‘ರಿಮೂವ್‌ ಚೀನಾ ಆ್ಯಪ್‌’ ಕೂಡ ಪ್ಲೇಸ್ಟೋರಿಂದ ಔಟ್‌!

By Kannadaprabha NewsFirst Published Jun 4, 2020, 8:43 AM IST
Highlights

‘ರಿಮೂವ್‌ ಚೀನಾ ಆ್ಯಪ್‌’ ಕೂಡ ಪ್ಲೇಸ್ಟೋರಿಂದ ಔಟ್‌| ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆಗಿರುವ ಚೀನಾ ಆ್ಯಪ್‌ಗಳನ್ನು ಡಿಲೀಟ್‌ ಮಾಡಲೆಂದೇ ವಿನ್ಯಾಸಗೊಂಡ ಆ್ಯಪ್‌’

ನವದೆಹಲಿ(ಜೂ.04): ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆಗಿರುವ ಚೀನಾ ಆ್ಯಪ್‌ಗಳನ್ನು ಡಿಲೀಟ್‌ ಮಾಡಲೆಂದೇ ವಿನ್ಯಾಸಗೊಂಡು ಭಾರಿ ಜನಪ್ರಿಯವಾಗಿದ್ದ ‘ರಿಮೂವ್‌ ಚೀನಾ ಆ್ಯಪ್‌’ ಅನ್ನು ಗೂಗಲ್‌ ತನ್ನ ಪ್ಲೇಸ್ಟೋರ್‌ನಿಂದ ತೆಗೆದು ಹಾಕಿದೆ.

ಬಳಕೆದಾರರನ್ನು ತಪ್ಪುದಾರಿಗೆಳೆಯುವುದು ಹಾಗೂ ಇತರ ಆ್ಯಪ್‌ಗಳನ್ನು ನಿಷ್ಕಿ್ರಯಗೊಳಿಸುವಂತೆ ಮಾಡುವುದು ಗೂಗಲ್‌ ನಿಯಮಗಳಿಗೆ ವಿರುದ್ಧವಾಗಿದ್ದು, ಹಾಗಾಗಿ ಅದನ್ನು ತೆಗೆದು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೈಪುರ ಮೂಲದ ಒನ್‌ ಟಚ್‌ ಆ್ಯಪ್‌ ಅಭಿವೃದ್ಧಿಪಡಿಸಿದ್ದ ‘ರಿಮೂವ್‌ ಚೀನಾ ಆ್ಯಪ್‌’ ಅನ್ನು 50 ಲಕ್ಷ ಜನ ಡೌನ್‌ಲೋಡ್‌ ಮಾಡಿಕೊಂಡಿದ್ದರು.

ಚೀನಾ ಮೂಲದ ಟಿಕ್‌ಟಾಕ್‌ನ ಸ್ವದೇಶಿ ಆವೃತ್ತಿ ಎಂದು ಬಿಂಬಿತವಾಗಿದ್ದ ಮಿತ್ರೋಂ ಆ್ಯಪ್‌ ಅನ್ನು ಪ್ಲೇಸ್ಟೋರ್‌ನಿಂದ ಗೂಗಲ್‌ ಈಗಾಗಲೇ ತೆಗೆದಿದೆ.

click me!