ಸ್ಪ್ಯಾಮ್ ಕರೆ ಮಾಡುವವರಿಗೆ ನಿಮ್ಮ ನಂಬರ್ ಸಿಗುವುದಾದರೂ ಹೇಗೆ? ಇಲ್ಲಿದೆ ಅಸಲಿ ಕಾರಣ!

Published : Nov 25, 2026, 05:05 PM IST
Spam Calls

ಸಾರಾಂಶ

Spam Calls: ನೀವು ನಂಬರ್ ನೀಡದ ಕಂಪನಿಗಳಿಂದಲೂ ಸ್ಪ್ಯಾಮ್ ಕರೆಗಳು ಬರುತ್ತಿವೆಯೇ? ಯಾಕೆ ಹೀಗೆ ಆಗುತ್ತದೆ ಎಂದು ನೀವು ಎಂದಾದರೂ ಯೋಚನೆ ಮಾಡಿದ್ದೀರಾ? ಡೇಟಾ ಲೀಕ್, ಆ್ಯಪ್ ಪರ್ಮಿಷನ್, ನಕಲಿ ಆಫರ್‌ಗಳು ಹಾಗೂ ಆಟೋ ಡಯಲರ್‌ಗಳ ಮೂಲಕ ನಿಮ್ಮ ಮೊಬೈಲ್ ನಂಬರ್ ಸ್ಪ್ಯಾಮ್ ಕಾಲರ್‌ಗಳ ಕೈಗೆ ಹೇಗೆ ತಲುಪುತ್ತದೆ ಎಂಬುದನ್ನು ತಿಳಿಯಿರಿ.

ಸ್ಪ್ಯಾಮ್ ಕರೆ ಮಾಡುವವರಿಗೆ ನಿಮ್ಮ ನಂಬರ್ ಸಿಗೋದು ಹೇಗೆ?

ಕೆಲವೊಮ್ಮೆ ಬ್ಯಾಂಕ್‌ನಿಂದ ಸಾಲದ ಆಫರ್, ಇನ್ನು ಕೆಲವೊಮ್ಮೆ ಲಾಟರಿ ಗೆದ್ದಿರುವುದಾಗಿ ಹೇಳಿಕೆ, ಮತ್ತೊಮ್ಮೆ ಅಪರಿಚಿತ ಕಂಪನಿಗಳಿಂದ ವಿಶೇಷ ಸ್ಕೀಮ್‌ಗಳ ಆಮಿಷ... ಹೀಗೆ ಮೊಬೈಲ್‌ಗೆ ಬರುವ ಅನಗತ್ಯ ಕರೆಗಳು ಈಗ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ನೀವು ಯಾವುದೋ ಮುಖ್ಯ ಕೆಲಸದಲ್ಲಿ ಬ್ಯುಸಿಯಾಗಿರುವಾಗಲೇ ಅಪರಿಚಿತ ನಂಬರ್‌ನಿಂದ ಕರೆ ಬರಬಹುದು. ನೀವು ಎಂದಿಗೂ ನಿಮ್ಮ ನಂಬರ್ ನೀಡದ ಕಂಪನಿಗಳು ಅಥವಾ ವ್ಯಕ್ತಿಗಳ ಬಳಿಯೂ ನಿಮ್ಮ ವೈಯಕ್ತಿಕ ಮಾಹಿತಿ ಇರುವುದು ಅಚ್ಚರಿ ಮೂಡಿಸುತ್ತದೆ. ಹಾಗಾದರೆ, ನಿಮ್ಮ ಮೊಬೈಲ್ ನಂಬರ್ ಸ್ಪ್ಯಾಮ್ ಕರೆ ಮಾಡುವವರ ಕೈಗೆ ಸಿಗುವುದಾದರೂ ಹೇಗೆ? ಇದರ ಹಿಂದೆ ಡೇಟಾ ಲೀಕ್‌ನಿಂದ ಹಿಡಿದು ಆನ್‌ಲೈನ್ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳವರೆಗೆ ಹಲವು ಕಾರಣಗಳಿರಬಹುದು. ಹಾಗಾದರೆ ಸ್ಪ್ಯಾಮ್ ಕರೆ ಮಾಡುವವರಿಗೆ ನಿಮ್ಮ ನಂಬರ್ ಹೇಗೆ ಸಿಗುತ್ತದೆ ಎಂಬುದನ್ನು ತಿಳಿಯೋಣ.

