ಕೇವಲ 10 ರೂಪಾಯಿಯಲ್ಲಿ ಇಡೀ ವರ್ಷ ಸಿಮ್ ಆಕ್ಟಿವ್ ಮಾಡಿಕೊಳ್ಳಿ - TRAI ಹೊಸ ನಿಯಮ

TRAI ಹೊಸ ನಿಯಮ ಜಾರಿಗೊಳಿಸಿದ್ದು, ಕೇವಲ ₹10 ರೀಚಾರ್ಜ್‌ನಲ್ಲಿ ಗ್ರಾಹಕರು ವರ್ಷಪೂರ್ತಿ ತಮ್ಮ ಸಿಮ್ ಅನ್ನು ಆಕ್ಟಿವ್ ಆಗಿರಿಸಿಕೊಳ್ಳಬಹುದು. ಈ ನಿಯಮ ಗ್ರಾಹಕರ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಡಿಜಿಟಲ್ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ.


ನವದೆಹಲಿ: ಟೆಲಿಕಾಂ ರೆಗ್ಯುಲೇಟರಿ ಆಫ್ ಇಂಡಿಯಾ (TRAI) ಮಹತ್ವದ ಹೆಜ್ಜೆಯನ್ನು ಇರಿಸಿದೆ.  ದುಬಾರಿ  ರೀಚಾರ್ಜ್‌ನಿಂದ ಎಲ್ಲಾ ರೀತಿಯ ಸೇವೆಗಳನ್ನು ಪಡೆಯಲು ಸಾಧ್ಯವಾಗದ ಹಿನ್ನೆಲೆ TRAI ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. TRAI-2025ರ ನಿಯಮಗಳ ಪ್ರಕಾರ, ಕೇವಲ  10 ರೂಪಾಯಿಯ ರೀಚಾರ್ಜ್‌ನೊಂದಿಗೆ ಗ್ರಾಹಕರು ಮೊಬೈಲ್‌ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು TRAI ಹೊಂದಿದೆ.

ಈ ಹೊಸ  ನಿಯಮಗಳನ್ನು TRAI ಗ್ರಾಹಕರ  ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. 2024ರ ಜುಲೈನಲ್ಲಿ ಮೂರು ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಟ್ಯಾರಿಫ್ ಬೆಲೆಯನ್ನು ಏರಿಕೆ ಮಾಡಿದ್ದು, ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿತ್ತು. ಇತ್ತ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ನೀಡುತ್ತಿದ್ದರೂ, ಗ್ರಾಹಕರು ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆ  TRAI ಕೇವಲ10 ರೂಪಾಯಿ ರೀಚಾರ್ಜ್ ಮೂಲಕ ಸಿಮ್ ಸಕ್ರಿಯವಾಗಿರಿಸಿಕೊಳ್ಳಬಹುದು.

