ಆಟೋ ಡ್ರೈವರ್ ಕೊಲೆ ಮಾಡಿ ಜಮೀನಿಗೆ ಎಸೆದು ಪರಾರಿ

By Web Desk  |  First Published Oct 8, 2019, 11:32 AM IST

ಆಟೋ ರಿಕ್ಷಾ ಚಾಲಕನನ್ನು ಕೊಲೆ ಮಾಡಿ ಜಮೀನಿನಲ್ಲಿ ಎಸೆದು ಹೋಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಸಮೀಪದ ಸಾತನೂರಿನಲ್ಲಿ ಘಟನೆ ನಡೆದಿದ್ದು, ಹಳೆ ವೈಷಮ್ಯದಿಂದ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.


ಮಂಡ್ಯ(ಅ.08): ಆಟೋ ರಿಕ್ಷಾ ಚಾಲಕನನ್ನು ಕೊಲೆ ಮಾಡಿ ಜಮೀನಿನಲ್ಲಿ ಎಸೆದು ಹೋಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಸಮೀಪದ ಸಾತನೂರಿನಲ್ಲಿ ಘಟನೆ ನಡೆದಿದ್ದು, ಹಳೆ ವೈಷಮ್ಯದಿಂದ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಮಂಡ್ಯದ ಕೆರೆ ಅಂಗಳದ ನಿವಾಸಿ ಸಾಧಿಪ್ ಪಾಷಾ(32) ಮೃತಪಟ್ಟ ದುರ್ದೈವಿ. ಸೋಮವಾರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Tap to resize

Latest Videos

undefined

ಆಯುಧ ಪೂಜೆ ಮುಗಿಸಿ ಈಜಲು ಹೋಗಿದ್ದ ಮೂವರು ಬಾಲಕರು ಸಾವು

ಆಟೋ ಚಾಲಕನನ್ನು ಸಾಧಿಪ್ ಪಾಷಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ನಂತರ ರಸ್ತೆ ಪಕ್ಕದ ಜಮೀನಿಗೆ ಎಸೆಯಲಾಗಿದೆ. ಹಳೇ ದ್ವೇಷವೇ ಸಾಧಿಪ್ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಪ್ರಿಯತಮೆಯ ಪತಿಯನ್ನೇ ಗುಂಡಿಟ್ಟು ಕೊಂದ ಪ್ರಿಯಕರ

click me!