ಭಾರತದಲ್ಲಿ ಪೊಕೊ ಸಿ 55 ಸ್ಮಾರ್ಟ್‌ಫೋನ್‌ ಬಿಡುಗಡೆ, 9499 ರೂಪಾಯಿಗೆ 50 ಎಂಪಿ ಕ್ಯಾಮೆರಾ ಇರುವ ಫೋನ್‌!

By Santosh Naik  |  First Published Feb 21, 2023, 4:12 PM IST

ಭಾರತದಲ್ಲಿ ಕೇವಲ 9499 ರೂಪಾಯಿಗೆ 50 ಎಂಪಿ ಡ್ಯುಯೆಲ್‌ ಕ್ಯಾಮೆರಾ, 5 ಸಾವಿರ ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಮಿಡೀಯಾಟೆಕ್‌ ಹೇಲಯೋ ಜಿ85 ಚಿಪ್‌ಸೆಟ್‌ನೊಂದಿಗೆ ಇರುವ ಪೊಕೊ ಸಿ 55 ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ.


POCO C55 Price in India: ವಿಶ್ವದ ಅತಿದೊಡ್ಡ ಮೊಬೈಲ್‌ ಫೋನ್‌ ಮಾರುಕಟ್ಟೆಯಲ್ಲಿ ಒಂದಾಗಿರುವ ಭಾರತದಲ್ಲಿ, ಪೊಕೋ ಫೋನ್‌ಗಳು ಬಹಳ ಕಡಿಮೆ ಅವಧಿಯಲ್ಲಿಯೇ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿದೆ. ಮಂಗಳವಾರ ಪೊಕೋ ತನ್ನ ಸಿ-ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಹೊಸ ಫೋನ್‌ಅನ್ನು ಸೇರಿಸಿದೆ. ಪೊಕೊ ಸಿ 55 ಸ್ಮಾರ್ಟ್‌ಫೋನ್‌ಅನ್ನು ಕಂಪನಿ ಭಾರತದ ಮಾರುಕಟ್ಟೆಗ ಬಿಡುಗಡೆ ಮಾಡಿದೆ. ಕಂಪನಿ ಹೇಳಿರುವ ಪ್ರಕಾರ, ಪೊಕೊ ಸಿ55 ಫೋನ್‌ ಸಾಕಷ್ಟು ಫೀಚರ್‌ಗಳನ್ನು ಹೊಂದಿದ್ದು, ಎಂಟ್ರಿ ಲೆವಲ್‌ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಪೊಕೊ 55 ಸ್ಮಾರ್ಟ್‌ಫೋನ್‌ಗಳು ನೀಡುವಷ್ಟು ವಿಶೇಷವಾದ ಫೀಚರ್‌ಗಳನ್ನು ಮತ್ಯಾವ ಸ್ಮಾರ್ಟ್‌ಫೋನ್‌ ಕೂಡ ನೀಡಲು ಸಾಧ್ಯವಿಲ್ಲ ಎಂದಿದೆ. ಪೊಕೊ ಸಿ55 ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ. ಫಾರೆಸ್ಟ್‌ ಗ್ರೀನ್‌, ಕೂಲ್‌ ಬ್ಲ್ಯೂ ಹಾಗೂ ಪವರ್‌ ಬ್ಲ್ಯಾಕ್‌ನಲ್ಲಿ ಲಭ್ಯವಿದೆ. ಪೊಕೊ ಸಿ55 ಫೋನ್‌ ಎರಡು ರಾಮ್‌ ಹಾಗೂ ಸ್ಟೋರೇಜ್‌ ವೇರಿಯಂಟ್‌ಗಳೊಂದಿಗೆ ಬಂದಿದೆ. 4ಜಿಜಿ+64ಜಿಬಿ ಮತ್ತು 6ಜಿಬಿ+ 128 ಜಿಬಿ ವೇರಿಯಂಟ್‌ಗಳಲ್ಲಿ ಬರಲಿದೆ. ಇವುಗಳಿಗೆ ಕ್ರಮವಾಗಿ 9499 ಹಾಗೂ 10,999 ರೂಪಾಯಿ ಬೆಲೆ ಇದ್ದು, ಫೆಬ್ರವರಿ 28 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಇದು ಲಭ್ಯವಾಗಲಿದೆ.

ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಪೊಕೊ ಇಂಡಿಯಾದ ದೇಶದ ಮುಖ್ಯಸ್ಥ ಹಿಮಾಂಶು ಟಂಡನ್, “ಪೊಕೊ ತನ್ನ C-ಸರಣಿ ಬಂಡವಾಳದೊಂದಿಗೆ 10k ವಿಭಾಗದಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ. ನಿಜವಾದ ಗೇಮ್ ಚೇಂಜರ್ ಆಗಿರುವ ಅತ್ಯುತ್ತಮ ಮತ್ತು ಶಕ್ತಿಶಾಲಿ ಸ್ಮಾರ್ಟ್‌ಫೋನ್‌ನೊಂದಿಗೆ ಬಜೆಟ್ ವಿಭಾಗವನ್ನು ಗಟ್ಟಿಗೊಳಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಇದ್ದಾರೆ.

