Google Pixel Notepad ಶೀಘ್ರದಲ್ಲೇ ಗೂಗಲ್‌ನಿಂದ ಪಿಕ್ಸೆಲ್ ನೋಟ್‌ಪ್ಯಾಡ್ ಫೋಲ್ಡೆಬಲ್ ಫೋನ್, ಇದರಲ್ಲಿದೆ ಹಲವು ವಿಶೇಷತೆ!

Suvarna News   | Asianet News
Published : Jan 21, 2022, 07:18 PM IST
Google Pixel Notepad ಶೀಘ್ರದಲ್ಲೇ ಗೂಗಲ್‌ನಿಂದ ಪಿಕ್ಸೆಲ್ ನೋಟ್‌ಪ್ಯಾಡ್ ಫೋಲ್ಡೆಬಲ್ ಫೋನ್, ಇದರಲ್ಲಿದೆ ಹಲವು ವಿಶೇಷತೆ!

ಸಾರಾಂಶ

*ಟೆಕ್ ದೈತ್ಯ ಕಂಪನಿ ಗೂಗಲ್ ತನ್ನ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ ತಯಾರಿ *ಈಗ ಪಿಕ್ಸೆಲ್ ಫೋಲ್ಡ್ ಕರೆಯಲಾಗುತ್ತಿರುವ ಫೋಲ್ಡಬಲ್ ಫೋನಿಗೆ ಹೊಸ ಹೆಸರು-ಪಿಕ್ಸೆಲ್ ನೋಟ್‌ಪ್ಯಾಡ್ *ಗ್ಯಾಲೆಕ್ಸಿ ಫೋಲ್ಡೆಬಲ್ ಫೋನ್‌ಗಿಂತ ಕಡಿಮೆ ಬೆಲೆಯಲ್ಲಿ ಗೂಗಲ್ ಫೋನ್ ಲಾಂಚ್‌ಗೆ ಸಿದ್ಧತೆ

Tech Desk(ಜ.21): ಬಹುತೇಕ ಎಲ್ಲ ಸ್ಮಾರ್ಟ್‌ಫೋನ್ ಕಂಪನಿಗಳು ಪೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸುವ ಇಚ್ಛೆಯನ್ನು ಪ್ರದರ್ಶಿಸುತ್ತಿವೆ. ಈಗಾಗಲೇ ಸ್ಯಾಮ್ಸಂಗ್ (Samsung), ಒಪ್ಪೋ (Oppo) ಸೇರಿದಂತೆ ಕೆಲವು ಕಂಪನಿಗಳು ಪೋಲ್ಡಬಲ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇದೇ ಹಾದಿಯಲ್ಲಿ ತಂತ್ರಜ್ಞಾನದ ದೈತ್ಯ ಕಂಪನಿ ಗೂಗಲ್ (Google) ಕೂಡ ಇದೆ. ಅಮೆರಿಕದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿರುವ ಗೂಗಲ್, ತನ್ನ ಮೊದಲ ಮಡಚಬಹುದಾದ ಫೋನ್ ಅನ್ನು ಬಿಡುಗಡೆ ಮಾಡುವ ಗುರಿಯನ್ನು ಹಾಕಿಕೊಂಡಿದ್ದು, ಇದನ್ನು 'ಪಿಕ್ಸೆಲ್ ಫೋಲ್ಡ್ (Pixel Fold' ಎಂದು ಕರೆಯಲಾಗುತ್ತಿತ್ತು. ಆದರೆ, ಭವಿಷ್ಯದಲ್ಲಿ ಪಿಕ್ಸೆಲ್ ಫೋಲ್ಡ್ ಗೂಗಲ್ ಫೋಲ್ಡಬಲ್ ಅನ್ನು ಪಿಕ್ಸೆಲ್ ನೋಟ್‌ಪ್ಯಾಡ್ (Pixel Notepad) ಎಂದು ಕರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಗೂಗಲ್‌ನ ಈ ಫೋಲ್ಡಬಲ್ ಫೋನ್,  ಸ್ಯಾಮ್ಸಂಗ್‌ನ  ಗ್ಯಾಲಕ್ಸಿ Z ಫೋಲ್ಡ್ 3 (1,799 ಡಾಲರ್) ಗಿಂತ ಕಡಿಮೆ ಬೆಲೆಯಲ್ಲಿ ಇರಲಿದೆ ಎನ್ನಲಾಗುತ್ತಿದೆ. ಮುಂಬರುವ ಗೂಗಲ್‌ನ ಈ ಫೋಲ್ಡಬಲ್ ಫೋನ್‌ಗೆ ಸಿಮ್ ಕಾರ್ಡ್ ಅನ್ನು ಹೇಗೆ ಇನ್‌ಸ್ಟಾಲ್ ಮಾಡುವುದು ಎಂಬುದನ್ನು ಬಿಂಬಿಸುವ ಹೊಸ ಅನಿಮೇಷನ್‌ಗಳ ಸೋರಿಕೆಯನ್ನು Android 12L ಬೀಟಾ 2ನಲ್ಲಿ ಬಹಿರಂಗಪಡಿಸಲಾಗಿದೆ.