ಸ್ಪ್ಯಾಮ್ ಕರೆ ಮಾಡುವವರಿಗೆ ನಿಮ್ಮ ನಂಬರ್ ಸಿಗುವುದು ಹೇಗೆ?

ನೀವು ಯಾವುದಾದರೂ ವೆಬ್‌ಸೈಟ್ ಅಥವಾ ಶಾಪಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಾಗ ಹೆಸರು, ಇಮೇಲ್, ಮೊಬೈಲ್ ನಂಬರ್ ಮತ್ತು ಪಾಸ್‌ವರ್ಡ್‌ನಂತಹ ಮಾಹಿತಿಯನ್ನು ನೀಡುತ್ತೀರಿ. ಕಂಪನಿಗಳು ಈ ಡೇಟಾವನ್ನು ತಮ್ಮ ಬಳಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಆದರೆ, ಆ ವೆಬ್‌ಸೈಟ್ ಮೇಲೆ ಸೈಬರ್ ದಾಳಿ ನಡೆದರೆ ನಿಮ್ಮ ಮಾಹಿತಿ ಸೋರಿಕೆಯಾಗಬಹುದು. ಬಳಿಕ ಸೈಬರ್ ಅಪರಾಧಿಗಳು ಈ ಡೇಟಾವನ್ನು ಮಾರಾಟ ಮಾಡಬಹುದು ಅಥವಾ ಬೇರೆಯವರಿಗೆ ಹಂಚಿಕೊಳ್ಳಬಹುದು. ಈ ಮೂಲಕ ನಿಮ್ಮ ಮೊಬೈಲ್ ನಂಬರ್ ಸ್ಪ್ಯಾಮ್ ಕರೆ ಮಾಡುವವರ ಕೈಗೆ ತಲುಪಬಹುದು.

ಆ್ಯಪ್‌ಗಳಿಗೆ ನೀಡುವ ಪರ್ಮಿಷನ್ ಕೂಡ ಕಾರಣವಾಗಬಹುದು

ಶಾಪಿಂಗ್ ಅಥವಾ ಇತರ ಅಗತ್ಯಗಳಿಗಾಗಿ ಆ್ಯಪ್ ಡೌನ್‌ಲೋಡ್ ಮಾಡುವಾಗ, ನಾವು ಯೋಚಿಸದೆ ಎಲ್ಲಾ ಪರ್ಮಿಷನ್‌ಗಳನ್ನು ನೀಡಿಬಿಡುತ್ತೇವೆ. ಕೆಲವು ಆ್ಯಪ್‌ಗಳು ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿಯನ್ನು ಕೇಳುತ್ತವೆ. ಒಂದು ಆ್ಯಪ್‌ಗೆ ನಿಮ್ಮ ಮೊಬೈಲ್ ನಂಬರ್ ಅಥವಾ ಇತರ ವೈಯಕ್ತಿಕ ಮಾಹಿತಿಯ ಆಕ್ಸೆಸ್ ಸಿಕ್ಕರೆ, ಅದರ ಪ್ರೈವಸಿ ಪಾಲಿಸಿಯನ್ನು ಅವಲಂಬಿಸಿ ಈ ಡೇಟಾವನ್ನು ಥರ್ಡ್ ಪಾರ್ಟಿಗಳೊಂದಿಗೆ ಹಂಚಿಕೊಳ್ಳಬಹುದು. ಡೇಟಾ ಬ್ರೋಕರ್‌ಗಳು ವಿವಿಧ ಮೂಲಗಳಿಂದ ಇಂತಹ ಮಾಹಿತಿಯನ್ನು ಸಂಗ್ರಹಿಸಿ ಮುಂದೆ ಮಾರಾಟ ಮಾಡುತ್ತಾರೆ.

