ಉತ್ತರ ಉತ್ತರವೇ, ದಕ್ಷಿಣ ದಕ್ಷಿಣವೇ; ಏನಿದು ನಾಗರೀಕತೆಯ ಲೆಕ್ಕಾಚಾರವೇ?

By Kannadaprabha NewsFirst Published Jul 12, 2020, 10:42 AM IST
Highlights

ಆರ್ಯರು ಅಲ್ಲದವರು ಅನಾಗರಿಕರು ಎನ್ನುವ ಅಭಿಪ್ರಾಯವೇ ಅನಾಗರಿಕವಾದುದು. ಈ ಅಭಿಪ್ರಾಯವೇ ಉತ್ತರದವರು ಶ್ರೇಷ್ಠರು ಎನ್ನುವ ಆಲೋಚನೆ ಮೂಡುವುದಕ್ಕೆ ಕಾರಣ. ವಾಸ್ತವವೆಂದರೆ, ಸಾಂಸ್ಕೃತಿಕ ಮತ್ತು ಬೌದ್ಧಿಕ ಲೆಕ್ಕಾಚಾರದಲ್ಲಿ, ಇತರರ ಮೇಲೆ ಶ್ರೇಷ್ಠತೆಯನ್ನು ಪಡೆದೆವೆಂದು ಸಾಧಿಸುವುದಕ್ಕಾಗಿ ಅದರ ಆಡಂಬರ ತೋರದೆ, ಅದರಿಂದ ಲಾಭವನ್ನು ಪಡೆದುಕೊಳ್ಳುವ ಪಕ್ವತೆಯನ್ನು ದ್ರಾವಿಡರು ಹೊಂದಿದ್ದಾರೆ. ನಿಜ, ಉತ್ತರ ಉತ್ತರವೇ ದಕ್ಷಿಣ ದಕ್ಷಿಣವೇ.

ನನ್ನ ಸಂಕುಚಿತ ದೃಷ್ಟಿಯನ್ನು ಕ್ಷಮಿಸಿ(ಅಥವಾ ಅದೇ ವಾಸ್ತವವಾದದ್ದು?) ಆದರೆ ಉತ್ತರ ಮತ್ತು ದಕ್ಷಿಣ ಭಿನ್ನವಾದುದು ಮತ್ತು ಎಂದಿಗೂ ಅವೆರಡೂ ಒಂದಾಗಲಾರವು ಎಂಬುದು ನನ್ನ ಭಾವನೆ. ಆರ್ಯರ ಪರಿಕಲ್ಪನೆಯು ಸಂಗತಿಗಳನ್ನು ಇನ್ನಷ್ಟುಸಂಕೀರ್ಣಗೊಳಿಸಿವೆ. ಮನುಸ್ಮೃತಿ (ಕ್ರಿ.ಪೂ.2ನೆ ಶತಮಾನ?) ಏನು ಹೇಳುವುದು ಎಂಬುದನ್ನು ನೋಡಿ: ಪೂರ್ವದ ಸಾಗರ ಮತ್ತು ಪಶ್ಚಿಮದ ಸಾಗರ, ಎರಡು ಪರ್ವತಗಳ(ಹಿಮಾಲಯ ಮತ್ತು ವಿಂಧ್ಯ ಎಂದು ಊಹಿಸಬಹುದು) ನಡುವಿನ ಭೂಮಿಯನ್ನು ವಿದ್ವಜ್ಜನರು ಆರ್ಯಾವರ್ತವೆಂದು ಕರೆದರು. ಅದರಾಚೆಗಿನ ದೇಶವು ಅನಾಗರಿಕರದು.

ಆರ್ಯರು ಅಲ್ಲದವರು ಅನಾಗರಿಕರು ಎನ್ನುವ ಅಭಿಪ್ರಾಯವೇ ಅನಾಗರಿಕವಾದುದು. ಈ ಅಭಿಪ್ರಾಯವೇ ಉತ್ತರದವರು ಶ್ರೇಷ್ಠರು ಎನ್ನುವ ಆಲೋಚನೆ ಮೂಡುವುದಕ್ಕೆ ಕಾರಣ. ವಾಸ್ತವವೆಂದರೆ, ಸಾಂಸ್ಕೃತಿಕ ಮತ್ತು ಬೌದ್ಧಿಕ ಲೆಕ್ಕಾಚಾರದಲ್ಲಿ, ಇತರರ ಮೇಲೆ ಶ್ರೇಷ್ಠತೆಯನ್ನು ಪಡೆದೆವೆಂದು ಸಾಧಿಸುವುದಕ್ಕಾಗಿ ಅದರ ಆಡಂಬರ ತೋರದೆ, ಅದರಿಂದ ಲಾಭವನ್ನು ಪಡೆದುಕೊಳ್ಳುವ ಪಕ್ವತೆಯನ್ನು ದ್ರಾವಿಡರು ಹೊಂದಿದ್ದಾರೆ. ನಿಜ, ಉತ್ತರ ಉತ್ತರವೇ ದಕ್ಷಿಣ ದಕ್ಷಿಣವೇ.

