ನವದೆಹಲಿ(ಮೇ.16): ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವರು ದುಡಿಮೆ ಇಲ್ಲದೆ, ವೇತನ ಇಲ್ಲದೆ ಸರ್ಕಾರದ ನೆರವು ಎದುರನೋಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಏರ್‌ಟೆಲ್ ಗ್ರಾಹಕರಿಗೆ ಉಚಿತ ರಿಚಾರ್ಜ್ ಆಫರ್ ಘೋಷಿಸಿದೆ.
ಕೊರೋನಾ ಸಂಕಷ್ಟದಲ್ಲಿ ಜಿಯೋ ಆಫರ್: ಪ್ರತಿ ತಿಂಗಳು 300 ನಿಮಿಷ ಔಟ್‌ಗೋಯಿಂಗ್ ಉಚಿತ!...
undefined
ಜಿಯೋ ತನ್ನ ಗ್ರಾಹಕರಿಗೆ ಉಚಿತ ವಾಯ್ಸ್ ಕಾಲ್ ಹಾಗೂ ಡೇಟಾ ಆಫರ್ ನೀಡಿತ್ತು. ಜಿಯೋ ಆಫರ್ ಬೆನ್ನಲ್ಲೇ ಇದೀಗ ಏರ್‌ಟೆಲ್ ಗ್ರಾಹಕರಿಗೆ ಫ್ರೀ ರಿಚಾರ್ಜ್ ಹಾಗೂ ಡಬಲ್ ಕೂಪನ್ ಆಫರ್ ನೀಡಿದೆ. ಈ ಡಬಲ್ ಕೂಪನ್ ಆಫರ್ ಮೂಲಕ 79 ರೂಪಾಯಿಗಳ ರಿಚಾರ್ಜ್ ಮಾಡಿದರೆ, ಏರ್‌ಟೆಲ್ ಉಚಿತವಾಗಿ 79 ರೂಪಾಯಿ ರಿಚಾರ್ಜ್ ಮಾಡಿಕೊಡಲಿದೆ.
ಉಚಿತ ವಾಯ್ಸ್ ಕಾಲ್ ಹಾಗೂ ಡೇಟಾ ಯೋಜನೆಗಾಗಿ ಏರ್‌ಟೆಲ್ 270 ಕೋಟಿ ರೂಪಾಯಿ ವ್ಯಯಿಸುತ್ತಿದೆ. ಈ ಮೂಲಕ ಕಡಿಮೆ ಆದಾಯ ಹಾಗೂ ಉದ್ಯೋಗ ಕಡಿತಗೊಂಡ 5.5 ಕೋಟಿ ಗ್ರಾಹಕರಿಗೆ ಈ ಉಚಿತ ಆಫರ್ ನೀಡುತ್ತಿದೆ. ಉಚಿತ ರಿಚಾರ್ಜ್ ಆಫರ್‌ನಲ್ಲಿ ಏರ್‌ಟೆಲ್ ಗ್ರಾಹಕರು 39 ರೂಪಾಯಿ ಟಾಕ್ ಟೈಮ್, 100 MB ಡೇಟಾ ಸಿಗಲಿದೆ. ಇನ್ನು 28 ದಿನಗಳ ವ್ಯಾಲಿಟಿಡಿ ಸಿಗಲಿದೆ.