮೇಕ್ ಇನ್ ಇಂಡಿಯಾ (Make In India) ಎಂದು ಮರುವ್ಯಾಖ್ಯಾನಿಸಿದೆ. ನಾವು ಈಗಷ್ಟೇ ಪ್ರಾರಂಭಿಸುತ್ತಿದ್ದೇವೆ ಎಂದು ಮೊಹಿಂದ್ರೂ ಅವರು ಹೇಳಿದ್ದಾರೆ. 

ಈ ಹಿಂದೆ, ಭಾರತದಿಂದ ಬಹುತೇಕ ಸ್ಮಾರ್ಟ್‌ಫೋನುಗಳ ದಕ್ಷಿಣ ಏಷ್ಯಾ ರಾಷ್ಟ್ರಗಳು, ಆಫ್ರಿಕಾ ಮತ್ತು ಮಧ್ಯ ಪ್ರಾಚ್ಯ ಹಾಗೂ ಈಸ್ಟರ್ನ್ ಯುರೋಪ್‌ನ ಕೆಲವು ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದವು. ಆದರೆ, ಇದದೀಗ ರಫ್ತು ವ್ಯಾಪ್ತಿಯ ಹಿಗ್ಗಿಕೊಂಡಿದೆ. ಈ ಎಲ್ಲ ರಾಷ್ಟ್ರಗಳ ಜತೆಗೆ ಯುರೋಪ್‌ನ ಅತ್ಯಂತ ಸ್ಪರ್ಧಾತ್ಮಕ ಮತ್ತು ಏಷ್ಯಾ ಮಾರುಕಟ್ಟೆಗೆ ಭಾರತದಲ್ಲಿ ತಯಾರಿಸಲಾದ ಫೋನುಗಳು ಲಗ್ಗೆ ಇಟ್ಟಿವೆ. 

ಈ ಮಾರುಕಟ್ಟೆಗಳು ಅತ್ಯುನ್ನತ ಗುಣಮಟ್ಟವನ್ನು ಬಯಸುತ್ತವೆ ಮತ್ತು ಭಾರತದಲ್ಲಿ ನೆಲೆಗೊಂಡಿರುವ ಉತ್ಪಾದನಾ ಘಟಕಗಳು ಈ ಗುಣಮಟ್ಟದ ಬೇಡಿಕೆಯನ್ನು ಪೂರೈಸುತ್ತೇವೆ ಎಂಬುದರಲ್ಲಿ ಯಾವುದೇ ಅನುಮಾನಗಳು ಉಳಿದಿಲ್ಲ ಎಂದು ICEA ಹೇಳಿದೆ. ಜಾಗತಿಕ ಮೌಲ್ಯ ಸರಪಳಿಗಳನ್ನು ಭಾರತಕ್ಕೆ ವರ್ಗಾಯಿಸುವ ಮತ್ತು ಜಾಗತಿಕ ರಫ್ತುಗಳಲ್ಲಿ ಪಾಲನ್ನು ಹೆಚ್ಚಿಸುವ ಪ್ರಮುಖ PLI ಯೋಜನೆಯ ಉದ್ದೇಶಗಳನ್ನು ಸಂಪೂರ್ಣವಾಗಿ ಸಾಧಿಸಲಾಗಿದೆ ಎಂದು ICEA ಅಭಿಪ್ರಾಯಪಟ್ಟಿದೆ.

Realme GT 2 Pro ಏಪ್ರಿಲ್ 7ಕ್ಕೆ ಭಾರತದಲ್ಲಿ ಲಾಂಚ್: ಬೆಲೆ ಎಷ್ಟು?

ಸ್ಮಾರ್ಟ್‌ಫೋನ್ ಪಿಎಲ್‌ಐ ಯೋಜನೆಯಡಿಯಲ್ಲಿ, ಸರ್ಕಾರವು 2020-21 ಮತ್ತು 2025-26 ರ ನಡುವೆ 40,951 ಕೋಟಿ ರೂ.ಗಳನ್ನು ನಿಗದಿಪಡಿಸಿದೆ, ಇದರಲ್ಲಿ ಭಾಗವಹಿಸುವ ಕಂಪನಿಗಳು ತಮ್ಮ ಉತ್ಪಾದನಾ ಗುರಿಗಳನ್ನು ಪೂರೈಸಲು 6 ವರ್ಷಗಳಲ್ಲಿ ಯಾವುದೇ 5 ವರ್ಷಗಳನ್ನು ಆಯ್ಕೆ ಮಾಡಲು ಅನುಮತಿಸಲಾಗಿದೆ.

click me!