‘ಅರ್ಲಿ ಇಂಡಿಯನ್ಸ್‌’ ಕೃತಿಯಲ್ಲಿ ಈ ಹಳೆಯ ವಿಷಯದ ಮೇಲೆ ಹೊಸ ಬೆಳಕನ್ನು ಚೆಲ್ಲಲಾಗಿದೆ. ಲೇಖಕ ಟೋನಿ ಜೋಸೆಫ್‌ ಅವರು ಹೊಸದಾಗಿ ಲಭ್ಯವಾದ ಮುಂದುವರಿದ ಡಿಎನ್‌ಎ ವಿಶ್ಲೇಷಣೆ ತಂತ್ರಜ್ಞಾನದ ಹೊಸ ಅಂಕಿಅಂಶಗಳನ್ನು ಬಳಸಿಕೊಂಡಿದ್ದಾರೆ. ‘ಹೊಸ ಊಹನಗಳು’ ಹಳೆಯ ಊಹನಗಳನ್ನು ಕ್ರಮಬದ್ಧಗೊಳಿಸುತ್ತವೆ, ಆದರೆ ಬೇರೊಂದು ರೀತಿಯಲ್ಲಿ. ಹೊಸ ಅಂಕಿಅಂಶಗಳ ಪ್ರಕಾರ ಕಳೆದ 40 ಸಾವಿರ ವರ್ಷಗಳಲ್ಲಿ ಭಾರತಕ್ಕೆ ದೊಡ್ಡ ಪ್ರಮಾಣದ ವಲಸೆ ನಡೆದಿಲ್ಲ. ಅದಕ್ಕಿಂತ ಹೆಚ್ಚಾಗಿ ಅಲ್ಲಿ ಎರಡು ಪ್ರಾಚೀನ ಜನಸಮುದಾಯಗಳಿದ್ದವು.

ಅವರು ಇವರ ಜಗತ್ತನ್ನು ಬಗ್ಗಿ ನೋಡಿದರೆ ಇವರು ಅವರ ಜಗತ್ತನ್ನು ತಲೆಯೆತ್ತಿ ನೋಡುತ್ತಾರೆ!

ಒಂದು ಉತ್ತರ ಭಾರತದಲ್ಲಿದ್ದರೆ ಇನ್ನೊಂದು ದಕ್ಷಿಣ ಭಾರತದಲ್ಲಿ. ಒಟ್ಟಾರೆ ಇಂದಿನ ಜನಸಮುದಾಯವು ಈ ಎರಡೂ ಗುಂಪುಗಳ ಮಿಶ್ರಣವಾಗಿ ಅವತರಿಸಿದ್ದು. ತಾಂತ್ರಿಕವಾಗಿ ಉತ್ತರ ಭಾರತೀಯರ ಪೂರ್ವಜರು ಮತ್ತು ದಕ್ಷಿಣ ಭಾರತೀಯರ ಪೂರ್ವಜರು ಎಂದು ಪಟ್ಟಿಹಚ್ಚಬಹುದು. ಉತ್ತರ ಭಾರತೀಯರ ಪೂರ್ವಜರು ಕಾಸ್ಕೇಸಿಯನ್‌ ಬೇರುಗಳನ್ನು ಹೊಂದಿದ್ದರೆ, ದಕ್ಷಿಣ ಭಾರತೀಯರ ಪೂರ್ವಜರು ದಕ್ಷಿಣದ ಮಾರ್ಗವಾಗಿ ಆಫ್ರಿಕದಿಂದ ವಲಸೆ ಬಂದವರು, ಇದು 50 ಸಾವಿರ ವರ್ಷಗಳ ಹಿಂದೆ.

