Android Alert: ಪ್ಲೇಸ್ಟೋರ್‌ನಿಂದ 15 ಆ್ಯಪ್‌ ಬ್ಯಾನ್! ಕೂಡ್ಲೆ ಚೆಕ್ ಮಾಡ್ಕೊಳ್ಳಿ ನಿಮ್ಮ ಫೋನ್

By Web Desk  |  First Published Oct 22, 2019, 5:23 PM IST

ಮೊಬೈಲ್ ಮತ್ತು ಸಾಫ್ಟ್‌ವೇರ್‌ ಕಂಪನಿಗಳ ಮುಂದಿರುವ ಬಹುದೊಡ್ಡ ಸವಾಲು ಮಾಹಿತಿ ಸುರಕ್ಷತೆ. ಎಲ್ಲಾ ಸರಿಯಾಗಿದೆ ಎಂದು ಸುಮ್ಮನೆ ಕೂರುವ ಹಾಗಿಲ್ಲ, ಡೆಂಗ್ಯೂ ಸೊಳ್ಳೆ ತರಹ ಯಾವಾಗ, ಎಲ್ಲಿಂದ ಬರುತ್ತವೆ ಆ ಕಳ್ಳ ಆ್ಯಪ್‌ಗಳು ಎಂದು ಊಹಿಸುವಂತಿಲ್ಲ. ಪ್ಲೇಸ್ಟೋರ್‌ನೊಳಗೆ ನುಸುಳಿದ್ದ 15 ಆ್ಯಪ್‌ಗಳನ್ನು ಗಡಿಪಾರು ಮಾಡಲಾಗಿದೆ. ಇಲ್ಲಿದೆ ವಿವರ...     
 


ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯೊಳಗೆ... ಎಂಬಂತೆ ಈ ಡೇಂಜರಸ್ ಮೊಬೈಲ್ ಆ್ಯಪ್‌ಗಳ ಕಥೆ. ಗೂಗಲ್ ತನ್ನ ಪ್ಲೇಸ್ಟೋರನ್ನು ಇಂತಹ ಖತರ್ನಾಕ್ ಆ್ಯಪ್‌ಗಳಿಂದ ಸ್ವಚ್ಛವಾಗಿಡಬೇಕು ಎಂದು ಅದೆಷ್ಟು ಪ್ರಯತ್ನಿಸಿದರೂ, ಹೊಸ ನಿಯಮಗಳನ್ನು ಜಾರಿಗೆ ತಂದರೂ, ಅವುಗಳು ಮತ್ತೆ ಹೇಗೋ ವಕ್ಕರಿಸಿಬಿಡುತ್ತವೆ.

ಅದಕ್ಕಾಗಿ ಗೂಗಲ್, ತನ್ನ ಪ್ಲೇಸ್ಟೋರನ್ನು ಆಗಾಗ್ಗೆ ಗುಡಿಸಿ ಸ್ವಚ್ಛಮಾಡುತ್ತದೆ. ಕಸ ಎಂದು ಕಾಣಿಸುವ ಎಲ್ಲವನ್ನು ತೆಗೆದು ಬುಟ್ಟಿಗೆ ಹಾಕುತ್ತದೆ. ಕೆಲವೊಮ್ಮೆ ಒಂದೇ ಬಾರಿಗೆ ನೂರಾರು ಆ್ಯಪ್‌ಗಳನ್ನು ತೆಗೆದು ಬಿಸಾಡಿದ್ದು ಇದೆ.       

Tap to resize

Latest Videos

undefined

ಸೋಫೊಸ್ ಎಂಬ ಸೈಬರ್ ಸೆಕ್ಯೂರಿಟಿ ಸಂಸ್ಥೆಯು ಅಂತಹ 15 ಆ್ಯಪ್‌ಗಳ ಬಗ್ಗೆ ಗೂಗಲ್‌ಅನ್ನು ಎಚ್ಚರಿಸಿದೆ. ತಕ್ಷಣ ಕಾರ್ಯಪ್ರವೃತ್ತವಾದ ಗೂಗಲ್ ಅವುಗಳನ್ನು ಡಿಲೀಟ್ ಮಾಡಿದೆ.