ವಿವೋಗೆ ಸಂಕಷ್ಟ: 1.5 ಕೋಟಿ ಡಾಲರ್ ಮೌಲ್ಯದ 27 ಸಾವಿರ ಸ್ಮಾರ್ಟ್‌ಫೋನ್‌ ರಫ್ತು ನಿಲ್ಲಿಸಿದ ಕೇಂದ್ರ ಸರ್ಕಾರ..!

Tap to resize

Latest Videos

undefined

ಭಾರತದಲ್ಲಿ POCO C55 ಬೆಲೆ: ಪೊಕೊ ಸಿ55 (POCO C55)ಅನ್ನು  ಮೀಡಿಯಾಟೆಕ್‌ ಹೆಲಿಯೋ ಜಿ 85 ಚಿಪ್‌ಸೆಟ್‌ನಿಂದ ನಡೆಸಲಾಗುತ್ತಿದೆ. ಮೀಡಿಯಾಟೆಕ್‌ ಹೆಲಿಯೋ ಜಿ 85  ತನ್ನ ಆರ್ಮ್‌ ಮಾಲಿ-G52 ಜಿಪಿಯು ಅನ್ನು 1GHz ಗರಿಷ್ಠ ಮಟ್ಟಕ್ಕೆ ಪಂಪ್ ಮಾಡುತ್ತದೆ, ಇದು ಮೊಬೈಲ್‌ನಲ್ಲಿ ಗೇಮ್‌ ಆಡುವ ಗೀಳು ಇರಿಸಿಕೊಂಡವರಿಗೆ ಹೆಚ್ಚಿನ ಸಹಾಯ ಮಾಡುತ್ತದೆ. ಈ ಫೋನ್‌, 5GB ಟರ್ಬೊ ರಾಮ್‌ಅನ್ನು ಹೊಂದಿದೆ, ಇದರ ಪರಿಣಾಮವಾಗಿ 11GB ರಾಮ್‌ ವರೆಗೆ ಸಾಮರ್ಥ್ಯವನ್ನು ವಿಸ್ತರಣೆ ಮಾಡಬಹುದು. ಇದು Android 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 260ಕೆ ಗಿಂತ ಹೆಚ್ಚಿನ ಅಂಟುಟು ಸ್ಕೋರ್ ಅನ್ನು ಹೊಂದಿದೆ.

ಭಾರತ ಈಗ ಸ್ಮಾರ್ಟ್‌ಫೋನ್‌ ಹಬ್‌: ಒಂದೇ ವರ್ಷದಲ್ಲಿ ಮೊಬೈಲ್‌ ರಫ್ತು ಡಬಲ್‌

ಈ ಫೋನ್‌ 50 ಎಂಪಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಸಿ ಸರಣಿಯಲ್ಲಿ ಮೊದಲ ಬಾರಿಗೆ ಇಷ್ಟು ಗರಿಷ್ಠ ಪ್ರಮಾಣದ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿಗಳನ್ನು ತೆಗೆಯಲು 5ಎಂಪಿ ಸ್ನ್ಯಾಪರ್‌ಗಳು ಈ ಮೊಬೈಲ್‌ನಲ್ಲಿದೆ. ಸ್ಮಾರ್ಟ್‌ಫೋನ್‌ 1080p @ 30fps ಮತ್ತು 720p @ 30fps ನ ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಪೊಕೊ 4GB+64GB ರೂಪಾಂತರದಲ್ಲಿ ರೂ 500 ಮೊದಲ ದಿನದ ಫ್ಲಾಟ್ ರಿಯಾಯಿತಿಯನ್ನು ಪರಿಚಯಿಸಿದೆ. ಅಲ್ಲದೆ, ಸ್ಮಾರ್ಟ್‌ಫೋನ್ ತಯಾರಕರು ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಕ್ರಮವಾಗಿ 4GB + 64GB ಮತ್ತು 6GB + 128GB ರೂಪಾಂತರಗಳಲ್ಲಿ ರೂ 500 ಮತ್ತು ರೂ 1,000 ರ ಬ್ಯಾಂಕ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಇದು ಮೊದಲ ದಿನದ ಪರಿಣಾಮಕಾರಿ ಬೆಲೆಯನ್ನು ರೂ 8,499 ಮತ್ತು ರೂ 9,999 ಕ್ಕೆ ತರುತ್ತದೆ.

click me!