
ಸ್ಯಾಮ್‌ಸಂಗ್‌ನ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಪ್ರಸ್ತುತ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ರಿಯಾಯಿತಿಯೊಂದಿಗೆ ಲಭ್ಯವಿದೆ. ಈ ಕೊಡುಗೆಯು ಫೋನ್‌ನ ಬೆಲೆಯನ್ನು 80,000 ರೂ.ಗಿಂತ ಕಡಿಮೆಗೆ ತಂದಿದ್ದು, ಬಿಡುಗಡೆ ಬೆಲೆಯಾದ 1,29,999 ರೂ.ಗಿಂತ ಸುಮಾರು 50,000 ರೂ. ಉಳಿತಾಯವಾಗುವುದು.
ಒಂದು ವರ್ಷಕ್ಕಿಂತ ಹೆಚ್ಚು ಹಳೆಯದಾದರೂ, ಸ್ಯಾಮ್‌ಸಂಗ್‌ನ ದೀರ್ಘಕಾಲೀನ ಸಾಫ್ಟ್‌ವೇರ್ ಅಪ್ಡೇಟ್‌ನಿಂದಾಗಿ ಈ ಫೋನ್ ಇನ್ನೂ ಉನ್ನತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಗುರುತಿಸಿಕೊಂಡಿದೆ. 12GB RAM ಮತ್ತು 256GBಯ ಅಮೆಜಾನ್‌ನಲ್ಲಿ 80,490 ರೂ.ಗೆ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ 81,980 ರೂ.ಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ ಬಳಕೆದಾರರು 4,000 ರೂ. ತ್ವರಿತ ರಿಯಾಯಿತಿಯೊಂದಿಗೆ ಬೆಲೆಯನ್ನು ಮತ್ತಷ್ಟು ಕಡಿಮೆಗೊಳಿಸಬಹುದು.
ಗ್ಯಾಲಕ್ಸಿ ಎಸ್ 24 ಅಲ್ಟ್ರಾ 6.8 ಇಂಚಿನ Quad HD+ ಡೈನಾಮಿಕ್ AMOLED ಡಿಸ್ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ದರ ಮತ್ತು 2,600 nits ಗರಿಷ್ಠ ಬ್ರೈಟ್ ನೀಡುತ್ತದೆ. ಗೊರಿಲ್ಲಾ ಗ್ಲಾಸ್ ಆರ್ಮರ್ ರಕ್ಷಣೆಯೊಂದಿಗೆ, ಈ ಡಿಸ್ಪ್ಲೇ 75% ಕಡಿಮೆ ಪ್ರತಿಫಲನ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಮತ್ತು ಅಡ್ರಿನೊ 740 GPUನಿಂದ ಚಾಲಿತವಾಗಿರುವ ಈ ಫೋನ್, LPDDR5 RAM ಮತ್ತು UFS 4.0 ಸಂಗ್ರಹಣೆಯೊಂದಿಗೆ ವೇಗದ ಡೇಟಾ ವರ್ಗಾವಣೆಯನ್ನು ಖಾತರಿಪಡಿಸುತ್ತದೆ.
Samsung Galaxy S24 Ultra iPhone 15 Plus OPPO K13 5G Massive Discounts on Amazon Flipkart
ಆಪಲ್ ಐಫೋನ್ 15 ಪ್ಲಸ್‌ನಲ್ಲಿ ಆಕರ್ಷಕ ರಿಯಾಯಿತಿ: ಐಫೋನ್ 15 ಪ್ಲಸ್ (128GB) ಸಹ ಭಾರಿ ರಿಯಾಯಿತಿಯೊಂದಿಗೆ ಲಭ್ಯವಿದೆ. ಈ ಫೋನ್‌ನ ಮೂಲ ಬೆಲೆ 79,900 ರೂ. ಆಗಿದ್ದು, ರಿಯಾಯಿತಿಯ ನಂತರ 71,999 ರೂ.ಗೆ ಖರೀದಿಸಬಹುದು. ಜೊತೆಗೆ, ಗ್ರಾಹಕರು ಸುಲಭ ಕಂತುಗಳ ಆಯ್ಕೆಯನ್ನು ಸಹ ಬಳಸಿಕೊಳ್ಳಬಹುದು.OPPO K13 5Gನಲ್ಲಿ ಭರ್ಜರಿ ಕೊಡುಗೆ: ಫ್ಲಿಪ್‌ಕಾರ್ಟ್‌ನಲ್ಲಿ OPPO K13 5G (8+256GB) ರೂಪಾಂತರವು 24,999 ರೂ. ಮೂಲ ಬೆಲೆಯಿಂದ ಕೇವಲ 19,999 ರೂ.ಗೆ ಲಭ್ಯವಿದೆ. ಇದರ ಜೊತೆಗೆ, ಬ್ಯಾಂಕ್ ಕೊಡುಗೆಗಳ ಮೂಲಕ ಹೆಚ್ಚಿನ ಉಳಿತಾಯವನ್ನು ಪಡೆಯಬಹುದು.ಈ ಅದ್ಭುತ ಡೀಲ್‌ಗಳನ್ನು ಬಳಸಿಕೊಂಡು ನಿಮ್ಮ ಆಯ್ಕೆಯ ಸ್ಮಾರ್ಟ್‌ಫೋನ್‌ನ್ನು ಇಂದೇ ಖರೀದಿಸಿ!
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.