ಇದನ್ನೂ ಓದಿ | ವೈರಸ್ ಭೀತಿ: ಪ್ಲೇಸ್ಟೋರ್‌ನಿಂದ 16 ಆ್ಯಪ್‌ ಡಿಲೀಟ್, ನಿಮ್ಮಲ್ಲಿದ್ರೆ ಕೂಡ್ಲೆ ತೆಗೀರಿ!...

ಈ ಬಾರಿಯೂ, ಅವುಗಳ ಪೈಕಿ ಹೆಚ್ಚಿನವು ಫೋಟೋ ಎಡಿಟಿಂಗ್‌ಗೆ ಸಂಬಂಧಿಸಿದ ಆ್ಯಪ್‌ಗಳಾಗಿದ್ದರೆ, ಕೆಲವೊಂದು ಸ್ಕ್ಯಾನಿಂಗ್ ಆ್ಯಪ್‌ಗಳು. ಸಾಮಾನ್ಯವಾಗಿ ‘ಸಜ್ಜನ’ ಆ್ಯಪ್ನ ಸೋಗಿನಲ್ಲಿ ಬಳಕೆದಾರರ ವೈಯುಕ್ತಿಕ ಮಾಹಿತಿಯನ್ನು ಕದಿಯುವುದು, ಖಾಸಗಿ ಫೋಟೋಗಳನ್ನು ಎಗರಿಸುವುದು, ಅಥವಾ ಅನುಮತಿ ಕೊಟ್ಟದ್ದಕ್ಕಿಂತ ಹೆಚ್ಚು ‘ಅಧಿಕ ಪ್ರಸಂಗ’ ಮಾಡೋದು... ಮುಂತಾದವುಗಳನ್ನು ಇವು ಮಾಡುತ್ತವೆ. ನಿಮ್ಮ ಮೊಬೈಲ್ ಪೋನ್‌ನಲ್ಲಿ ಆ ಆ್ಯಪ್‌ಗಳಿದ್ದರೆ ಕೂಡಲೇ ತೆಗೆದು ಹಾಕಿ.  

ಈ ಆ್ಯಪ್‌ಗಳ ಬಗ್ಗೆ ಇನ್ನೊಂದು ಕುತೂಹಲಕಾರಿ ವಿಷಯ ಏನಂದ್ರೆ, ಇವುಗಳು 2019ರ ಜನವರಿಯಿಂದ ಜುಲೈ ಅವಧಿಯಲ್ಲಿ ಹುಟ್ಟಿಕೊಂಡಿರುವ ಆ್ಯಪ್‌ಗಳು. ಈವರೆಗೆ ಸುಮಾರು 1.3 ಮಿಲಿಯನ್ ಮಂದಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | ಮತ್ತೆ 100 ಆ್ಯಪ್‌ಗಳು ಪ್ಲೇಸ್ಟೋರ್‌ನಿಂದ ಬ್ಯಾನ್! ನಿಮ್ಮ ಫೋನಲ್ಲೂ ಇದೆಯಾ?...

ನಮ್ಮ ಓದುಗರ ಅನುಕೂಲಕ್ಕಾಗಿ ಅವುಗಳ ಹೆಸರನ್ನು ಇಂಗ್ಲೀಷ್‌ನಲ್ಲಿ ಇಲ್ಲಿ ಪಟ್ಟಿ ಮಾಡಿದ್ದೇವೆ. ನೀವು ಕೂಡಾ ಆ 13 ಲಕ್ಷ ಮಂದಿಯ ಪೈಕಿ ಆಗಿದ್ದರೆ ಕೂಡಲೇ ಫೋನೆತ್ತಿಕೊಳ್ಳಿ, ಈ ಆ್ಯಪ್‌ಗಳನ್ನು ಅನ್‌ಇನ್ಸ್ಟಾಲ್ ಮಾಡಿ.... 

1. Image Magic 
2. Generate Elves 
3. Savexpense, 
4. QR Artifact
5. Find your Phone 
6. Scavenger Speed 
7. Auto Cut Out Pro, 
8. Read QR Code 
9. Flash on Calls & Msg
10. Photo Background
11. ImageProcessing 
12. Background Cut Out 
13. Background Cut Out (Haltermore), 
14. Auto Cut Out 
15. Auto Cut Out 2019 

click me!