ಬೈಎಲೆಕ್ಷನ್ ಗೆಲ್ಲಲು ಜೆಡಿಎಸ್ ಸಾಲಮನ್ನಾ 'ಅಸ್ತ್ರ'

By Kannadaprabha NewsFirst Published Oct 16, 2019, 2:28 PM IST
Highlights

ಉಪಚುನಾವಣೆಯನ್ನು ಎದುರಿಸಲು ಪಕ್ಷಗಳು ಸಿದ್ಧತೆ ಆರಂಭಿಸಿ ಆಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಿದ್ದರೂ, ಪಕ್ಷದ ಪರ ಪ್ರಚಾರ ನಡೆಸಲು ಆರಂಭಿಸಿಬಿಟ್ಟಿದ್ದಾರೆ. ಜೆಡಿಎಸ್ ಬೈ ಎಲೆಕ್ಷನ್ ಗೆಲ್ಲಲು ಮಹಾಅಸ್ತ್ರ ಒಂದನ್ನು ಪ್ರಯೋಗಿಸಲು ಸಿದ್ಧವಾಗಿದೆ. ಅದೂ ಅಂಕಿ ಅಂಶ, ಮಾಹಿತಿ ರೂಪದಲ್ಲಿ. ಏನಿದು ಜೆಡಿಎಸ್ ಮಹಾ ಅಸ್ತ್ರ, ತಿಳಿಯಲು ಈ ಸುದ್ದಿ ಓದಿ.

ಮಂಡ್ಯ(ಅ.16): ಉಪಚುನಾವಣೆಯನ್ನು ಎದುರಿಸಲು ಪಕ್ಷಗಳು ಸಿದ್ಧತೆ ಆರಂಭಿಸಿ ಆಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಿದ್ದರೂ, ಪಕ್ಷದ ಪರ ಪ್ರಚಾರ ನಡೆಸಲು ಆರಂಭಿಸಿಬಿಟ್ಟಿದ್ದಾರೆ. ಜೆಡಿಎಸ್ ಬೈ ಎಲೆಕ್ಷನ್ ಗೆಲ್ಲಲು ಮಹಾಅಸ್ತ್ರ ಒಂದನ್ನು ಪ್ರಯೋಗಿಸಲು ಸಿದ್ಧವಾಗಿದೆ. ಅದೂ ಅಂಕಿ ಅಂಶ, ಮಾಹಿತಿ ರೂಪದಲ್ಲಿ.

ಬೈಎಲೆಕ್ಷನ್ ಗೆಲ್ಲಲು ಜೆಡಿಎಸ್ ನಾಯಕರು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಉಪಚುನಾವಣೆಯಲ್ಲಿ 'ಸಾಲಮನ್ನಾ' ಅಸ್ತ್ರ ಪ್ರಯೋಗಕ್ಕೆ ದಳಪತಿಗಳು ಮುಂದಾಗಿದ್ದಾರೆ.

ಸಾಕ್ಷಿಯೊಂದಿಗೆ ಸಜ್ಜಾದ ಜೆಡಿಎಸ್ ನಾಯಕರು:

ಮೈತ್ರಿ ಸರ್ಕಾರದಲ್ಲಿ ರೈತರ ಸಾಲಮನ್ನಾ ಆಗಿಲ್ಲ ಎಂಬ ವಿಚಾರವಾಗಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದ್ದು, ಇದರ ಬಿಸಿ ಚುನಾವಣೆಗೆ ತಟ್ಟದ ಹಾಗೆ ಯೋಜನೆ ರೂಪಿಸಿಕೊಂಡಿದ್ದಾರೆ ಮುಖಂಡರು. ಸಾಲಮನ್ನಾ ಮಾಡಿಲ್ಲ ಎನ್ನುವವರಿಗೆ ಸಾಕ್ಷಿ ಸಮೇತವಾಗಿ ಸಾಲಮನ್ನಾ ಮಾಡಿರುವುದನ್ನು ಮನದಟ್ಟು ಮಾಡಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.

