
ವಿಶ್ವಾದ್ಯಂತ 1.8 ಶತಕೋಟಿ ಜಿಮೇಲ್ ಬಳಕೆದಾರರನ್ನು ಹೊಂದಿರುವ ಗೂಗಲ್ ಕಂಪನಿಯು, ಇತ್ತೀಚೆಗೆ ಎಐಗೆ ಪ್ರಗತಿಗೆ ಸಂಬಂಧಪಟ್ಟಂತೆ ಹೊಸ ಸೈಬರ್ ಸೆಕ್ಯುರಿಟಿ ವಾರ್ನಿಂಗ್ ನೀಡಿದೆ.
“ಪರೋಕ್ಷ ಪ್ರಾಂಪ್ಟ್ ಇಂಜೆಕ್ಷನ್‌ಗಳು” ವಿಚಾರವಾಗಿ ಈ ಬೆದರಿಕೆಯು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ, ವ್ಯವಹಾರಗಳು, ಸರ್ಕಾರಗಳಿಗೂ ಪರಿಣಾಮ ಬೀರುತ್ತದೆ. ಗೂಗಲ್‌ನ ವಿವರವಾದ ಬ್ಲಾಗ್ ಪೋಸ್ಟ್‌ನಲ್ಲಿ, “AI ಬಳಕೆ ಹೆಚ್ಚಾಗುತ್ತಿದೆ, AI ಸಿಸ್ಟಮ್‌ನ್ನು ಸ್ವತಃ ಕುಶಲತೆಯಿಂದ ದಾಳಿ ಮಾಡುವ ಹೊಸ ಬೆದರಿಕೆ ಹೆಚ್ಚಾಗುತ್ತಿದೆ. ಈ ದಾಳಿಯ ವಿಧಾನವೆಂದರೆ ಅಪರೋಕ್ಷ ಪ್ರಾಂಪ್ಟ್ ಇಂಜೆಕ್ಷನ್‌ಗಳು” ಎಂದು ಹೇಳಲಾಗಿದೆ. ಹಾನಿಕಾರಕ ಕಮಾಂಡ್ಸ್‌ಗಳನ್ನು AI ಪ್ರಾಂಪ್ಟ್‌ಗೆ ನೇರವಾಗಿ ಸೇರಿಸುವ ಬದಲು, ಹ್ಯಾಕರ್‌ಗಳು ಇಮೇಲ್‌ಗಳು, ದಾಖಲೆಗಳು ಅಥವಾ ಕ್ಯಾಲೆಂಡರ್ ಇನ್ವಿಟೇಶನ್‌ನಲ್ಲಿ ದುರುದ್ದೇಶಪೂರಿತ ಸೂಚನೆಗಳನ್ನು ಹೈಡ್ ಮಾಡುತ್ತಾರೆ. ಹೈಡ್ ಮಾಡಿರುವ AI ಯನ್ನು ಬಳಕೆದಾರರ ಡೇಟಾವನ್ನು ಸೋರಿಕೆ ಮಾಡಲು ಅಥವಾ ಇತರ ಕೆಡಕು ಕಾರ್ಯಕ್ಕಾಗಿ ಒತ್ತಾಯಿಸಬಹುದು ಎನ್ನಲಾಗಿದೆ.
ಈ ಬೆದರಿಕೆಯು ನಿಜಕ್ಕೂ ಎಲ್ಲರಿಗೂ ಅಪಾಯ ಮಾಡುತ್ತದೆ ಎಂದು ಗೂಗಲ್ ವಾರ್ನ್ ಮಾಡಿದೆ. “ಸರ್ಕಾರಗಳು, ಬ್ಯುಸಿನೆಸ್, ಜನರು AI ಯನ್ನು ಹೆಚ್ಚಿನ ಕೆಲಸಕ್ಕಾಗಿ ಅಳವಡಿಸಿಕೊಳ್ಳುತ್ತಾರೆ. ಇದು ಉದ್ಯಮಕ್ಕೆ ಹೆಚ್ಚು ಪ್ರಸ್ತುತವಾಗುತ್ತದೆ, ತಕ್ಷಣಕ್ಕೆ ಗಮನ ಕೊಡಬೇಕು, ದೃಢವಾದ ಭದ್ರತಾ ಕ್ರಮಗಳಿಗೋಸ್ಕರ ಒತ್ತಾಯಿಸುತ್ತದೆ” ಎಂದಿದೆ.
