ಕೆ. ಆರ್. ಪೇಟೆ JDS ಅಭ್ಯರ್ಥಿ ಫಿಕ್ಸ್, ಅಧಿಕೃತ ಘೋಷಣೆಯೊಂದೇ ಬಾಕಿ

By Web Desk  |  First Published Nov 14, 2019, 12:40 PM IST

ಅನರ್ಹ ಶಾಸಕರ ತೀರ್ಪು ಹೊರ ಬಿದ್ದ ಹಿನ್ನೆಲೆಯಲ್ಲೇ ಉಪಚುನಾವಣೆಯ ಸಿದ್ಧತೆಗಳೂ ಆರಂಭವಾಗಿದೆ. ಮಂಡ್ಯದ ಕೆ. ಆರ್. ಪೇಟೆ ಕ್ಷೇತ್ರದಿಂದ ಜಡಿಎಸ್‌ ಟಿಕೆಟ್ ಗೊಂದಲ ಬಗೆ ಹರಿದಿದೆ. ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌‌ನಿಂದ ಟಿಕೆಟ್ ವಂಚಿತರಾಗಿದ್ದ ಮುಖಂಡನಿಗೆ ಟಿಕೆಟ್ ಸಿಕ್ಕಿದೆ. ಯಾರು, ಏನು..? ಇಲ್ಲಿದೆ ಮಾಹಿತಿ.


ಮಂಡ್ಯ(ನ.14): ಅನರ್ಹ ಶಾಸಕರ ತೀರ್ಪು ಹೊರ ಬಿದ್ದ ಹಿನ್ನೆಲೆಯಲ್ಲೇ ಉಪಚುನಾವಣೆಯ ಸಿದ್ಧತೆಗಳೂ ಆರಂಭವಾಗಿದೆ. ಮಂಡ್ಯದ ಕೆ. ಆರ್. ಪೇಟೆ ಕ್ಷೇತ್ರದಿಂದ ಜಡಿಎಸ್‌ ಟಿಕೆಟ್ ಗೊಂದಲ ಬಗೆ ಹರಿದಿದೆ. ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌‌ನಿಂದ ಟಿಕೆಟ್ ವಂಚಿತರಾಗಿದ್ದ ಮುಖಂಡನಿಗೆ ಟಿಕೆಟ್ ಸಿಕ್ಕಿದೆ.

ಅನರ್ಹ ಶಾಸಕರ ತೀರ್ಪು ಹೊರ ಬಿದ್ದ ಹಿನ್ನೆಲೆಯಲ್ಲೇ ಉಪಚುನಾವಣೆಯ ಸಿದ್ಧತೆಗಳೂ ಆರಂಭವಾಗಿದೆ. ಮಂಡ್ಯದ ಕೆ. ಆರ್. ಪೇಟೆ ಕ್ಷೇತ್ರದಿಂದ ಜಡಿಎಸ್‌ ಟಿಕೆಟ್ ಗೊಂದಲ ಬಗೆ ಹರಿದಿದ್ದು, ಜೆಡಿಎಸ್‌ ಅಭ್ಯರ್ಥಿಯಾಗಿ ಬಿ. ಎಲ್. ದೇವರಾಜು ಆಯ್ಕೆ ಅಂತಿಮವಾಗಿದೆ. ಜೆಡಿಎಸ್‌ ಅಭ್ಯರ್ಥಿಯಾಗಿ ಬಿ. ಎಲ್. ದೇವರಾಜು ಫಿಕ್ಸ್ ಆಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

Latest Videos

undefined

ಮಂಡ್ಯದ KR ಪೇಟೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ : ಸುಳಿವು ನೀಡಿದ ಸಿಎಂ

ಉಪಚುನಾವಣೆ ಸಮೀಪಿಸುತ್ತಿದ್ದು ಜೆಡಿಎಸ್‌ ಅಭ್ಯರ್ಥಿಯಾಗಿ ಬಿಎಲ್ ದೇವರಾಜು ಆಯ್ಕೆಯಾಗಿದ್ದಾರೆ. ಬಿ. ಎಸ್. ದೇವರಾಜು ಅಕ್ಕಿಹೆಬ್ಬಾಳು ಕ್ಷೇತ್ರದ ಜಿ.ಪಂ ಸದಸ್ಯನಾಗಿದ್ದು, ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌‌ನಿಂದ ಟಿಕೆಟ್ ವಂಚಿತರಾಗಿದ್ದರು.

ಕಳೆದ ಚುನಾವಣೆಯಲ್ಲಿ ಬಿ-ಫಾರಂ ಪಡೆದು ಸಿ-ಫಾರಂ ಪಡೆಯುವಲ್ಲಿ ವಿಫಲರಾಗಿದ್ದರು. ಟಿಕೆಟ್ ವಂಚಿತರಾದ ವಿಚಾರವವನ್ನೆ ಮುಂದಿಟ್ಟುಕೊಂಡು ಈ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ದೇವರಾಜು ಸಕ್ಸಸ್ ಆಗಿದ್ದಾರೆ.

ಮಂಡ್ಯ: ಅನರ್ಹ ಶಾಸಕ ನಾರಾಯಣಗೌಡ ಹತ್ಯೆಗೆ ಸುಪಾರಿ..?

ಕೆ. ಆರ್‌. ಪೇಟೆ ಕ್ಷೇತ್ರದಿಂದ ನಾರಾಯಣ ಗೌಡಗೆ ಟಿಕೆಟ್ ನೀಡವ ಬಗ್ಗೆ ಬಿಜೆಪಿ ಈಗಾಗಲೇ ಸುಳಿವು ನೀಡಿದೆ. ಇತ್ತೀಚಗಷ್ಟೇ ಕೆ. ಆರ್. ಪೇಟೆಯಲ್ಲಿ ನಡೆದ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಸ್ವತಃ ಸಿಎಂ ಯಡಿಯೂರಪ್ಪ ಅವರೇ ಸಾರ್ವಜನಿಕವಾಗಿ ಈ ಬಗ್ಗೆ ಸೂಚನೆ ನೀಡಿದ್ದರು.

click me!