ವಿವಿಧ ಟೆಕ್ ವರದಿಗಳ ಪ್ರಕಾರ, ಸಿಮ್ ಸೆಟಪ್ ಪುಟದ ಅನಿಮೇಷನ್‌ಗಳು ವಿಶಿಷ್ಟವಾದ ಏಕ-ಪರದೆಯ ವಿನ್ಯಾಸಕ್ಕಿಂತ ಹೆಚ್ಚು ಪ್ರಮುಖವಾದ ಮಡಿಸಬಹುದಾದ ಪ್ರದರ್ಶನದೊಂದಿಗೆ ಸ್ಮಾರ್ಟ್‌ಫೋನ್ ಅನ್ನು ಚಿತ್ರಿಸುತ್ತದೆ. SIM ಕಾರ್ಡ್ ಸ್ಲಾಟ್ ಕೆಳಭಾಗದಲ್ಲಿರಲಿದೆ. ವಾಲ್ಯೂಮ್ ರಾಕರ್ ನಿಯಂತ್ರಣಗಳು ಕೆಳಗಿನ ಬಲಭಾಗದಲ್ಲಿರಲಿವೆ ಎನ್ನಲಾಗುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 3 (Samsung Galaxy Z Fold3) ಬದಲಿಗೆ, ಗೂಗಲ್ ಪಿಕ್ಸೆಲ್ ಫೋಲ್ಡ್ (Google Pixel Fold) ಅನ್ನು ಹೊಸದಾಗಿ ಪರಿಚಯಿಸಲಾದ ಒಪ್ಪೋ ಫೈಂಡ್ ಎನ್ (OPPO Find N) ಗೆ ಹೋಲಿಸಬಹುದು ಎಂದು ತೋರುತ್ತಿದೆ. Google ನ Pixel ಫೋಲ್ಡಬಲ್ ಫೋನ್ ಅನ್ನು 2022 ರಲ್ಲಿ ಮಾರಾಟ ಮಾಡುವ ಗುರಿ ಇರಬಹುದು ಎನ್ನಲಾಗುತ್ತಿದೆ. ಗೂಗಲ್ ತನ್ನ ಇತ್ತೀಚಿನ ಪಿಕ್ಸೆಲ್ 6 ಲಾಂಚಿಂಗ್ ಸಮಾರಂಭದಲ್ಲಿ ಮಡಿಸಬಹುದಾದ ಗ್ಯಾಜೆಟ್ ಅನ್ನು ಘೋಷಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಆ ರೀತಿಯ ಯಾವುದೇ ರೀತಿಯ ಘೋಷಣೆಗಳೇನೂ ಹೊರ ಬೀಳಲಿಲ್ಲ.

Xiaomi 11T Pro 5G ಫೋನ್ ಲಾಂಚ್, ಇದು 17 ನಿಮಿಷದಲ್ಲಿ ಪೂರ್ತಿ ಚಾರ್ಜ್!

ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ Pixel 6 ಮತ್ತು Pixel 6 Pro ಸ್ಮಾರ್ಟ್‌ಫೋನ್‌ಗಳನ್ನು ಚಾಲನೆ ಮಾಡುವ ಅದೇ Google Tensor SoC ನಿಂದ ಚಾಲಿತವಾಗಿದೆ ಎಂದು ಹೇಳಲಾಗುತ್ತದೆ, ಆದಾಗ್ಯೂ ಇದು Pixel 6 ಸರಣಿಗಿಂತ ಕಡಿಮೆ-ಗುಣಮಟ್ಟದ ಕ್ಯಾಮೆರಾವನ್ನು ಹೊಂದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ವರದಿಗಳ ಪ್ರಕಾರ, ಪಿಕ್ಸೆಲ್ 6 ಗೆ ಹೋಲಿಸಿದರೆ, ಗೂಗಲ್ ಪಿಕ್ಸೆಲ್ ನೋಟ್‌ಪ್ಯಾಡ್‌ನಲ್ಲಿ ಕಡಿಮೆ ಸಾಮರ್ಥ್ಯದ ಕ್ಯಾಮೆರಾ ಸಿಸ್ಟಮ್ ಇರುವ ಸುದ್ದಿಗಳ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದನ್ನು ಗೂಗಲ್ ನಿರಾಕರಿಸಿದೆ. 

ಗೂಗಲ್ ತನ್ನ ಪಿಕ್ಸೆಲ್ ಸ್ಮಾರ್ಟ್‌ಫೋನುಗಳ ಮೂಲಕ ಮಾರುಕಟ್ಟೆಗೆ ಹೊಸ ಹೊಸ ಆಪರೇಟಿಂಗ್ ಸಾಫ್ಟ್‌ವೇರ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅತ್ಯಾಧುನಿಕ ತಂತ್ರಜ್ಞಾನ, ಹೊಸ ಹೊಸ ಫೀಚರ್‌ಗಳನ್ನು ಸೇರಿಸುವ ಮೂಲಕ ಗ್ರಾಹಕರಿಗೆ ಉತ್ಕೃಷ್ಟವಾದ ಸ್ಮಾರ್ಟ್‌ಫೋನ್‌ಗಳನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದೆ. ಈಗ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮೂಲಕ ಗೂಗಲ್ ಫೋನ್ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದೆ ಎಂದು ಹೇಳಬಹುದು.

ಮತ್ತೊಂದೆಡೆ, ಅಮೆರಿಕದಲ್ಲಿರುವ  Google ಪ್ರಧಾನ  ಕಚೇರಿ ಅಥವಾ ಸೌಲಭ್ಯಗಳನ್ನು ಪ್ರವೇಶಿಸುವ ಪ್ರತಿಯೊಬ್ಬರಿಗೂ ಸಾಪ್ತಾಹಿಕ COVID-19 ಪರೀಕ್ಷೆಯನ್ನು ತಾತ್ಕಾಲಿಕವಾಗಿ ವಿಧಿಸುತ್ತಿದೆ ಎಂದು Google ಹೇಳಿಕೊಂಡಿದೆ. ಕಂಪನಿಯ ಪ್ರಕಾರ, Googleನ ಅಮೆರಿಕದ ಕಚೇರಿಗಳನ್ನು ಪ್ರವೇಶಿಸುವ ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆಗೆ ಒಳಪಡುತ್ತಾರೆ ಮತ್ತು ಕೆಲಸದಲ್ಲಿರುವಾಗ ಸರ್ಜಿಕಲ್ ಗ್ರೇಡ್ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಲೇಬೇಕಾಗುತ್ತದೆ. ಕೋವಿಡ್‌ಗೆ ಸಂಬಂಧಿಸಿದಂತೆ ಸಾಕಷ್ಟು ಕಠಿಣ ನಿಯಮಗಳನ್ನು ಗೂಗಲ್ ತನ್ನ ಕಚೇರಿಯಲ್ಲಿ ಜಾರಿಗೊಳಿಸುತ್ತಿದೆ. ಆ ಮೂಲಕ ಸಾಂಕ್ರಾಮಿಕ ತನ್ನ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ.

Moto Tab G70 LTE: ಭಾರತದಲ್ಲಿ ಹೊಸ ಮೊಟೊರೊಲಾ ಟ್ಯಾಬ್ ಬಿಡುಗಡೆ, ಬೆಲೆ ಎಷ್ಟು?

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್