ಕೆ. ಆರ್‌. ಪೇಟೆ: ಕಾಂಗ್ರೆಸ್‌ನಿಂದ ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಕಣಕ್ಕೆ..!

By Web DeskFirst Published Nov 15, 2019, 10:14 AM IST
Highlights

ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿದ್ದು, ಟಿಕೆಟ್ ಹಂಚಿಕೆ, ಅಭ್ಯರ್ಥಿ ಆಯ್ಕೆ ಕೆಲಸಗಳು ಭರದಿಂದ ಸಾಗಿದೆ. ಕೆ. ಆರ್‌. ಪೇಟೆಯಲ್ಲಿ ಹೇಗಾದರೂ ಕಮಲ ಅರಳಿಸಬೇಕೆಂದು ಪಣತೊಟ್ಟಿರುವ ಸಿಎಂ ನಾರಾಯಣ ಗೌಡ ಅವರಿಗೆ ಟಿಕೆಟ್ ನೀಡಿದೆ. ಮಾಸ್ಟರ್ ಪ್ಲಾನ್ ಮಾಡಿರುವ ಕಾಂಗ್ರೆಸ್ ನಾರಾಯಣ ಗೌಡ ಎದುರಾಳಿಯಾಗಿ ಬೈ ಎಲೆಕ್ಷನ್ ಸ್ಪೇಷಲಿಸ್ಟ್‌ನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.

ಮಂಡ್ಯ(ನ.15): ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿದ್ದು, ಟಿಕೆಟ್ ಹಂಚಿಕೆ, ಅಭ್ಯರ್ಥಿ ಆಯ್ಕೆ ಕೆಲಸಗಳು ಭರದಿಂದ ಸಾಗಿದೆ. ಕೆ. ಆರ್‌. ಪೇಟೆಯಲ್ಲಿ ಹೇಗಾದರೂ ಕಮಲ ಅರಳಿಸಬೇಕೆಂದು ಪಣತೊಟ್ಟಿರುವ ಸಿಎಂ ನಾರಾಯಣ ಗೌಡ ಅವರಿಗೆ ಟಿಕೆಟ್ ನೀಡಿದೆ. ಮಾಸ್ಟರ್ ಪ್ಲಾನ್ ಮಾಡಿರುವ ಕಾಂಗ್ರೆಸ್ ನಾರಾಯಣ ಗೌಡ ಎದುರಾಳಿಯಾಗಿ ಬೈ ಎಲೆಕ್ಷನ್ ಸ್ಪೇಷಲಿಸ್ಟ್‌ನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.

ಕೆಆರ್‌ಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಉಪಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ನಿಂದ ಬೈ ಎಲೆಕ್ಷನ್ ಸ್ಪೇಷಲಿಸ್ಟ್ ಕಣಕ್ಕಿಳಿಯುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್‌ನಿಂದ ಅಖಾಡಕ್ಕೆ ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಧುಮುಕುವ ಸಾಧ್ಯತೆ ಇದ್ದು, ಟಿಕೆಟ್ ಪಕ್ಕಾ ಆದಲ್ಲಿ ನಾರಾಯಣ ಗೌಡ ವಿರುದ್ಧ ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಸ್ಪರ್ಧಿಸಲಿದ್ದಾರೆ.

ಕೆ. ಆರ್. ಪೇಟೆ ಇತಿಹಾಸದಲ್ಲೇ ಒಂದೇ ಬಾರಿ ಬೈ ಎಲೆಕ್ಷನ್..!

ಕೆಆರ್‌ಪೇಟೆ ಕ್ಷೇತ್ರದ ಇತಿಹಾಸದಲ್ಲಿಯೇ ಒಂದೇ ಒಂದು ಬಾರಿ ಬೈ ಎಲೆಕ್ಷನ್ ನಡೆದಿದೆ. 1996 ರಲ್ಲಿ ನಡೆದಿದ್ದ ಕೆಆರ್‌ಪೇಟೆ ಬೈ ಎಲೆಕ್ಷನ್ ನಡೆದಿದ್ದ ಸಂದರ್ಭ ಪಕ್ಷೇತರ ಅಭ್ಯರ್ಥಿ ಬಿ.ಪ್ರಕಾಶ್ ಜಯಗಳಿಸಿದ್ದರು. 1996 ರಲ್ಲಿ 29,524 ಮತ ಪಡೆದುಕೊಂಡು ವಿಜಯದ ನಗು ಬೀರಿದ್ದ ಬಿ. ಪ್ರಕಾಶ್ ಅವರು ನಾರಾಯಣ ಗೌಡ ಅವರಿಗೆ ಪ್ರಬಲ ಎದುರಾಳಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಬೈ ಎಲೆಕ್ಷನ್: 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

1996 ರಲ್ಲಿ ಜನತಾ ದಳ ಪಕ್ಷದ ಬಿ‌.ಜವರೇಗೌಡ ವಿರುದ್ಧ ಬಿ.ಪ್ರಕಾಶ್ 2573 ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದರು. ಈ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಕೆಆರ್‌ಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಈ ಹಿಂದೆ ಉಪಚುನಾವಣೆಯಲ್ಲಿ ಗೆಲುವು ಪಡೆದಿದ್ದ ಪ್ರಕಾಶ್‌ರನ್ನು ಕಾಂಗ್ರೆಸ್‌ನಿಂದ ಕಣಕ್ಕಿಳಿಸುವ ಸಾಧ್ಯತೆಗಳೂ ಕಂಡುಬಂದಿವೆ.

ಉಪಚುನಾವಣೆ: ಕೆ. ಆರ್. ಪೇಟೆ ಉಸ್ತುವಾರಿ ಹೊಸಬರಿಗೆ ಕೊಟ್ಟ ಸಿಎಂ

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ಗೆ ಕೊಕ್ ನೀಡಿ ಬಿ.ಪ್ರಕಾಶ್‌ಗೆ ಮಣೆ ಹಾಕಲು ಕೆಪಿಸಿಸಿ ಅಲೋಚನೆ ಮಾಡಿದೆ. ಕೆಪಿಸಿಸಿಯಿಂದ ಹೈಕಮಾಂಡ್‌ಗೆ ಕೆ‌.ಬಿ.ಚಂದ್ರಶೇಖರ್ ಮತ್ತು ಬಿ.ಪ್ರಕಾಶ್ ಹೆಸರು ಸೂಚನೆ ಮಾಡಲಾಗಿದ್ದು, ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕನ್ಫರ್ಮ್‌ ಆಗಲಿದೆ. ಈಗಾಲೇ 2 ಬಾರಿಗೆ ಗೆದ್ದು ಮೂರು ಬಾರಿ ಸೋಲುಂಡಿರುವ ಕೆ.ಬಿ.ಚಂದ್ರಶೇಖರ್ ಹಾಗೂ ಬಿ.ಪ್ರಕಾಶ್ ಸದ್ಯ ಟಿಕೆಟ್ ರೇಸ್‌ನಲ್ಲಿದ್ದಾರೆ.

ಕೆ. ಆರ್. ಪೇಟೆ JDS ಅಭ್ಯರ್ಥಿ ಫಿಕ್ಸ್, ಅಧಿಕೃತ ಘೋಷಣೆಯೊಂದೇ ಬಾಕಿ

click me!