ಹ್ಯಾಕರ್‌ಗಳು ಗೂಗಲ್ AI ಜೆಮಿನಿಯನ್ನು ಪಾಸ್‌ವರ್ಡ್ ಕಳ್ಳತನ ಮಾಡಲು ಬಳಸುತ್ತಾರೆ. ಟೆಕ್ ತಜ್ಞ ಸ್ಕಾಟ್ ಪೋಲ್ಡರ್‌ಮನ್, ಹ್ಯಾಕರ್‌ಗಳು ಗೂಗಲ್‌ನ AI ಜೆಮಿನಿಯನ್ನು ಯೂಸರ್ಸ್ ಮಾಹಿತಿಯನ್ನು ಕಳ್ಳತನ ಮಾಡಲು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹ್ಯಾಕರ್‌ಗಳು ಹಿಡನ್ ಕಮಾಂಡ್ಸ್‌ಗಳನ್ನು ಬಳಸಿ ಇಮೇಲ್‌ಗಳನ್ನು ಕಳುಹಿಸುತ್ತಾರೆ, ಇದು ಯೂಸರ್ಸ್‌ಗೆ ತಿಳಿಯದಂತೆ ಪಾಸ್‌ವರ್ಡ್‌ಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುವುದು. ಜನರು AI ಯನ್ನು ಡೇಟಿಂಗ್, ರಿಲೇಶನ್‌ಶಿಪ್ ಸಲಹೆಗಾಗಿ ಹೆಚ್ಚಾಗಿ ಬಳಸುತ್ತಿರುವ ಸಂದರ್ಭದಲ್ಲಿ ಈ ಎಚ್ಚರಿಕೆ ಬರುತ್ತದೆ. ಸ್ಕಾಟ್ ಹೇಳುವಂತೆ, ಈ ಸ್ಕ್ಯಾಮ್ ಹಳೆಯ ಸ್ಕ್ಯಾಮ್‌ಗಳಿಗಿಂತ ಭಿನ್ನವಾಗಿದೆ ಎಂದಿದ್ದಾರೆ. ಇದು “AI ವಿರುದ್ಧ AI” ಆಗಿದ್ದು, ಈ ರೀತಿಯಂತೆ ಇನ್ನಷ್ಟು ದಾಳಿ ಆಗಬಹುದು.
ಹಿಡನ್ ಕಮಾಂಡ್ಸ್ AI ಯನ್ನು ತನ್ನ ವಿರುದ್ಧವೇ ಕೆಲಸ ಮಾಡೋ ಥರ ಮಾಡುತ್ತದೆ. ಆಗ ಯೂಸರ್ಸ್ ತಮ್ಮ ಲಾಗಿನ್ ವಿವರಗಳನ್ನು ಅವಶ್ಯಕತೆಯೇ ಇಲ್ಲದೆ ಬಹಿರಂಗಪಡಿಸುವಂತೆ ಮಾಡುತ್ತವೆ ಎಂದಿದ್ದಾರೆ. ಈ ಸ್ಕ್ಯಾಮ್‌ಗೆ ಕೆಲಸ ಮಾಡಲು ಯಾವುದೇ ಲಿಂಕ್ ಕ್ಲಿಕ್ ಮಾಡುವ ಅಗತ್ಯವಿಲ್ಲ, ಜೆಮಿನಿಯೇ ಯೂಸರ್ಸ್ ಅಪಾಯದಲ್ಲಿದ್ದಾರೆ ಎಂದು ಎಚ್ಚರಿಕೆ ಕೊಟ್ಟಾಗ ಹ್ಯಾಕ್ ಆಗುವುದು ಎಂದಿದ್ದಾರೆ. ಗೂಗಲ್ ಎಂದಿಗೂ ಲಾಗಿನ್ ವಿವರಗಳನ್ನು ಕೇಳುವುದಿಲ್ಲ ಅಥವಾ ಜೆಮಿನಿಯ ಮೂಲಕ ಸ್ಕ್ಯಾಮ್ ಬಗ್ಗೆ ಯೂಸರ್ಸ್‌ಗೆ ಎಚ್ಚರಿಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.