ಮಲೆನಾಡಿನಲ್ಲಿ ಮಳೆಯಾಗುವುದು ಸಾಮಾನ್ಯ. ಆದರೆ ಮಂಡ್ಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಳೆಯಾಗುವುದು ವಿರಳ. ಮಳೆಯಾಗಿ ಹೊಲ, ಗದ್ದೆ, ರಸ್ತೆಗಳು ಜಲಾವೃತವಾಗುವುದಂತೂ ವಿಶೇಷ. ಕಳೆದ ಕೆಲವು ದಿನಗಳಿಂದ ಪ್ರತಿದಿನ ರಾತ್ರಿ ಮಳೆಯಾಗುತ್ತಿದ್ದು, ಮನೆಗಳು ಕುಸಿದು ಬಿದ್ದು ಲಕ್ಷಾಂತರ ನಷ್ಟ ಉಂಟಾಗಿದೆ.
ಮಂಡ್ಯ(ಅ.08): ಮಲೆನಾಡಿನಲ್ಲಿ ಮಳೆಯಾಗುವುದು ಸಾಮಾನ್ಯ. ಆದರೆ ಮಂಡ್ಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಳೆಯಾಗುವುದು ವಿರಳ. ಮಳೆಯಾಗಿ ಹೊಲ, ಗದ್ದೆ, ರಸ್ತೆಗಳು ಜಲಾವೃತವಾಗುವುದಂತೂ ವಿಶೇಷ.
ಕಳೆದ ಕೆಲವು ದಿನಗಳಿಂದ ಪ್ರತಿದಿನ ರಾತ್ರಿ ಮಳೆಯಾಗುತ್ತಿದ್ದು, ಮನೆಗಳು ಕುಸಿದು ಬಿದ್ದು ಲಕ್ಷಾಂತರ ನಷ್ಟ ಉಂಟಾಗಿದೆ. ಹೊಲ, ಕಬ್ಬಿನ ಗದ್ದೆಗಳು, ರಸ್ತೆಗಳು ಬಹುತೇಕ ಜಲಾವೃತವಾಗಿವೆ.
undefined
ಆಯುಧ ಪೂಜೆ ಮುಗಿಸಿ ಈಜಲು ಹೋಗಿದ್ದ ಮೂವರು ಬಾಲಕರು ಸಾವು
ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಮೂರು ಮನೆಗಳು ಕುಸಿದು ಲಕ್ಷಾಂತರ ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ಹಾನಿಯಾಗಿರುವ ಘಟನೆ ನಡೆದಿದೆ. ಮಳೆ ಜೋರಾದಂತೆ ಗೋಡೆಯ ಇಟ್ಟಿಗೆ ಹಾಗೂಹಂಚುಗಳು ಬೀಳತೊಡಗಿವೆ.
ಮಂಡ್ಯ: ಜಿಲ್ಲಾದ್ಯಂತ ಮಳೆ, ಜಮೀನು, ರಸ್ತೆ ಜಲಾವೃತ
ಇದರಿಂದ ಅತಂಕಗೊಂಡ ಮನೆಯವರು ಮನೆಯಿಂದ ಹೊರಬಂದಿದ್ದಾರೆ. ಗೋಡೆ ಕುಸಿತಕ್ಕೆ, ಮನೆಯಲ್ಲಿ ಸಂಗ್ರಹಿಸಿದ್ದ ರಾಗಿ, ಭತ್ತದ ಮೂಟೆಗಳು ಸೇರಿದಂತೆ ಅಡುಗೆ ಪದಾರ್ಥಗಳು ಸಹ ಮಣ್ಣುಪಾಲಾಗಿವೆ. ಸೂಕ್ತ ಪರಿಹಾರ ನೀಡುವಂತೆ ಮನೆ ಕಳೆದುಕೊಂಡ ಸಂತ್ರಸ್ತರು ಒತ್ತಾಯಿಸಿದ್ದಾರೆ.
ಆಟೋ ಡ್ರೈವರ್ ಕೊಲೆ ಮಾಡಿ ಜಮೀನಿಗೆ ಎಸೆದು ಪರಾರಿ