Latest Videos

TRAI ಹೊಸ  ನಿಯಮದಿಂದ ಗ್ರಾಹಕರಿಗಾಗುವ ಪ್ರಯೋಜನೆಗಳು

  • ಗ್ರಾಹಕರು ಸಿಮ್  ಅಕ್ಟಿವ್  ಆಗಿರಿಸಿಕೊಳ್ಳಲು ಇನ್ಮುಂದೆ ದೊಡ್ಡಮೊತ್ತದ ರೀಚಾರ್ಜ್ ಮಾಡಿಕೊಳ್ಳುವ ಅಗತ್ಯವಿಲ್ಲ. ಕೈಗೆಟುಕುವ ದರದಲ್ಲಿ ಅಂದ್ರೆ ಕನಿಷ್ಠ 10 ರೂಪಾಯಿ ರೀಚಾರ್ಜ್‌ನೊಂದಿಗೆ ಡಿಜಿಟಲ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.
  • ಗ್ರಾಹಕರು ತಮ್ಮ ಆರ್ಥಿಕ ಮತ್ತು ಅಗತ್ಯಕ್ಕನುಸಾರವಾಗಿ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಮಾಡಿಕೊಳ್ಳುವ ಆಯ್ಕೆಯನ್ನ TRAI ನೀಡಿದೆ.  
  • ಟೆಲಿಕಾಂ ಕಂಪನಿಗಳು ಎಲ್ಲಾ ವರ್ಗದ ಬಳಕೆದಾರರಿಗೆ ಅನುಕೂಲವಾಗುವಂತೆ ಗ್ರಾಹಕಸ್ನೇಹಿ ರೀಚಾರ್ಜ್ ಪ್ಲಾನ್‌ಗಳು ನೀಡುತ್ತಿವೆ. ಇದು ಗ್ರಾಹಕರಿಗೆ ಹೆಚ್ಚಿನ ಹೊರೆ ಆಗಲಾರದು.
  • ದುಬಾರಿ ಬೆಲೆಗಳಿಂದ ಡಿಜಿಟಲ್ ಸೇವೆಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದ ಗ್ರಾಮೀಣ ಬಳಕೆದಾರರಿಗೆ ಈ ನಿಯಮ ಅನುಕೂಲವಾಗಲಿದೆ. ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಗಳು ಗ್ರಾಮೀಣ ಗ್ರಾಹಕರನ್ನು ಆಕರ್ಷಸುತ್ತವೆ.

ಇದನ್ನೂ ಓದಿ: BSNL: ಅತೀ ಕಡಿಮೆ ಬೆಲೆಗೆ ಬರೋಬ್ಬರಿ 425 ದಿನಗಳ ರೀಚಾರ್ಜ್ ಪ್ಲಾನ್ , 2GB ಡೇಟಾ, ಆನ್‌ಲಿಮಿಟೆಡ್ ಕಾಲ್

ಟೆಲಿಕಾಂ ರೆಗ್ಯುಲೇಟರಿ ಆಫ್ ಇಂಡಿಯಾ ಪ್ರಕಟಿಸಿರುವ ಹೊಸ ನಿಯಮಗಳ ನೇರ ಪರಿಣಾಮ ಖಾಸಗಿ ಟೆಲಿಕಾಂ ಕಂಪನಿಗಳ ಮೇಲೆ ಬೀರಲಿದೆ. TRAI ನಿಯಮದಂತೆ ಟೆಲಿಕಾಂ ಕಂಪನಿಗಳು ತನ್ನ ಎಲ್ಲಾ ರೀಚಾರ್ಜ್ ಪ್ಲಾನ್‌ಗಳನ್ನು ಬಲಿದಲಿಸಿಕೊಳ್ಳಬೇಕಾಗುತ್ತದೆ. ಗ್ರಾಹಕರನ್ನು ಸೆಳೆಯಲು ಎದುರಾಳಿ ಟೆಲಿಕಾಂ ಕಂಪನಿಗಳಿಗಿಂತ ಅತ್ಯಾಕರ್ಷಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆಗೊಳಿಸಬೇಕಾಗುತ್ತದೆ. ಈ ಹೊಸ ನಿಯಮ ಭಾರತ  ಸರ್ಕಾರದ "ಡಿಜಿಟಲ್ ಇಂಡಿಯಾ" ಮಿಷನ್‌ಗೆ ಬಲ ತುಂಬಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ. ಜನರು ಡಿಜಿಟಲ್ ವಹಿವಾಟು ನಡೆಸಲು ಸಹ ಈ ನಿಯಮಗಳು ಪ್ರೇರೇಪಿಸಲಿವೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಜಿಯೋ ಸಂಚಲನ: 49 ರೂ.ಗೆ ಅನ್​ಲಿಮಿಟೆಡ್​ ಡೇಟಾ- ಯೂಟ್ಯೂಬ್​ ಪ್ರೀಮಿಯಂ ಉಚಿತ! ಡಿಟೇಲ್ಸ್​ ಇಲ್ಲಿದೆ

click me!