ಚೀಪ್ ರೇಟ್ ಅಂತಾ ಬಿಲ್‌ ಇಲ್ಲದ ಕಳ್ಳತನದ ಮೊಬೈಲ್ ಬಳಸೋದು ಇನ್ಮುಂದೆ ಕಷ್ಟ!

By Suvarna News  |  First Published Mar 6, 2023, 10:09 PM IST

ಕೇಂದ್ರ ದೂರಸಂಪರ್ಕ ಇಲಾಖೆ ಅಭಿವೃದ್ಧಿ ಪಡಿಸಿರುವ ಸಿಇಐಆರ್ ಪೋರ್ಟಲ್ ನಿಂದಾಗಿ ಪತ್ತೆ ಹಚ್ಚುವ ಕೆಲಸ ಸುಲಭವಾಗಿದೆ. ಗದಗ ಜಿಲ್ಲೆಯಲ್ಲಿ ಕಳ್ಳತನವಾಗಿ ಮಿಸ್ ಆಗಿದ್ದ ಹಾಗೂ ಕಳೆದುಕೊಂಡಿದ್ದ 255 ಮೊಬೈಲ್ ಗಳನ್ನ ಪುನಃ ಮಾಲೀಕರಿಗೆ  ಪೊಲೀಸರು ಒಪ್ಪಿಸಿದ್ದಾರೆ.


ಗದಗ (ಮಾ.6): ಜಿಲ್ಲೆ ವ್ಯಾಪ್ತಿಯಲ್ಲಿ ಕಳ್ಳತನವಾಗಿ ಮಿಸ್ ಆಗಿದ್ದ ಹಾಗೂ ಕಳೆದುಕೊಂಡಿದ್ದ 255 ಮೊಬೈಲ್ ಗಳನ್ನ ಪುನಃ ಮಾಲೀಕರಿಗೆ ಗದಗ ಜಿಲ್ಲಾ ಪೊಲೀಸರು ಒಪ್ಪಿಸಿದ್ದಾರೆ. ಈ ಹಿಂದೆ ಕಳದುಹೋಗಿದ್ದ ಮೊಬೈಲ್ ಹುಡುಕೋದು ಸ್ಪಲ್ಪ ವಿಳಂಭವಾಗ್ತಿತ್ತು. ಆದ್ರೀಗ ಅತ್ಯಾಧುನಿಕ ಸಾಫ್ಟ್ ವೇರ್ ಬಳಕೆಯಿಂದ ಮೊಬೈಲ್ ಟ್ರೇಸ್ ಮಾಡೋದು ಅಷ್ಟೊಂದು ಕಷ್ಟವೇನಲ್ಲ. ಕೇಂದ್ರ ದೂರಸಂಪರ್ಕ ಇಲಾಖೆ ಅಭಿವೃದ್ಧಿ ಪಡಿಸಿರುವ ಸಿಇಐಆರ್ ಪೋರ್ಟಲ್ ನಿಂದಾಗಿ ಪತ್ತೆ ಹಚ್ಚುವ ಕೆಲಸ ಸುಲಭವಾಗಿದೆ. ಮೊಬಿಫೈ ಹೆಸರಿನ ಅಪ್ಲಿಕೇಷನ್ ಸಿದ್ದಪಡಿಸಿರೋ ಗದಗ ಜಿಲ್ಲಾ ಪೊಲೀಸರು, ಮೊಬೈಲ್ ಮೂಲಕ‌ ದೂರು ಸ್ವೀಕಾರ ಮಾಡುವ ಅವಕಾಶ ಕಲ್ಪಿಸಿತ್ತು. ಫೆಬ್ರವರಿಯಿಂದ ಈ ವರೆಗೆ 398 ಮೊಬೈಲ್ ನಾಪತ್ತೆ ಬಗ್ಗೆ ದೂರು ಸ್ವೀಕರಿಸಲಾಗಿತ್ತು.. ತಂತ್ರಾಂಶದ ಸಹಾಯದಿಂದ 92 ಮೊಬೈಲ್ ಪತ್ತೆಹಚ್ಚಲಾಗಿದ್ದು, ಮೂಲ ಮಾಲೀಕರಿಗೆ ಮರಳಿಸಲಾಗಿದೆ.

ಶಾಲಾ- ಕಾಲೇಜುಗಳಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ ಕದಿಯುವ ಗ್ಯಾಂಗ್: 22 ವರ್ಷಗಳ ಬಳಿಕ ಖದೀಮರ ಸೆರೆ.!

Latest Videos

undefined

ಕೇಂದ್ರದ ಸಿಇಐಆರ್ (Central Equipment Identity Register) ಹಾಗೂ ಮೊಬಿಫೈ ಅಪ್ಲಿಕೇಷನ್ ಮೂಲಕ ಒಟ್ಟು 295 ಮೊಬೈಲ್ ಗಳನ್ನ ಟ್ರೇಸ್ ಮಾಡಲಾಗಿದೆ.. ಅಂದಾಜು 40 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗೆ ಸೇರಿದ ಮೊಬೈಲ್ ಗಳನ್ನ ಮೂಲ ಮಾಲೀಕರಿಗೆ ಮರಳಿ ನೀಡಲಾಗಿದೆ. ಮೊಬೈಲ್ ಪತ್ತೆ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿರೋ ಪೊಲೀಸ್ ಸಿಬ್ಬಂದಿಗೆ ಎಸ್ ಪಿ ಬಿಎಸ್ ನೇಮಗೌಡ ಶ್ಲಾಘಿಸಿದ್ದಾರೆ. ಅಲ್ದೆ ಸೂಕ್ತ ಬಹುಮಾನದ ಕೊಡೋದಾಗಿ ಘೋಷಿಸಿದ್ದಾರೆ.

ರಾಜ್ಯದಲ್ಲಿ 1114 ಗ್ರಾಮಗಳಿಗೆ ದೂರ ಸಂಪರ್ಕ ಜಾಲವಿಲ್ಲ

ಬಸ್ ಸ್ಟಾಪ್, ಜಾತ್ರೆ, ಸಂತೆಗಳಲ್ಲಿ ಸಿಕ್ಕ ಅಥ್ವಾ ಕದ್ದ ಮೊಬೈಲ್ ಗಳನ್ನ ಹಳ್ಳಿಗಳಲ್ಲಿ ಮುಗ್ಧ ಜನರಿಗೆ ಮಾರಾಟ ಮಾಡ್ಲಾಗ್ತಿದೆ. ಕಡಿಮೆ ದರದಲ್ಲಿ ಮೊಬೈಲ್ ಸಿಕ್ತು ಅಂತಾ ಕೊಂಡುಕೊಳ್ಳಬೇಡಿ. ಬಿಲ್ ಇಲ್ಲದೇ ವ್ಯವಹಾರ ಮಾಡ್ಬೇಡಿ ಅಂತಾ ಎಸ್ ಪಿ‌ಬಿಎಸ್ ನೇಮಗೌಡ ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ

click me!