ಸಾಕ್ಷಿಯೊಂದಿಗೆ ಜೆಡಿಎಸ್ ನಾಯಕರ ಹೊಸ ಅಸ್ತ್ರ:

ಸಾಲಮನ್ನಾ ಯೋಜನೆಯ ಲಾಭ ಪಡೆದ ರೈತರ ಅಂಕಿಅಂಶಗಳ ಬಗ್ಗೆ ಪುಸ್ತಕ ಬಿಡುಗಡೆ ಮಾಡಲಾಗಿದ್ದು, ರೈತರ ಬೆಳೆ ಸಾಲಮನ್ನಾ ಲಕ್ಷಾಂತರ ರೈತರಿಗೆ ಅನುಕೂಲ ಎಂಬ ಹೆಸರಿನ ಪುಸ್ತಕ ಬಿಡುಗಡೆ ಮಾಡಲಾಗಿದೆ. ಮಾಜಿ ಸಂಸದ ಶಿವರಾಮೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.

ಪ್ರಚಾರಕ್ಕಾಗಿ ರಾಜೀನಾಮೆ ವಿಚಾರ ತೇಲಿ ಬಿಟ್ಟರಾ ಸಾ.ರಾ.ಮಹೇಶ್?.

ಮೈತ್ರಿ ಸರ್ಕಾರದಲ್ಲಿ ರೈತರ ಸಾಲಮನ್ನಾ ಆಗಿಲ್ಲ ಎಂದು ಮಾಧ್ಯಮಗಳು ಹಾಗೂ ಬಿಜೆಪಿ ಸರ್ಕಾರ ಆರೋಪ ಮಾಡ್ತಿವೆ. ಆದರೆ ವಾಸ್ತವದಲ್ಲಿ ಲಕ್ಷಾಂತರ ರೈತರು ಸಾಲಮನ್ನಾದ ಲಾಭ ಪಡೆದಿದ್ದಾರೆ.  ಮಂಡ್ಯ ಜಿಲ್ಲೆ ಒಂದರಲ್ಲೇ ಸಹಕಾರಿ ಬ್ಯಾಂಕ್‌ಗಳಲ್ಲಿ 418.43 ಕೋಟಿ ರೈತರ ಸಾಲಮನ್ನಾ ಆಗಿದೆ. 136ಕೋಟಿ ರೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲಮನ್ನಾ ಆಗಿದೆ. ಜಿಲ್ಲೆಯ 92350 ಮಂದಿ ರೈತರು ಸಾಲಮನ್ನಾದ ಲಾಭ ಪಡೆದಿದ್ದಾರೆ ಎಂದಿದ್ದಾರೆ.

ಶಾಸಕ ಸ್ಥಾನಕ್ಕೆ JDS ಶಾಸಕ ಸಾ ರಾ ಮಹೇಶ್ ರಾಜೀನಾಮೆ!

ಬಿಜೆಪಿ ಹಾಗೂ ಮಾಧ್ಯಮಗಳು ಟೀಕಿಸುತ್ತಿದ್ದ ಸಾಲಮನ್ನಾ ವಿಚಾರವನ್ನೇ ಅಸ್ತ್ರ ಮಾಡಿಕೊಂಡು ಅಂಕಿಅಂಶವಿರುವ ಪುಸ್ತಕಗಳನ್ನು ಬಿಡುಗಡೆ ಮಾಡಿ ಉಪಚುನಾವಣೆಗೆ ಮೊದಲ ಹಂತದಲ್ಲೇ ಜೆಡಿಎಸ್ ಭರ್ಜರಿ ತಯಾರಿ ಆರಂಭಿಸಿದೆ.

'ಗುರುವಾರ ಚಾಮುಂಡಿ ಬೆಟ್ಟಕ್ಕೆ ಬನ್ನಿ, ಜತೆಗೆ ಕೊಂಡುಕೊಂಡವರನ್ನು ಕರೆತನ್ನಿ'.

click me!