ಮಂಡ್ಯ: ಭಾರಿ ಮಳೆಗೆ ಕೆರೆ, ಕಟ್ಟೆಭರ್ತಿ

By Kannadaprabha NewsFirst Published Oct 23, 2019, 7:33 AM IST
Highlights

ಮಂಡ್ಯ ಜಿಲ್ಲೆಯಾದ್ಯಂತ ಸುರಿಯುತ್ತಿರು ಭಾರೀ ಮಳೆಗೆ ನಾಗಮಂಗಲ ತಾಲೂಕಿನಲ್ಲಿ ಬಹುತೇಕ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಸೋಮವಾರ ಇಡೀ ರಾತ್ರಿ ತಾಲೂಕಿನಾದ್ಯಂತ ಮಳೆ ಸುರಿದ ಪರಿಣಾಮ ಕೆಲ ಕೆರೆ ಕಟ್ಟೆಗಳು ಒಂದೇ ದಿನಕ್ಕೆ ಭರ್ತಿಯಾಗಿದೆ. ನೀರು ಹರಿಯುವ ತೊರೆ, ಹಳ್ಳ- ಕೊಳ್ಳಗಳಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ.

ಮಂಡ್ಯ(ಆ.23): ನಾಗಮಂಗಲ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿ ಬಹುತೇಕ ಕೆರೆ ಕಟ್ಟೆಗಳೂ ಸೇರಿದಂತೆ ಎಲ್ಲ ಹಳ್ಳ ಕೊಳ್ಳಗಳಲ್ಲಿ ಭಾರಿಪ್ರಮಾಣದಲ್ಲಿ ನೀರು ಹರಿದು ಭೂಮಿಯನ್ನು ತಂಪುಮಾಡಿದೆ.

ಸೋಮವಾರ ಇಡೀ ರಾತ್ರಿ ತಾಲೂಕಿನಾದ್ಯಂತ ಮಳೆ ಸುರಿದ ಪರಿಣಾಮ ಕೆಲ ಕೆರೆ ಕಟ್ಟೆಗಳು ಒಂದೇ ದಿನಕ್ಕೆ ಭರ್ತಿಯಾಗಿದೆ. ನೀರು ಹರಿಯುವ ತೊರೆ, ಹಳ್ಳ- ಕೊಳ್ಳಗಳಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ.

ಮನೆಗೆ ಆಸರೆಯಾಗಿದ್ದ ಮಗ ದುಷ್ಕರ್ಮಿಗಳಿಗೆ ಬಲಿ, ಅನ್ನಾಹಾರ ಬಿಟ್ಟ ಸಾಕು ನಾಯಿ..!

ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸೂಳೆಕೆರೆ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನೀರು ಹಿರಿಕೆರೆ, ಅಮ್ಮನಕಟ್ಟೆಮೂಲಕ ಪಾಲಕೆರೆಗೆ ಹರಿದು ಹೋಗುತ್ತಿದೆ. ಮಳೆ ನೀರಿನ ಜೊತೆಗೆ ಹೇಮಾವತಿ ಜಲಾಶಯದ ನೀರೂ ಸಹ ಅತ್ಯಧಿಕ ಪ್ರಮಾಣದಲ್ಲಿ ಕಾಲುವೆಗಳಲ್ಲಿ ಹರಿಯುತ್ತಿರುವುದರಿಂದ ಚಿಕ್ಕ ಯಗಟಿ, ದೇವಲಾಪುರ, ಬಿಂಡೇನಹಳ್ಳಿ ಕೆರೆಗಳಿಗೆ ಮತ್ತು ಈ ಕೆರೆಗಳ ವ್ಯಾಪ್ತಿಯ ಆಸುಪಾಸಿನ ಸಣ್ಣ ಪುಟ್ಟನೀರಿನ ಕಟ್ಟೆಗಳಿಗೂ ನೀರು ತುಂಬುತ್ತಿದೆ.

ಯಾವುದೇ ಹಾನಿಯಿಲ್ಲ:

ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕೆಲ ಮಾಳಿಗೆ ಮನೆಗಳು ಬಿದ್ದು ಹೋಗಿವೆಯ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಇನ್ನುಳಿದಂತೆ ರೈತರ ಯಾವುದೇ ಬೆಳೆ ಅಥವಾ ಆಸ್ತಿ ಪಾಸ್ತಿ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ.

ಮಂಡ್ಯ: ಒಂದು ಲವ್ ಸ್ಟೋರಿ.. ಮೂರು ಸಾವು...

click me!