ಹಬ್ಬದ ಸೀಸನ್‌ಗೆ 'ರಿಯಲ್‌ಮಿ' ಬಂಪರ್ ಆಫರ್: ಸ್ಮಾರ್ಟ್‌ಫೋನ್ ಖರೀದಿಸಿದರೆ ಕಾರು, ಸ್ಕೂಟರ್ ಗೆಲ್ಲುವ ಅವಕಾಶ

Published : Oct 07, 2026, 06:42 PM IST
Realme Festive

ಸಾರಾಂಶ

ದೀಪಾವಳಿ ಹಬ್ಬದ ಪ್ರಯುಕ್ತ ರಿಯಲ್‌ಮಿ ಸಂಸ್ಥೆಯು ತನ್ನ 16 ಸರಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಮತ್ತು ಲಕ್ಕಿ ಡ್ರಾ ಆಫರ್ ಘೋಷಿಸಿದೆ. ಆಫ್‌ಲೈನ್ ಸ್ಟೋರ್‌ಗಳಲ್ಲಿ ಫೋನ್ ಖರೀದಿಸುವ ಗ್ರಾಹಕರು ಕಾರು, ಸ್ಕೂಟರ್ ಅಥವಾ ಹೊಸ ಫೋನ್ ಗೆಲ್ಲುವ ಅವಕಾಶವಿದೆ. ಇದರೊಂದಿಗೆ ಆಕರ್ಷಕ ಇಎಂಐ ಸೌಲಭ್ಯಗಳನ್ನೂ ನೀಡಲಾಗುತ್ತಿದೆ.

ಬೆಂಗಳೂರು: ದೀಪಾವಳಿ ಮತ್ತು ಹಬ್ಬದ ಸೀಸನ್ ಶುರುವಾಗಿದ್ದು ಸ್ಮಾರ್ಟ್‌ಫೋನ್ ಪ್ರಿಯರಿಗೆ ಭಾರತದ ಜನಪ್ರಿಯ ಬ್ರ್ಯಾಂಡ್ ರಿಯಲ್‌ಮಿ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ.

ನೀವು ಹೊಸದಾಗಿ ರಿಯಲ್‌ಮಿ 16 ಸರಣಿಯ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ನಿಮಗೆ ಕಾರು, ಪ್ರೀಮಿಯಂ ಸ್ಕೂಟರ್ ಅಥವಾ ಹೊಸ ಸ್ಮಾರ್ಟ್‌ಫೋನ್ ಗೆಲ್ಲುವ ಸುವರ್ಣಾವಕಾಶವಿದೆ!

ಏನಿದು ಲಕ್ಕಿ ಡ್ರಾ ಆಫರ್?

ರಿಯಲ್‌ಮಿ ತನ್ನ 'ಫೆಸ್ಟಿವ್ ಡೇಸ್' ಅಂಗವಾಗಿ ಗ್ರಾಹಕರಿಗಾಗಿ ವಿಶೇಷ ಲಕ್ಕಿ ಡ್ರಾ ಆಯೋಜಿಸಿದೆ. ಈ ಆಫರ್ ಅಕ್ಟೋಬರ್ 5 ರಿಂದ ನವೆಂಬರ್ 15, 2026 ರವರೆಗೆ ಲಭ್ಯವಿರಲಿದೆ.

ದೇಶಾದ್ಯಂತ ಇರುವ ಎಲ್ಲಾ ರಿಯಲ್‌ಮಿ ಆಫ್‌ಲೈನ್ ಸ್ಟೋರ್‌ಗಳಲ್ಲಿ ಫೋನ್ ಖರೀದಿಸುವವರು ಮಾತ್ರ ಈ ಲಕ್ಕಿ ಡ್ರಾದಲ್ಲಿ ಭಾಗವಹಿಸಬಹುದು.

ರಿಯಲ್‌ಮಿ 16 ಸೀರೀಸ್ ಫೋನ್ ಖರೀದಿಸಿದ ನಂತರ, ನಿಮ್ಮ ಗೂಗಲ್ ಅಕೌಂಟ್ ಬಳಸಿ 'ಲಕ್ಕಿ ಡ್ರಾ H5' ಆ್ಯಪ್‌ಗೆ ಲಾಗಿನ್ ಆಗಬೇಕು. ಒಬ್ಬ ಗ್ರಾಹಕರು ಒಮ್ಮೆ ಮಾತ್ರ ಈ ಲಕ್ಕಿ ಡ್ರಾದಲ್ಲಿ ಭಾಗವಹಿಸಲು ಅವಕಾಶವಿದೆ.