ಉತ್ತರ- ದಕ್ಷಿಣ ವಿಭಜನೆಯನ್ನು ಇತಿಹಾಸ ಉಳಿಸಿಕೊಳ್ಳುತ್ತದೆ. ಸಿಂಧೂ ಕಣಿವೆ/ ಹರಪ್ಪನ್‌ ನಾಗರಿಕತೆಯು ದ್ರಾವಿಡರದ್ದು ಆಗಿತ್ತು ಮತ್ತು ಆರ್ಯರ ಆಕ್ರಮಣದ ಬಳಿಕ ಅವರು ದಕ್ಷಿಣಕ್ಕೆ ಚಲಿಸಿದರು. ಆರ್ಯರ ಆಕ್ರಮಣ ಎಂಬ ನುಡಿಗಟ್ಟು ಉತ್ತರದ ರಾಜಕಾರಣಿಗಳ ಶಾಪ. ಆರ್ಯರು ತೂತುಕುಡಿ ಮತ್ತು ಆ ಭಾಗದಿಂದ ಬಂದವರು ಎಂದು ನಾವು ನಂಬಬೇಕು ಎಂದು ಅವರು ಬಯಸುತ್ತಾರೆ. ರಾಜಕಾರಣಿಗಳ ಅನುಕೂಲಕ್ಕೆ ಬರದಿದ್ದ ಮೇಲೆ ಇತಿಹಾಸದ ಉಪಯೋಗವಾದರೂ ಏನು?

ವೇದಗಳನ್ನು ಭಾರತೀಯ ಸಂಸ್ಕೃತಿಯ ಬುನಾದಿಗಳೆಂದು ತೋರಿಸಲಾಗುತ್ತಿದೆ. ವೇದಗಳಿಗಿಂತಲೂ ಪೂರ್ವದಲ್ಲಿ ನಾಗರಿಕತೆಯು ಇದ್ದಿರಬಹುದಾದ ಸಾಧ್ಯತೆಯನ್ನು ಏನಾದರೂ ತೋರಿಸಿದರೆ ಅದು ಭಾರತದ ಹಿಂದೂತ್ವದ ಸಿಂದ್ಧಾಂತಗಳಿಗೆ ಭಾರೀ ಹೊಡೆತ ನೀಡುತ್ತದೆ. ವ್ಯಂಗ್ಯವೆಂದರೆ ಋುಗ್ವೇದವೇ ಆರ್ಯರು ಈ ನೆಲದ ಮೇಲೆ ನಿಯಂತ್ರಣವನ್ನು ಸಾಧಿಸಲು ದಸ್ಯುಗಳ ಜೊತೆ ಹೇಗೆ ಕಾದಾಡಿದರು ಎಂದು ಹೇಳುತ್ತದೆ. ದಸ್ಯುಗಳೆಂದರೆ ಆರ್ಯರು ಬರುವುದಕ್ಕೂ ಮೊದಲು ಈ ನೆಲದ ನಿಯಂತ್ರಣವನ್ನು ಹೊಂದಿದ್ದವರೆ?

ಆಫ್ರಿಕದ ಒಂದು ಹಿಡಿಯಷ್ಟುವಲಸೆಗಾರರು ಹೇಗೆ ಭಾರತಕ್ಕೆ ತಮ್ಮ ದಾರಿಯನ್ನು ಕಂಡುಕೊಂಡರು, ತಮ್ಮ ವಿಕಸನೀಯ ಬಂಧುಗಳೊಂದಿಗೆ ಹೇಗೆ ವ್ಯವಹರಿಸಿದರು... ಈ ನೆಲವನ್ನು ತಮ್ಮದನ್ನಾಗಿ ಮಾಡಿಕೊಂಡರು ಮತ್ತು ಈ ಭೂಮಿಯ ಮೇಲಿನ ಅತಿ ದೊಡ್ಡ ಮಾನವ ಸಮುದಾಯವಾಗಿ ಬೆಳೆಯಿತು ಎಂಬ ವಿವರಣೆಯೊಂದಿಗೆ ಟೋನಿ ಜೋಸೆಫ್‌ ಅವರ ಅಧ್ಯಾಯ ‘ದಿ ಫಸ್ಟ್‌ ಇಂಡಿಯನ್ಸ್‌’ ಆರಂಭವಾಗುತ್ತದೆ. ಅದಕ್ಕೆ ಅವರೊಂದು ಅನುಬಂಧವನ್ನು ನೀಡಿದ್ದಾರೆ.

