ಓದಿದ ಬಳಿಕ ಮೆಸೇಜ್‌ ಡಿಲೀಟ್‌ ಆಗಲು ಫೇಸ್ಬುಕ್‌ ಮೆಸೆಂಜರ್‌ನಲ್ಲಿ ‘ವ್ಯಾನಿಷ್‌’!

By Kannadaprabha NewsFirst Published Nov 14, 2020, 7:48 AM IST
Highlights

ಚಾಟ್‌ ಬಾಕ್ಸ್‌ನಲ್ಲಿ ಸಾವಿರಾರು ಮೆಸೇಜ್‌ಗಳ ಕಿರಿ ಕಿರಿಯನ್ನು ತಡೆಯಲು ಈ ಹೊಸ ಫೀಚರ್‌| ಓದಿದ ಬಳಿಕ ಮೆಸೇಜ್‌ ಡಿಲೀಟ್‌ ಆಗಲು ಫೇಸ್ಬುಕ್‌ ಮೆಸೆಂಜರ್‌ನಲ್ಲಿ ‘ವ್ಯಾನಿಷ್‌’

ವಾಷಿಂಗ್ಟನ್(ನ.14):  ಓದಿದ ಮೆಸೇಜುಗಳು ಸ್ವಯಂ ಡಿಲೀಟ್‌ ಆಗುವ ಹಾಗೂ ಚಾಟ್‌ ಮುಗಿಸಿದ ಬಳಿಕ ಸ್ವಯಂ ಚಾಲಿತವಾಗಿ ಅಳಿಸಿ ಹೋಗುವ ‘ವ್ಯಾನಿಷ್‌ ಮೋಡ್‌’ ಮಾದರಿಯನ್ನು ಫೇಸ್‌ಬುಕ್‌ ಮೆಸೆಂಜರ್‌ ಪರಿಚಯಿಸಿದೆ. ಚಾಟ್‌ ಬಾಕ್ಸ್‌ನಲ್ಲಿ ಸಾವಿರಾರು ಮೆಸೇಜ್‌ಗಳ ಕಿರಿ ಕಿರಿಯನ್ನು ತಡೆಯಲು ಈ ಹೊಸ ಫೀಚರ್‌ ಅನ್ನು ಆರಂಭಿಸಿದ್ದಾಗಿ ಫೇಸ್‌ಬುಕ್‌ ಹೇಳಿದೆ.

ಈ ಫೀಚರ್‌ ಅನ್ನು ಆ್ಯಕ್ಟಿವ್‌ ಮಾಡಲು ಚಾಟ್‌ ಬಾಕ್ಸ್‌ನಲ್ಲಿ ಅಪ್‌ವರ್ಡ್‌ ಸ್ವೈಪ್‌ ಮಾಡಬೇಕು. ಇನ್ನೊಮ್ಮೆ ಹೀಗೆ ಮಾಡಿದರೆ ಸಾಮಾನ್ಯ ಮಾದರಿಗೆ ಮರಳುತ್ತದೆ. ಇಬ್ಬರೂ ಬಳಕೆದಾರರು ವ್ಯಾನಿಷ್‌ ಮೋಡ್‌ ಆ್ಯಕ್ಟಿವ್‌ ಮಾಡಿದರೆ, ಚಾಟ್‌ಗಳು ಸ್ವಯಂ ಚಾಲಿತವಾಗಿ ಡಿಲೀಟ್‌ ಆಗಲಿವೆ. ವ್ಯಾನಿಷ್‌ ಮೋಡ್‌ನಲ್ಲಿ ಸ್ಕ್ರೀನ್‌ ಶಾಟ್‌ ತೆಗೆದರೆ ಅದರ ಮಾಹಿತಿಯನ್ನೂ ಕೂಡ ನೋಟಿಫಿಕೇಶನ್‌ ಮೂಲಕ ತಿಳಿಸುತ್ತದೆ.

ಸದ್ಯ ಈಗ ಅಮೆರಿಕ ಮತ್ತು ಕೆಲ ರಾಷ್ಟ್ರಗಳಲ್ಲಿ ಮಾತ್ರವೇ ಈ ಆಯ್ಕೆ ಇದ್ದು, ಸದ್ಯದಲ್ಲೇ ಬೇರೆ ರಾಷ್ಟ್ರಗಳಿಗೂ ವಿಸ್ತರಿಸುವುದಾಗಿ ಫೇಸ್‌ಬುಕ್‌ ಹೇಳಿದೆ.

click me!