
ನವದೆಹಲಿ(ಜು.05): ಸರ್ಕಾರಿ ಟೆಲಿಕಾಂ ಕಂಪನಿ BSNL ಅತ್ಯುತ್ತಮವಾದ ಯೋಜನೆಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಖುಷಿ ಕೊಡುತ್ತಿತ್ತು. ಆದರೆ ಇದೀಗ ಕಂಪನಿಯು ತನ್ನ 3 ಯೋಜನೆಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. TelecomTalk ನ ಮಾಹಿತಿಯ ಪ್ರಕಾರ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಮೂರು ಪ್ರಿಪೇಯ್ಡ್ ಯೋಜನೆಗಳಲ್ಲಿ ಏಕಕಾಲದಲ್ಲಿ ಬದಲಾವಣೆಗಳನ್ನು ಮಾಡಿದೆ. ವಾಸ್ತವವಾಗಿ, ಈಗ ಅವುಗಳಲ್ಲಿ ಲಭ್ಯವಿರುವ ಪ್ರಯೋಜನಗಳನ್ನು ಕಡಿಮೆ ಮಾಡಲಾಗಿದೆ.
BSNL ನ ರೂ.99 ಪ್ಲಾನ್:
ಈ ಹಿಂದೆ ಪಡೆದ ಮಾಹಿತಿಯ ಪ್ರಕಾರ, ಕಂಪನಿಯ ರೂ.99 ಪ್ರಿಪೇಯ್ಡ್ ಯೋಜನೆಯಲ್ಲಿ ಮೊದಲ 22 ದಿನಗಳ ವ್ಯಾಲಿಡಿಟಿ ಲಭ್ಯವಿತ್ತು, ಅದನ್ನು ಈಗ 18 ದಿನಗಳಿಗೆ ಇಳಿಸಲಾಗಿದೆ. ಯೋಜನೆಯ ಎಲ್ಲಾ ಇತರ ಪ್ರಯೋಜನಗಳು ಮೊದಲಿನಂತೆಯೇ ಇರುತ್ತವೆ ಎಂಬುವುದು ಉಲ್ಲೇಖನೀಯ. ಈ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ ಕರೆ ಸೌಲಭ್ಯವನ್ನು ಪಡೆಯುತ್ತಾರೆ.
1 ವರ್ಷ ಉಚಿತ ಕರೆ ಹಾಗೂ 600 ಜಿಬಿ ಫ್ರೀ ಡೇಟಾ, ಬಿಎಸ್‌ಎನ್ಎಲ್ ವಾರ್ಷಿಕ ಪ್ಲಾನ್ ಘೋಷಣೆ!
BSNL ನ 118 ರೂ ಪ್ಲಾನ್:
ಈ ಹಿಂದೆ BSNL ನ 118 ರೂ ಪ್ಲಾನ್‌ನಲ್ಲಿ ಗ್ರಾಹಕರು 26 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಿದ್ದರು, ಆದರೆ ಕಂಪನಿಯು ಈಗ ಅದನ್ನು ಕಡಿಮೆ ಮಾಡಿದೆ. ಈಗ ಈ ಯೋಜನೆಯಲ್ಲಿ ಕೇವಲ 20 ದಿನಗಳ ವ್ಯಾಲಿಡಿಟಿ ಲಭ್ಯವಿರುತ್ತದೆ. ಅಂದರೆ, ಈಗ ಈ ಬೆಲೆಯು ನಿಮಗೆ ಮೊದಲಿಗಿಂತ ದಿನಕ್ಕೆ 4.53 ರೂ ಹೆಚ್ಚುವರಿ ಬೀಳುತ್ತೆ. ಈ 118 ರೂ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 500MB ಡೇಟಾದೊಂದಿಗೆ ಅನಿಯಮಿತ ಕರೆ ಸೌಲಭ್ಯ ಸಿಗುತ್ತಿತ್ತು ಎಂಬುವುದು ಉಲ್ಲೇಖನೀಯ.
ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದಾಕೆಯ ರಕ್ಷಿಸಿದ ಕಣಜದ ಹುಳುಗಳು
BSNL ನ ರೂ 319 ಯೋಜನೆ:
BSNL ನ ರೂ 319 ಯೋಜನೆಯು 75 ದಿನಗಳ ಮಾನ್ಯತೆಯೊಂದಿಗೆ ಲಭ್ಯವಿದೆ. ಈಗ ಈ ಯೋಜನೆಯ ವ್ಯಾಲಿಡಿಟಿಯನ್ನು 65 ದಿನಗಳಿಗೆ ಇಳಿಸಲಾಗಿದೆ. ಇದರಲ್ಲಿ ಗ್ರಾಹಕರು ನೇರವಾಗಿ 10 ದಿನಗಳ ಕಡಿಮೆ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಉಳಿದ ಪ್ರಯೋಜನಗಳ ಕುರಿತು ಹೇಳುವುದಾದರೆ, ಈ ಯೋಜನೆಯಲ್ಲಿ ಅನಿಯಮಿತ ಕರೆಯೊಂದಿಗೆ ಪ್ರತಿದಿನ 300 SMS ಮತ್ತು 10 GB ಡೇಟಾ ಲಭ್ಯವಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.