'ಮಾಯನ್' ನಾಗರೀಕತೆಯ ಈ ವಿಷಯಗಳು ಅಚ್ಚರಿಗೊಳಿಸುವುದರಲ್ಲಿ ಅನುಮಾನವಿಲ್ಲ !

ಅದು ಯುರೇಷಿಯಾದ ಹುಲ್ಲುಗಾವಲು ಪ್ರದೇಶದಿಂದ ಆರಂಭಗೊಂಡ ವಲಸೆಯು ಯುರೋಪಿನಿಂದ ದಕ್ಷಿಣ ಏಷ್ಯಾ ವರೆಗಿನ ಜನಸಂಖ್ಯೆಯ ಚಿತ್ರಣವನ್ನೇ ಹೇಗೆ ಬದಲಿಸಿತು ಎಂಬುದನ್ನು ವಿವರಿಸುತ್ತದೆ. ಕೆಲವರು ಆರ್ಯರ ಆಕ್ರಮಣ ಎಂಬ ಕತೆಯನ್ನು ಒತ್ತಿ ಹೇಳುತ್ತಿರುವುದು ಒಂದು ದೊಡ್ಡ ಒಳಸಂಚು ಎಂದೂ ಹೇಳುತ್ತದೆ.

ನಿಜಕ್ಕೂ ಈ ಎಲ್ಲ ಸಂಗತಿಗಳನ್ನು ಭಾರತದಲ್ಲಿ ಬದುಕನ್ನು ಆಳುತ್ತಿರುವ ಉತ್ತರ- ದಕ್ಷಿಣ ದ್ವಿಭಜನೆಯು ಬಂಧಿಸಿಟ್ಟಿದೆ ಮತ್ತು ಉಳಿಸಿಕೊಂಡು ಬಂದಿದೆ. ಬಿಜೆಪಿಯನ್ನು ಉತ್ತರ ಭಾರತದ ಪಕ್ಷ ಎಂದು ಪರಿಗಣಿಸಲಾಗಿದೆ. (ಕರ್ನಾಟಕದಲ್ಲಿ ಅದು ಹೆಜ್ಜೆಯೂರಿರುವುದು ಒಂದು ಅಪವಾದ.) ಅದರ ಸಾಂಸ್ಕೃತಿಕ ತಿರುಳು ಹಿಂದಿ. ಆಮಟ್ಟಿಗೆ ಅದು ದ್ರವಿಡರಿಗೆ, ಹಿಂದಿಯೇತರ ದಕ್ಷಿಣದವರಿಗೆ ಪರಿಮಿತವಾಗುಳಿದಿದೆ.

ನಮ್ಮ ಮಹಾಕಾವ್ಯಗಳೂ ಭಾಷಾ ವೈವಿಧ್ಯಕ್ಕೆ ಅನುಗುಣವಾಗಿ ಭಿನ್ನ ಆವೃತ್ತಿಗಳನ್ನು ಹೊಂದಿರುವಾಗ ಈ ಪ್ರತ್ಯೇಕತೆ ದೂರವಾಗುವುದಾದರೂ ಹೇಗೆ? ಉತ್ತರದವರ ಮೆಚ್ಚಿನ ರಾಮಾಯಣ ತುಳಸೀದಾಸರ ರಾಮಚರಿತ ಮಾನಸ. ದಕ್ಷಿಣದಲ್ಲಿ ಅದರ ಪರಿಚಯ ಕಡಿಮೆ. ತಮಿಳುನಾಡಿನಲ್ಲಿ ಕಂಬರಾಮಾಯಣ, ತೆಲುಗು ದೇಶಂನಲ್ಲಿ ದ್ವಿಪದ ರಾಮಾಯಣವಿದೆ. ಕನ್ನಡದಲ್ಲಿ ತೊರವೆ ರಾಮಾಯಣ, ಮಲೆಯಾಳ ಭಾಷೆಯಲ್ಲಿ ಅಧ್ಯಾತ್ಮ ರಾಮಾಯಣವಿದೆ. ವಿವಿಧ ಆವೃತ್ತಿಗಳಲ್ಲಿ ಬಡ ವಾಲ್ಮೀಕಿ ಕಾಣೆಯಾಗಿದ್ದಾರೆ.

