
ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಜಿಯೋ, ಗ್ರಾಹಕರಿಗಾಗಿ ಹೊಸ 50 ರೂಪಾಯಿ ಪ್ರೀಪೇಯ್ಡ್ ಡೇಟಾ ಪ್ಲಾನ್ ಪರಿಚಯಿಸಿದೆ. ನವೆಂಬರ್ 26ರಿಂದ ಈ ಹೊಸ ಪ್ಲಾನ್ ರೀಚಾರ್ಜ್ಗೆ ಲಭ್ಯವಾಗಲಿದೆ. ವಿಶೇಷವೆಂದರೆ, ಈ ಪ್ಲಾನ್ನಲ್ಲಿ ಬಳಕೆದಾರರು ರಾತ್ರಿ ಪೂರ್ತಿ ಅನ್ಲಿಮಿಟೆಡ್ ಮೊಬೈಲ್ ಡೇಟಾ ಬಳಸಬಹುದು. ಜಿಯೋ ತನ್ನ ನ್ಯೂ ಇಯರ್ ಆಫರ್ ಅಡಿಯಲ್ಲಿ ಈ ಹೊಸ ಪ್ಲಾನ್ ಪರಿಚಯಿಸಿದೆ.
ಜಿಯೋ ಪರಿಚಯಿಸಿರುವ 50 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ಒಂದು ಡೇಟಾ ಪ್ಯಾಕ್ . ಈ ಪ್ಲಾನ್ನಲ್ಲಿ ಪ್ರತಿದಿನ ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಅನ್ಲಿಮಿಟೆಡ್ ಡೇಟಾ ಸೌಲಭ್ಯ ಸಿಗಲಿದೆ. ಅಂದರೆ, ರಾತ್ರಿ ಐದು ಗಂಟೆಗಳ ಕಾಲ ಯಾವುದೇ ಡೇಟಾ ಮಿತಿಯಿಲ್ಲದೆ ಇಂಟರ್ನೆಟ್ ಬಳಸಬಹುದು. ಈ ಪ್ಲಾನ್ನ ವ್ಯಾಲಿಡಿಟಿ 28 ದಿನಗಳಾಗಿದ್ದು, ನವೆಂಬರ್ 26ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ.
ಈ ಪ್ಲಾನ್ನ ಮತ್ತೊಂದು ವಿಶೇಷವೆಂದರೆ, 4G ಮತ್ತು 5G ಎರಡೂ ನೆಟ್ವರ್ಕ್ಗಳಲ್ಲಿ ಅನ್ಲಿಮಿಟೆಡ್ ಡೇಟಾ ಬಳಸಬಹುದು. ನೀವು 4G ನೆಟ್ವರ್ಕ್ ವ್ಯಾಪ್ತಿಯಲ್ಲಿದ್ದರೆ ಅನ್ಲಿಮಿಟೆಡ್ 4G ಡೇಟಾ ಹಾಗೂ 5G ನೆಟ್ವರ್ಕ್ ವ್ಯಾಪ್ತಿಯಲ್ಲಿದ್ದರೆ ಅನ್ಲಿಮಿಟೆಡ್ 5G ಡೇಟಾ ಸೌಲಭ್ಯ ಪಡೆಯಬಹುದು.
ಕಂಪನಿಯ ಪ್ರಕಾರ, ಡೌನ್ಲೋಡ್ಗೆ ಯಾವುದೇ ಡೇಟಾ ಮಿತಿ ಇರುವುದಿಲ್ಲ. ಅಷ್ಟೇ ಅಲ್ಲ, ಇಂಟರ್ನೆಟ್ ವೇಗವನ್ನು ಕಡಿತಗೊಳಿಸುವ ಥ್ರಾಟ್ಲಿಂಗ್ ಕೂಡ ಇರುವುದಿಲ್ಲ. ಹೀಗಾಗಿ ರಾತ್ರಿ ಹೆಚ್ಚು ಇಂಟರ್ನೆಟ್ ಬಳಸುವವರಿಗೆ ಈ ಪ್ಲಾನ್ ಬೆಸ್ಟ್.
ಯಾರಿಗೆ ಹೆಚ್ಚು ಪ್ರಯೋಜನ?
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ತಡರಾತ್ರಿವರೆಗೂ ಓದುವ ವಿದ್ಯಾರ್ಥಿಗಳು ಹಾಗೂ ಆನ್ಲೈನ್ ಗೇಮಿಂಗ್ ಆಡುವವರಿಗೆ ಈ ಪ್ಲಾನ್ ಹೆಚ್ಚು ಉಪಯುಕ್ತವಾಗಬಹುದು. ರಾತ್ರಿ ಸಿನಿಮಾ, ವೆಬ್ಸಿರೀಸ್ ಡೌನ್ಲೋಡ್ ಮಾಡುವವರು ಹಾಗೂ ದೊಡ್ಡ ಫೈಲ್ಗಳನ್ನು ಡೌನ್ಲೋಡ್ ಮಾಡುವವರಿಗೂ ಅನುಕೂಲವಾಗಲಿದೆ. ಇದರ ಮತ್ತೊಂದು ಲಾಭವೆಂದರೆ, ರಾತ್ರಿ ಬಳಸುವ ಡೇಟಾ ನಿಮ್ಮ ದೈನಂದಿನ ಡೇಟಾ ಬಳಕೆಯ ಮೇಲೆ ಪರಿಣಾಮ ಬೀರೋದಿಲ್ಲ. ಹೀಗಾಗಿ ಹಗಲಿನಲ್ಲಿ ಬಳಸಬೇಕಾದ ಡೇಟಾವನ್ನು ಉಳಿಸಿಕೊಳ್ಳಬಹುದು.
ಜಿಯೋ ಹಳೆ ಪ್ಲಾನ್
ಜಿಯೋ ಈಗಾಗಲೇ 15 ರೂಪಾಯಿ ಮತ್ತು 49 ರೂಪಾಯಿಗಳ ಅನ್ಲಿಮಿಟೆಡ್ ಡೇಟಾ ಪ್ಯಾಕ್ಗಳನ್ನು ನೀಡುತ್ತಿದೆ. ಆದರೆ, ಈ ಎರಡೂ ಪ್ಲಾನ್ಗಳ ವ್ಯಾಲಿಡಿಟಿ ಕೇವಲ ಒಂದು ದಿನ ಮಾತ್ರ. ಇನ್ನು 11 ರೂಪಾಯಿಯ ಮತ್ತೊಂದು ಡೇಟಾ ಪ್ಯಾಕ್ ಕೂಡ ಇದ್ದು, ಇದರಲ್ಲಿ ಒಂದು ಗಂಟೆ ಮಾತ್ರ ಅನ್ಲಿಮಿಟೆಡ್ ಡೇಟಾ ಬಳಸಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.