ಉಪಚುನಾವಣೆ: ಕೆ. ಆರ್. ಪೇಟೆ ಉಸ್ತುವಾರಿ ಹೊಸಬರಿಗೆ ಕೊಟ್ಟ ಸಿಎಂ

By Kannadaprabha News  |  First Published Nov 14, 2019, 11:40 AM IST

ಕೆ. ಆರ್. ಪೇಟೆ ಉಪಚುನಾವಣೆ ಈಗ ಸಿಎಂಗೆ ಪ್ರತಿಷ್ಠೆ ಕಣವಾಗಿದ್ದು, ಸಕ್ಕರೆನಾಡಲ್ಲಿ ಕಮಲ ಅರಳಿಸಲು ಬಿಎಸ್‌ವೈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮಗ ವಿಜಯೇಂದ್ರ, ಹಾಸನ ಶಾಸಕ ಪ್ರೀತಂಗೌಡ, ಮತ್ತು ಸಚಿವ ಮಾಧುಸ್ವಾಮಿ ಕೆ. ಆರ್. ಪೇಟೆ ಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ನೇತೃತ್ವ ವಹಿಸಲಿದ್ದಾರೆ.


ಮಂಡ್ಯ(ನ.14): ಕೆ. ಆರ್. ಪೇಟೆ ಉಪಚುನಾವಣೆ ಈಗ ಸಿಎಂಗೆ ಪ್ರತಿಷ್ಠೆ ಕಣವಾಗಿದ್ದು, ಸಕ್ಕರೆನಾಡಲ್ಲಿ ಕಮಲ ಅರಳಿಸಲು ಬಿಎಸ್‌ವೈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ತವರಿನಿಂದಲೇ ಬಿಜೆಪಿ ಬಾವುಟ ಹಾರಿಸಲು ಶತಾಯಗತ ಪ್ರಯತ್ನ ನಡೆಸುತ್ತಿದ್ದು, ಸಾಂಪ್ರದಾಯಿಕ ಉಸ್ತುವಾರಿಗಳನ್ನು ಬಿಟ್ಟು ಹೊಸಬರಿಗೆ ಕೆ. ಆರ್. ಪೇಟೆ ಚುನಾವಣಾ ಉಸ್ತುವಾರಿ ನೀಡಲು ಸಿದ್ಧತೆ ನಡೆದಿದೆ.

ಮಗ ವಿಜಯೇಂದ್ರ ಸೇರಿ ಮೂವರ ಹೆಗಲಿಗೆ ಕೆ.ಆರ್.ಪೇಟೆ ಚುನಾವಣಾ ಉಸ್ತುವಾರಿ ವಹಿಸಲಾಗಿದ್ದು, ಮಗ ವಿಜಯೇಂದ್ರ, ಹಾಸನ ಶಾಸಕ ಪ್ರೀತಂಗೌಡ, ಮತ್ತು ಸಚಿವ ಮಾಧುಸ್ವಾಮಿ ಕೆ. ಆರ್. ಪೇಟೆ ಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ನೇತೃತ್ವ ವಹಿಸಲಿದ್ದಾರೆ.

Latest Videos

undefined

ಸ್ಪರ್ಧೆಗೆ ಸಿಕ್ತು ಅವಕಾಶ, ಪಾಟೀಲ, ಶಂಕರ್‌ಗಿದೆ ದೊಡ್ಡ ಸವಾಲು ?.

ಕಳೆದ ಚುನಾವಣೆಗಳಲ್ಲಿ ಕೆ. ಆರ್. ಪೇಟೆಯ ಉಸ್ತುವಾರಿಯನ್ನು ಸಚಿವ ಆರ್. ಅಶೋಕ್‌ಗೆನೀಡಲಾಗಿತ್ತು. ಆದರೆ ಈಗ ಮಂಡ್ಯಕ್ಕೆ ಸಂಬಂಧಿಸದ ನಾಯಕರಿಗೆ ಚುನಾವಣಾ‌ ಉಸ್ತುವಾರಿ ನೀಡಲಾಗಿದೆ.

ಜಾತಿ ಲೆಕ್ಕಾಚಾರದ ಮೇಲೆ ಮತಗಳನ್ನು ಕಟ್ಟಿ ಹಾಕಲು ಈ ಮೂವರಿಗೆ ಚುನಾವಣಾ ಉಸ್ತುವಾರಿ ನೀಡಲಾಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಮಗ ವಿಜಯೇಂದ್ರ ಹಾಗೂ ಸಚಿವ ಮಾಧುಸ್ವಾಮಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಪ್ರೀತಂಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ.

ಗುರುವಿಗೇ ತಿರುಮಂತ್ರ..?

ಒಕ್ಕಲಿಗರ ಮತ ಸೆಳೆಯಲು ಕೆ. ಆರ್. ಪೇಟೆ ಪಕ್ಕದ ಹಾಸನ ಶಾಸಕ ಪ್ರೀತಂಗೌಡಗೆ ಉಸ್ತುವಾರಿ ನೀಡಲಾಗಿದೆ. ಗುರುವಿಗೆ ತಿರುಮಂತ್ರ ಹಾಕಲು ದೇವೇಗೌಡರ ಹಳೇ ಶಿಷ್ಯ ಸಂಸದೀಯ ಪಟು ಸಚಿವ ಮಾಧುಸ್ವಾಮಿ ಅವರಿಗೂ ಉಸ್ತುವಾರಿ ವಹಿಸಲಾಗಿದೆ. ಇನ್ನೂ ತವರು ಕ್ಷೇತ್ರದ ಜನರನ್ನ ಭಾವನಾತ್ಮಕವಾಗಿ ಸೆಳೆಯಲು ಮಗ ವಿಜಯೇಂದ್ರಗ ಅವರಿಗೂ ಜವಾಬ್ದಾರಿ ಕೊಡಲಾಗಿದೆ. ತವರಿನಲ್ಲಿ ನಾರಾಯಣಗೌಡ ಗೆಲ್ಲಿಸಿಕೊಂಡು ಕಮಲ ಅರಳಿಸಲು ಬಿಎಸ್‌ವೈ ತಳಮಟ್ಟದ ಸಿದ್ದತೆ ಪ್ರಾರಂಭಿಸಿದ್ದಾರೆ.

ಶಬರಿಮಲೆ ವಿವಾದ: ಮಹಿಳೆಯರ ಪ್ರವೇಶಕ್ಕಿಲ್ಲ ತಡೆ, ಆದರೆ ಇದೇ ತೀರ್ಪು ಅಂತಿಮವಲ್ಲ.

click me!