ಉದ್ಯೋಗ ಮತ್ತು ಆಫರ್‌ಗಳ ಹೆಸರಲ್ಲೂ ಮಾಹಿತಿ ಸೋರಿಕೆಯಾಗಬಹುದು

ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಜನರು ತಮ್ಮ ಹೆಸರು, ಫೋನ್ ನಂಬರ್, ಇಮೇಲ್ ಮತ್ತು ಕೆಲಸಕ್ಕೆ ಸಂಬಂಧಿಸಿದ ಇತರ ಮಾಹಿತಿಯನ್ನು ಭರ್ತಿ ಮಾಡುತ್ತಾರೆ. ಕೆಲವು ನಕಲಿ ಜಾಬ್ ಲಿಸ್ಟಿಂಗ್‌ಗಳು ಇದೇ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತವೆ. ಬಹುಮಾನ ಅಥವಾ ಪ್ರಚಾರದ ಆಫರ್‌ಗಳಿಗಾಗಿ ರಿಜಿಸ್ಟರ್ ಮಾಡುವಾಗಲೂ ನಿಮ್ಮ ನಂಬರ್ ಮಾರ್ಕೆಟಿಂಗ್ ಪಾಲುದಾರರಿಗೆ ತಲುಪಬಹುದು. ಕೆಲವೊಮ್ಮೆ ವೆಬ್‌ಸೈಟ್‌ನ ನಿಯಮಗಳು ಮತ್ತು ಷರತ್ತುಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿರುತ್ತಾರೆ. ಆದರೆ, ಹೆಚ್ಚಿನವರು ಅವುಗಳನ್ನು ಓದದೆ ಒಪ್ಪಿಗೆ ನೀಡುತ್ತಾರೆ.

ಆಟೋ ಡಯಲರ್‌ಗಳಿಂದಲೂ ಸ್ಪ್ಯಾಮ್ ಕರೆಗಳು ಬರಬಹುದು

ಪ್ರತಿಯೊಂದು ಸ್ಪ್ಯಾಮ್ ಕರೆಗೂ ನಿಮ್ಮ ಡೇಟಾ ಲೀಕ್ ಆಗಿರಲೇಬೇಕು ಎಂದಿಲ್ಲ. ಕೆಲವೊಮ್ಮೆ ಆಟೋ ಡಯಲರ್ ಸಾಫ್ಟ್‌ವೇರ್ ಸಾವಿರಾರು ರ್ಯಾಂಡಮ್ ನಂಬರ್‌ಗಳಿಗೆ ಏಕಕಾಲದಲ್ಲಿ ಕರೆ ಮಾಡುತ್ತದೆ. ಯಾರು ಈ ಕರೆಗಳನ್ನು ಸ್ವೀಕರಿಸುತ್ತಾರೋ, ಅವರ ನಂಬರ್‌ಗಳನ್ನು ಆಕ್ಟಿವ್ ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಇದಲ್ಲದೆ, ಸೋಶಿಯಲ್ ಮೀಡಿಯಾ, ಜಾಬ್ ಪೋರ್ಟಲ್‌ಗಳು ಮತ್ತು ವಿವಿಧ ದಾಖಲೆಗಳಲ್ಲಿರುವ ನಂಬರ್‌ಗಳನ್ನು ಸ್ಕ್ರ್ಯಾಪಿಂಗ್ ಸಾಫ್ಟ್‌ವೇರ್ ಮೂಲಕವೂ ಸಂಗ್ರಹಿಸಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್‌ : ಕೇವಲ 50 ರೂಪಾಯಿಗೆ ಇಡೀ ರಾತ್ರಿ ಖರ್ಚಿಲ್ದೆ ಡೇಟಾ ಬಳಸ್ಬಹುದು
ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್, ಜಸ್ಟ್ ₹15 ನಿಂದ ಆರಂಭ