
ಐಫೋನ್‌ಗೆ ಬೇಡಿಕೆ ಭಾರೀ ಹೆಚ್ಚಾಗಿದೆ. ಇದೀಗ ಆಪಲ್ ಸಂಸ್ಥೆಯು ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಒಂದನ್ನ ನೀಡಿದೆ. ಫೋನ್ ಖರೀದಿಗೆ ಹೊಸ ನಿಯಮ ಜಾರಿಗೆ ತಂದಿದೆ. ಅದರ ಹೊಸ ನಿಯಮ ಮೂರು ನಾಲ್ಕು ಮೊಬೈಲ್‌ಗಳನ್ನ ಹೊಂದುವ ಕನಸಿಗೆ ತಣ್ಣೀರು ಇಡಲಿದೆ.
ಹೌದು.. ಭಾರತದಲ್ಲಿ ಆಪಲ್ ತನ್ನ ಗ್ರಾಹಕರಿಗೆ ಟೆನ್ಷನ್ ತಂದಿಟ್ಟಿದೆ. ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ ಖರೀದಿಗೆ ಮಿತಿ ವಿಧಿಸಿದೆ. ಹೊಸ ನಿಯಮಗಳ ಪ್ರಕಾರ.. ಗ್ರಾಹಕರು ಈಗ ಸಂಪೂರ್ಣ ಐಫೋನ್ ಶ್ರೇಣಿಯಿಂದ ಗರಿಷ್ಠ ಎರಡು ಯೂನಿಟ್‌ಗಳನ್ನು ಖರೀದಿಸಬಹುದು. ಖರೀದಿದಾರರು ಆನ್‌ಲೈನ್‌ನಲ್ಲಿ ಮೂರು ಐಫೋನ್‌ಗಳನ್ನು ಖರೀದಿಸಲು ಪ್ರಯತ್ನಿಸಿದರೆ.. ಸಿಸ್ಟಂ ಅದನ್ನು ಸ್ವೀಕರಿಸುವುದಿಲ್ಲ. ಅಂದರೆ ನೀವು ಒಂದೇ ಬಾರಿಗೆ ಮೂರು ಫೋನ್ ಆರ್ಡರ್ ಮಾಡಲು ಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ.
ಇನ್ನು ಕಂಪನಿ ನಿಯಮಗಳ ಪ್ರಕಾರ.. ಗ್ರಾಹಕರು ಒಂದೇ ಮಾದರಿಯ 2 ಐಫೋನ್‌ಗಳನ್ನು ಏಕಕಾಲದಲ್ಲಿ ಆರ್ಡರ್ ಮಾಡಬಹುದು. ಜೊತೆಗೆ ತಮ್ಮ ಆಯ್ಕೆಯ ಎರಡು ವಿಭಿನ್ನ ಐಫೋನ್ ಮಾದರಿಗಳನ್ನು ಆಯ್ಕೆ ಮಾಡಬಹುದು. ಅಕ್ಟೋಬರ್ 23 ರಂದು ಪ್ರಾರಂಭವಾಗುವ ಐಫೋನ್ ಡ್ಯುಯೊದ ಅಧಿಕೃತ ಮಾರಾಟಕ್ಕೂ ಮುನ್ನ ಕಂಪನಿಯು ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದರಲ್ಲೂ ವಿಶೇಷವಾಗಿ ಐಫೋನ್ ಡ್ಯುಯೊ ಆಪಲ್‌ನ ಮೊದಲ ಮಡಿಸಬಹುದಾದ ಸ್ಮಾರ್ಟ್‌ಫೋನ್ ಆಗಿದೆ.
ಇದು ಹಬ್ಬದ ಸೀಸನ್. ಫೋನ್‌ಗಳಿಗೆ ಸಹಜವಾಗಿಯೇ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ಫೋನ್‌ಗಳನ್ನ ಮಾರಾಟ ಮಾಡೋದು ಕಷ್ಟ. ಜೊತೆಗೆ ಐಫೋನ್‌ಗೆ ಇರುವ ಬೇಡಿಕೆಯನ್ನೇ ಕೆಲವರು ಬಂಡವಾಳ ಮಾಡಿಕೊಂಡು ಬ್ಲಾಕ್ ಮಾರ್ಕೆಟ್ ಮೂಲಕ ಹಣದ ದಂಧೆಗೆ ಇಳಿಯುವ ಸಾಧ್ಯತೆ ಇದೆ. ಜೊತೆಗೆ ಹಠಾತ್ ಸ್ಟಾಕ್ ಕೊರತೆ ತಡೆಗಟ್ಟಲು ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇನ್ನು ಈ ನಿಯಮವು ಪ್ರೀಮಿಯಂ ಅಥವಾ ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳಿಗೆ ಸೀಮಿತವಾಗಿಲ್ಲ. ಇದು ಅಂಗಡಿಗಳಲ್ಲಿ ಲಭ್ಯವಿರುವ ಹಳೆಯ ಮತ್ತು ಹೊಸ ಎರಡೂ ಐಫೋನ್ ಮಾದರಿಗಳಿಗೆ ಅನ್ವಯ.
ಖರೀದಿ ಮಿತಿ ಐಫೋನ್ ಡ್ಯುಯೊ, ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಸೇರಿದಂತೆ ಎಲ್ಲಾ ಫೋನ್‌ಗಳಿಗೆ ಅನ್ವಯಿಸುತ್ತದೆ. ಗ್ರಾಹಕರು ಐಫೋನ್ ಡ್ಯುಯೊದ ಎರಡು ಯೂನಿಟ್‌ಗಳನ್ನು ಆರ್ಡರ್ ಮಾಡಬಹುದು. ಐಫೋನ್ ಡ್ಯುಯೊ ಜೊತೆಗೆ ಐಫೋನ್ 18 ಪ್ರೊ ಖರೀದಿಸಬಹುದು. ಐಫೋನ್ 17 ಸೇರಿದಂತೆ ಇತರ ಮಾದರಿಗಳಿಗೂ ಇದೇ ನಿಯಮ ಅನ್ವಯಿಸುತ್ತದೆ. ಗ್ರಾಹಕರು ಮೂರನೇ ಫೋನ್ ಖರೀದಿಸಲು ಬಯಸಿದರೆ ಅದು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ಗ್ರಾಹಕರು ಗರಿಷ್ಠ ಎರಡು ಐಫೋನ್‌ಗಳನ್ನು ಖರೀದಿಸಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.