365ರೂಪಾಯಿಗೆ 365 ದಿನ ವ್ಯಾಲಿಡಿಟಿ; ಭರ್ಜರಿ ಆಫರ್ ಘೋಷಿಸಿದ BSNL!

By Suvarna News  |  First Published Jun 4, 2020, 2:34 PM IST

ಲಾಕ್‌ಡೌನ್ ಸಡಿಲಿಕೆಯಾಗಿ ಇದೀಗ ಭಾರತ ಅನ್‌ಲಾಕ್ 1 ಹಂತ ಪ್ರವೇಶಿಸುತ್ತಿದೆ. ಇತ್ತ ಭಾರತೀಯ ದೂರ ಸಂಚಾರ ನಿಗಮ ಲಿಮಿಟೆಡ್(BSNL)ಭರ್ಜರಿ ಆಫರ್ ಘೋಷಿಸಿದೆ. 365 ರೂಪಾಯಿಗೆ ಒಂದು ವರ್ಷ ವ್ಯಾಲಿಟಡಿಟಿ, ಡಾಟಾ, ವಾಯ್ಸ್ ಕಾಲ್ ಸೇರಿದಂತೆ ಹಲವು ಆಫರ್ ಲಾಂಚ್ ಮಾಡಿದೆ. BSNL ನೂತನ ಆಫರ್ ವಿವರ ಇಲ್ಲಿದೆ.
 


ನವದೆಹಲಿ(ಜೂ.04): ಲಾಕ್‌ಡೌನ್ ಸಮಯದಲ್ಲಿ ಬಹುತೇಕರಿಗೆ ಡಾಟಾ ಅವಶ್ಯಕತೆ ಹೆಚ್ಚಾಗಿತ್ತು. ಕಾರಣ ಮನೆಯಿಂದ ಕೆಲಸ, ಸೇರಿದಂತೆ ಹಲುವ ಕಾರಣಗಳಿಗೆ ಅತ್ಯುತ್ತಮ ಪ್ಯಾಕ್ ಮೊರೆ ಹೋಗಿದ್ದರು. ಈ ಸಮಯದಲ್ಲಿ  BSNL ಹಲವು ಆಫರ್ ಮೂಲಕ ಗ್ರಾಹಕರ ಬೇಡಿಕೆಯನ್ನೂ ಪೂರೈಸಿದೆ. ಇದೀಗ ಅನ್‌ಲಾಕ್ 1 ಹಂತ ಪ್ರವೇಶಕ್ಕೆ ಮೊದಲು BSNL ಮತ್ತೆ ವಿಶೇಷ ಆಫರ್ ನೀಡುತ್ತಿದೆ. ಕೇವಲ 365 ರೂಪಾಯಿಗೆ 365 ದಿನ ವ್ಯಾಲಿಟಡಿಟಿ, ವಾಯ್ಸ್ ಕಾಲ್, ಹಾಗೂ ಡಾಟಾ ಆಫರ್ ಇದರ ಜೊತೆಗೆ 600 ದಿನಗಳ ಆಫರ್ ಕೂಡ ಘೋಷಿಸಿದೆ.

ವಾಟ್ಸಾಪಿಗೆ BSNL ಠಕ್ಕರ್,   ಅನ್‌ಲಿಮಿಟೆಡ್ ಕೊಡುಗೆಯ ಫೀಚರ್!

Tap to resize

Latest Videos

undefined

365 ರೂಪಾಯಿ ಪ್ರೀ ಪೇಯ್ಡ್ ರಿಚಾರ್ಜ್ ಆಫರ್:
BSNL ಗ್ರಾಹಕರು 365 ರೂಪಾಯಿ ಆಫರ್ ರಿಚಾರ್ಜ್ ಮಾಡಿಸಿಕೊಂಡರೆ 365 ದಿನ ಅಂದರೆ ಬರೋಬ್ಬರಿ 1 ವರ್ಷ ವ್ಯಾಲಿಡಿಟಿ ಸಿಗಲಿದೆ. ಇದರ ಜೊತೆಗೆ ಪ್ರತಿ ದಿನ 250 ನಿಮಿಷ ಫ್ರೀ ವಾಯ್ಸ್ ಕಾಲ್ ಹಾಗೂ ಪ್ರತಿ ದಿನ 2 GB ಹೈ ಸ್ಪೀಡ್ ಡಾಟಾ ಆಫರ್ ನೀಡಲಾಗಿದೆ.

BSNLನಿಂದ 1 ತಿಂಗಳು ಉಚಿತ ಬ್ರಾಡ್ ಬ್ಯಾಂಡ್!..

365 ರೂಪಾಯಿ ರಿಚಾರ್ಜ್ ಆಫರ್ ರಾಜ್ಯಗಳು:
ಕರ್ನಾಟಕ, ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ್, ಜಾರ್ಖಂಡ್, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ಕೋಲ್ಕತಾ ಹಾಗೂ ವೆಸ್ಟ್ ಬೆಂಗಾಲ್ , ನಾರ್ತ್ ಈಸ್ಟ್, ಮಹಾರಾಷ್ಟ್ರ, ಮಧ್ಯ ಪ್ರದೇಶ, ಚತ್ತೀಸ್‌ಘಡ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಪೂರ್ವ ಉತ್ತರ ಪ್ರದೇಶ ಹಾಗೂ ಪಶ್ಚಿಮ ಉತ್ತರ ಪ್ರದೇಶ.

2,399 ರೂಪಾಯಿ ಆಫರ್:
BSNL 600 ದಿನಗಳ ಹೊಸ ಪ್ಲಾನ್ ಪರಿಚಯಿಸಿದೆ. 2,399 ರೂಪಾಯಿಗೆ ಬರೋಬ್ಬರಿ 600 ದಿನಗಳ ವ್ಯಾಲಿಟಿಡಿ ನೀಡುತ್ತಿದೆ. ಪ್ರತಿ ದಿನ 250 ನಿಮಿಷ ಫ್ರೀ ಔಟ್ ಗೋಯಿಂಗ್ ಕಾಲ್ಸ್ ನೀಡಲಾಗಿದೆ. ಆದರೆ ಈ ಆಫರ್‌ನಲ್ಲಿ ಉಚಿತ ಡಾಟಾ ಸೇವೆ ಲಭ್ಯವಿರುವುದಿಲ್ಲ.

click me!