ರಿಯಲ್‌ಮಿ 16 ಸರಣಿಯ ಫೋನ್‌ಗಳ ವಿಶೇಷತೆಗಳೇನು?

ಈ ಸರಣಿಯ ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ, ಶಕ್ತಿಶಾಲಿ ಬ್ಯಾಟರಿ ಹಾಗೂ ಸೂಪರ್ ಫಾಸ್ಟ್ ಚಾರ್ಜಿಂಗ್‌ಗೆ ಹೆಸರುವಾಸಿಯಾಗಿವೆ. ಯಾವ ಫೋನಿನಲ್ಲಿ ಏನೇನು ವಿಶೇಷತೆ ಇದೆ ಎಂಬುದರ ವಿವರ ಇಲ್ಲಿದೆ:

  • ರಿಯಲ್‌ಮಿ 16 Pro+ (200MP ಪೋರ್ಟ್ರೇಟ್ ಮಾಸ್ಟರ್) : ಇದರಲ್ಲಿ 200MP ಲುಮಾಕಲರ್ ಪೋರ್ಟ್ರೇಟ್ ಕ್ಯಾಮೆರಾ, 3.5x ಟೆಲಿಫೋಟೋ ಲೆನ್ಸ್ ಇದೆ. 7000mAh ಬೃಹತ್ ಬ್ಯಾಟರಿ ಹಾಗೂ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.
  • ರಿಯಲ್‌ಮಿ 16 5G (AI ಪೋರ್ಟ್ರೇಟ್ ಸ್ಟಾರ್) : 50MP ಸೋನಿ ಮುಂಭಾಗ ಮತ್ತು ಹಿಂಭಾಗದ ಎಐ ಕ್ಯಾಮೆರಾಗಳನ್ನು ಹೊಂದಿದೆ. 7000mAh ಬ್ಯಾಟರಿ ಜೊತೆಗೆ 45W ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. ಇದರ ಬ್ಯಾಟರಿ 6 ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸುವ ಗ್ಯಾರಂಟಿ ಇದೆ.
  • ರಿಯಲ್‌ಮಿ 16T (ಪವರ್ ಸ್ಟಾರ್) : ಇದರಲ್ಲಿ ಬರೋಬ್ಬರಿ 8000mAh ಬ್ಯಾಟರಿ ಇದೆ (7 ವರ್ಷ ಬ್ಯಾಟರಿ ಹೆಲ್ತ್). 50MP ಸೋನಿ ಕ್ಯಾಮೆರಾ, ಸೆಲ್ಫಿ ಮಿರರ್ ಮತ್ತು IP69 ವಾಟರ್ ರೆಸಿಸ್ಟೆನ್ಸ್ (ನೀರು ಬಿದ್ದರೂ ಫೋನ್ ಹಾಳಾಗಲ್ಲ) ಸೌಲಭ್ಯವಿದೆ.
  • ರಿಯಲ್‌ಮಿ 16X : 7000mAh ಬ್ಯಾಟರಿ, 120Hz ಸ್ಮೂತ್ ಡಿಸ್‌ಪ್ಲೇ ಹಾಗೂ ಗೇಮಿಂಗ್‌ಗೆ ಸೂಕ್ತವಾದ 'ಕೂಲಿಂಗ್ ಸಿಸ್ಟಮ್' (ಫೋನ್ ಬಿಸಿಯಾಗುವುದನ್ನು ತಡೆಯುವ ತಂತ್ರಜ್ಞಾನ) ಹೊಂದಿದೆ.

