ಬಹಳಷ್ಟು ಜನರಿಗೆ ನೆರವಾಗಲಿರುವ ಕುಡಿಯು ಯೋಜನೆಗೂ ಕಾಂಗ್ರೆಸ್ ಶಾಸಕ ಅಡ್ಡಿಪಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ನಾಗಮಂಗಲ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಅಡ್ಡಿ ಪಡಿಸಿದ್ದಾರೆ.
ಮಂಡ್ಯ(ಅ.23): ಬಹಳಷ್ಟು ಜನರಿಗೆ ನೆರವಾಗಲಿರುವ ಕುಡಿಯು ಯೋಜನೆಗೂ ಕಾಂಗ್ರೆಸ್ ಶಾಸಕ ಅಡ್ಡಿಪಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ನಾಗಮಂಗಲ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಅಡ್ಡಿ ಪಡಿಸಿದ್ದಾರೆ.
ನಾಗಮಂಗಲ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅಡ್ಡಿಪಡಿಸಿದ್ದು, ಅಂತಿಮ ಹಂತದಲ್ಲಿ ಯೋಜನೆಗೆ ಅಡ್ಡಗಾಲು ಹಾಕಿದ್ದಾರೆ.
ಏಕಾಏಕಿ ಸುರಿದ ಮಳೆಗೆ ಭತ್ತದ ಗದ್ದೆ ಸಂಪೂರ್ಣ ನಾಶ..!
ನಾಗಮಂಗಲ-ಕುಣಿಗಲ್ ಗಡಿಯ ಮಾರ್ಕೋನಹಳ್ಳಿ ಡ್ಯಾಂ ನಿಂದ ನೀರು ಪೂರೈಸುವ ಯೋಜನೆ ಶೇ.90 ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿ ಯೋಜನೆಗೆ ಕೈ ಶಾಸಕ ಅಡ್ಡಿಪಡಿಸಿದ್ದಾರೆ. ನೀರು ಪಂಪ್ ಮಾಡುವ ಜಾಕ್ ವೆಲ್ ಅಳವಡಿಕೆಯಿಂದ ಡ್ಯಾಂಗೆ ಅಪಾಯವಾಗಲಿದೆ ಎಂಬ ನೆಪವೊಡ್ಡಿ ಕಾಮಗಾರಿ ತಡೆದಿದ್ದಾರೆ.
168 ಕೋಟಿ ರೂಪಾಯಿ ವೆಚ್ಚದ 128 ಗ್ರಾಮ, ಆದಿಚುಂಚನಗಿರಿ ಕ್ಷೇತ್ರಕ್ಕೆ ನೀರು ಪೂರೈಸುವ ಯೋಜನೆ ಇದಾಗಿದ್ದು, ಜಾಕ್ ವೆಲ್ ಅಳವಡಿಸೋದಾದ್ರೆ ನನ್ನ ಸಮಾಧಿ ಮೇಲೆ ಅಳವಡಿಸಲೆಂದು ರಂಗನಾಥ್ ಸವಾಲು ಹಾಕಿದ್ದಾರೆ.
ಸಂಧಾನ ವಿಫಲ:
ಕುಣಿಗಲ್ ಶಾಸಕ ಕಾಮಗಾರಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮಂಡ್ಯ ಡಿಸಿ, ತುಮಕೂರು ಎಡಿಸಿ ನೇತೃತ್ವದಲ್ಲಿ ನಡೆದ ಸಂಧಾನ ಯತ್ನವೂ ವಿಫಲವಾಗಿದೆ. ಕಾಮಗಾರಿಗೆ ಕೈ ಶಾಸಕನ ಅಡ್ಡಿಯಿಂದಾಗಿ, ಮಾರ್ಕೋನಹಳ್ಳಿ ಡ್ಯಾಂ ಬಳಿ ನಡೆದ ಸಭೆಯಲ್ಲಿ ಮಂಡ್ಯ ಡಿಸಿ, ತುಮಕೂರು ಎಡಿಸಿ ಸಂಧಾನಕ್ಕೆ ಯತ್ನಿಸಿದರೂ ಇದು ಫಲ ಕೊಟ್ಟಿಲ್ಲ. ಸಭೆಯಲ್ಲಿ ಭಾಗಿಯಾಗಿದ್ದ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ, ಕುಣಿಗಲ್ ಶಾಸಕ ರಂಗನಾಥ್ ಭಾಗಿಯಾಗಿದ್ದರು.
ತಾಂತ್ರಿಕ ದೋಷ ಇಲ್ಲ ಎಂದಾಗ ವರಸೆ ಬದಲಿಸಿದ ಶಾಸಕ:
ತಾಂತ್ರಿಕ ದೋಷ ಇಲ್ಲ, ಜಾಕ್ ವೆಲ್ ನಿಂದ ಅಣೆಕಟ್ಟೆಗೆ ಅಪಾಯವಿಲ್ಲ ಎಂದು ಅಧಿಕಾರಿಗಳಿಂದ ಮನವರಿಕೆ ಮಾಡಿದರೂ ರಂಗನಾಥ್ ಮಾತ್ರ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ. ತಾಂತ್ರಿಕ ದೋಷ ಇಲ್ಲ ಎನ್ನುತ್ತಿದ್ದಂತೆ ಕುಣಿಗಲ್ ತಾಲೂಕಿಗೆ ನೀರಿಲ್ಲ. ಎಲ್ಲಿಂದ ನಿಮಗೆ ನೀರು ಕೊಡೋದು ಎಂದು ಶಾಸಕ ರಂಗನಾಥ್ ವರಸೆ ಬದಲಿಸಿದ್ದಾರೆ.
20 ಅಡಿಗಳಷ್ಟು ಕುಸಿದ ಚಾಮುಂಡಿ ಬೆಟ್ಟ ರಸ್ತೆ: ಸಂಚಾರ ನಿರ್ಬಂಧ
ಗೌರವ ಕೊಡಬೇಕಿತ್ತು ಕೊಟ್ಟಿದ್ದೇವೆ. ಆದ್ರೆ ಕಾಮಗಾರಿ ನಿಲ್ಲಲು ಬಿಡುವುದಿಲ್ಲ. ನನ್ನ ಕ್ಷೇತ್ರದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮಾಡೇ ತೀರುತ್ತೇವೆಂದು ನಾಗಮಂಗಲ ಶಾಸಕ ಸವಾಲು ಹಾಕಿದ್ದಾರೆ. ಅಂತಿಮವಾಗಿ ಸಂಸದರು, ಕ್ಷೇತ್ರದ ಮುಖಂಡರ ಜತೆ ಚರ್ಚಿಸುವುದಾಗಿ ಹೇಳಿ ರಂಗನಾಥ್ ಸಭೆಯಿಂದ ನಿರ್ಗಮಿಸಿದ್ದಾರೆ.