ಆರ್ಯರ ಕುಲವು ಭಾರತದಲ್ಲಿ ಕೃಷಿಕರಾಗಿ ಮತ್ತು ಮೂಲನಿವಾಸಿಗಳ ವಿರುದ್ಧ ವಿಜಯಿಗಳಾಗಿ ಮಿಂಚಿತು ಎಂಬ ಅಥವಾ ನಾಗರಿಕ ಕುಲವು ಇಡೀ ದೇಶವನ್ನು ಅನಾಗರಿಕರಿಂದ ಗೆದ್ದುಕೊಂಡಿತು ಎನ್ನುವ ಹೇಳಿಕೆಗಳಿಗೆ ನಾವು ಏನೆಂದು ಪ್ರತಿಕ್ರಿಯಿಸುವುದು. ಅಥವಾ ವಿಜೇತ ಆರ್ಯರು ಪಶ್ಚಿಮಕ್ಕೂ ತೆರಳಿದರು, ಇರಾನ್‌ನಲ್ಲಿ ನೆಲೆಯಾದರು ಮತ್ತು ಝೆಂಡ್‌ ಅವೆಸ್ತಾ ಬರೆದರು ಎಂಬ ಹೇಳಿಕೆಗೆ ಏನೆನ್ನುವುದು. ಇಂಥ ಸಿದ್ಧಾಂತಗಳನ್ನು ಪ್ರಖ್ಯಾತ ವಿದ್ವಾಂಸರಾದ ರೋಮೇಶ್‌ ದತ್‌್ತ ಅವರಂಥವರೇ ಪ್ರಚಾರಮಾಡಿದ್ದಾರೆ. ಆದರೆ ಅನಾಗರಿಕ ಎಂಬಂಥ ಅಂತರ್ಗತ ಪೂರ್ವಕಲ್ಪಿತ ಪದಗಳನ್ನು ಅವರು ನಿರ್ಲಕ್ಷಿಸಿದರೆ ಅದರಿಂದ ಯಾವುದೇ ಅರ್ಥ ಹೊರಡುವುದಿಲ್ಲ.

ಉತ್ತರದ ಸಂಸ್ಕೃತಿಯು ಮೇಲುಗೈ ಸಾಧಿಸುವುದಕ್ಕೆ ರಾಮಾಯಣವು ಹೇಗೆ ವಾಹಕವಾಯಿತು ಎಂಬ ಕುರಿತು ಇ.ವಿ.ರಾಮಸ್ವಾಮಿಯವರು ಒಂದು ಇಡಿಯಾದ ಸಿದ್ಧಾಂತವನ್ನೇ ಬೆಳೆಸಿದ್ದಾರೆ. ರಾಮನ ಕಥೆಗೆ ಅಯೋಧ್ಯೆಯು ಕೇಂದ್ರವಾಗಿರುವಷ್ಟುಕಾಲವೂ ಆ ಕಲ್ಪನೆ ಬದಲಾಗುವ ಹಾಗೆ ಕಾಣುವುದಿಲ್ಲ. ರಾವಣನನ್ನು ದಕ್ಷಿಣದವನೆಂದು ಮತ್ತು ಒಬ್ಬ ವೀರನೆಂದು ಕಾಣುತ್ತಿರುವುದನ್ನು ಮರೆಯಬೇಡಿ. ಇದೆಂಥ ಆಟವೆಂದರೆ ಕೊನೆಯಲ್ಲಿ ಯಾರೊಬ್ಬರೂ ಗೆಲ್ಲುವುದಿಲ್ಲ. ಯಾವಾಗ ಇದರಲ್ಲಿ ಕೇವಲ ಸೋಲುವವರೇ ಇರುತ್ತಾರೋ ಆಗ ನಿಜಕ್ಕೂ ಇದೊಂದು ಆಟವಾಗಬಹುದು. ಟೋನಿ ಜೋಸೆಫ್‌ ಹೇಳುವ ‘ನಾವೆಲ್ಲರೂ ಭಾರತೀಯರು. ಮತ್ತು ನಾವೆಲ್ಲರೂ ವಲಸಿಗರು’ ಎಂಬ ಹೇಳಿಕೆಯ ಕಡೆಗೆ ವಿಶೇಷ ಗಮನವನ್ನು ನೀಡುವುದಕ್ಕೆ ಬಲವಾದ ಸಾಕಷ್ಟುಕಾರಣಗಳಿವೆ.

- ಟಿಜೆಎಸ್‌

click me!