ದೀಪಾವಳಿ ಸ್ಪೆಷಲ್ ಡಿಸ್ಕೌಂಟ್ ಮತ್ತು ಇಎಂಐ ಆಫರ್‌ಗಳು

ಲಕ್ಕಿ ಡ್ರಾ ಜೊತೆಗೆ, ರಿಯಲ್‌ಮಿ 16 ಸರಣಿಯ ಫೋನ್‌ಗಳ ಮೇಲೆ ಬೃಹತ್ ರಿಯಾಯಿತಿ ಮತ್ತು 'ನೋ ಕಾಸ್ಟ್ ಇಎಂಐ' ಆಫರ್‌ಗಳನ್ನು ಸಹ ನೀಡಲಾಗುತ್ತಿದೆ:

  • ರಿಯಲ್‌ಮಿ 16 Pro+: ಮೂಲ ಬೆಲೆ 53,999 ರೂ. (8+128GB). ಆದರೆ ಆಫರ್ ಬೆಲೆಯಲ್ಲಿ ಕೇವಲ 48,600 ರೂ.ಗೆ ಲಭ್ಯ. ಜೊತೆಗೆ 18 ತಿಂಗಳ ನೋ ಕಾಸ್ಟ್‌ ಇಎಂಐ ಇದೆ.
  • ರಿಯಲ್‌ಮಿ 16 Pro: ಮೂಲ ಬೆಲೆ 44,999 ರೂ. (8+128GB). ಆಫರ್ ಬೆಲೆಯಲ್ಲಿ 40,500 ರೂ.ಗೆ ಲಭ್ಯ. 18 ತಿಂಗಳ ನೋ ಕಾಸ್ಟ್‌ ಇಎಂಐ ಇದೆ.
  • ರಿಯಲ್‌ಮಿ 16 5G: ಮೂಲ ಬೆಲೆ 36,999 ರೂ. (8+128GB). ಆಫರ್ ಬೆಲೆಯಲ್ಲಿ 33,999 ರೂ.ಗೆ ಲಭ್ಯ. 15 ತಿಂಗಳ ನೋ ಕಾಸ್ಟ್‌ ಇಎಂಐ ಇದೆ.
  • ರಿಯಲ್‌ಮಿ 16T: ಮೂಲ ಬೆಲೆ 30,999 ರೂ. (6+128GB). ಆಫರ್ ಬೆಲೆಯಲ್ಲಿ 29,999 ರೂ.ಗೆ ಲಭ್ಯ. 10 ತಿಂಗಳ ನೋ ಕಾಸ್ಟ್‌ ಇಎಂಐ ಉದೆ.
  • ರಿಯಲ್‌ಮಿ 16X: ಮೂಲ ಬೆಲೆ 28,999 ರೂ. (4+128GB). ಆಫರ್ ಬೆಲೆಯಲ್ಲಿ 27,999 ರೂಗೆ ಲಭ್ಯ. 12 ತಿಂಗಳ ನೋ ಕಾಸ್ಟ್‌ ಇಎಂಐ ಇದೆ.

ಈ ದೀಪಾವಳಿಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಇದ್ದರೆ, ಹತ್ತಿರದ ರಿಯಲ್‌ಮಿ ಸ್ಟೋರ್‌ಗೆ ಭೇಟಿ ನೀಡಿ ಕಾರು ಅಥವಾ ಸ್ಕೂಟರ್ ಗೆಲ್ಲುವ ನಿಮ್ಮ ಅದೃಷ್ಟ ಪರೀಕ್ಷಿಸಿ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಎಲೋನ್ ಮಸ್ಕ್‌ಗೆ ಅಂಬಾನಿ ಟಕ್ಕರ್, ಸ್ಯಾಟಲೈಟ್ ನೆಟ್‌ವರ್ಕ್ ನಲ್ಲಿ ಜಿಯೋ ಕ್ರಾಂತಿ, 6 ಲಕ್ಷ ಹಳ್ಳಿಗಳಿಗೆ ಇಂಟರ್ನೆಟ್!
ಅಮೆಜಾನ್ ಫೆಸ್ಟಿವಲ್ ಸೇಲ್‌ ಮೊಬೈಲ್‌ ಮೇಲೆ ಶೇ.50 ಆಫರ್; ಐಫೋನ್ 16, ಗ್ಯಾಲಕ್ಸಿ S25 ಅಲ್ಟ್ರಾಗೆ ಭಾರಿ ಡಿಸ್ಕೌಂಟ್!