ಪುಸ್ತಕಕ್ಕೂ ಸ್ಟಾರ್‌ ಪಟ್ಟ: ವೀರಲೋಕ ಸಂಸ್ಥೆಯ ಹೊಸ ಯೋಜನೆ

By Kannadaprabha NewsFirst Published Jun 5, 2022, 11:38 AM IST
Highlights

ರಮೇಶ್‌ ಅರವಿಂದ್‌ ರಾಯಭಾರಿ. ಸುದೀಪ್‌ ಪುಸ್ತಕ ಬಿಡುಗಡೆ. ಸ್ಟಾರ್‌ ಹೋಟೆಲಿನಲ್ಲಿ ಪುಸ್ತಕ ಲೋಕಾರ್ಪಣೆ. ವೀರಲೋಕ ಹೀಗೆ ಪುಸ್ತಕ ಲೋಕಕ್ಕೆ ಗ್ಲಾಮರ್‌ ಸ್ಪರ್ಶ ನೀಡುತ್ತಿದೆ. ಇದರ ಹಿಂದಿದ್ದಾರೆ ಕೈಯಲ್ಲಿ 30 ರುಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದ ವೀರಕಪುತ್ರ ಶ್ರೀನಿವಾಸ್‌

1. 1000 ಕಡೆ ಬುಕ್‌ ಸ್ಟ್ಯಾಂಡ್‌

ನಮಗೆ ಮಸಾಲೆ ದೋಸೆ ಬೇಕು ಅಂದರೆ ಕಣ್ಣಳತೆಯ ದೂರದಲ್ಲಿ ಹತ್ತಾರು ರೆಸ್ಟೊರೆಂಟ್‌ಗಳು ಸಿಗುತ್ತವೆ. ಆದರೆ ಪುಸ್ತಕ ಬೇಕು ಅಂದರೆ ಗಾಂಧೀನಗರಕ್ಕೋ ಗಾಂಧೀ ಬಜಾರ್‌ಗೋ ಹೋಗಬೇಕು. ಹೀಗಾಗಿ ಬೆಂಗಳೂರಿನ 1000 ಕಡೆಗಳಲ್ಲಿ ಬುಕ್‌ ಸ್ಟ್ಯಾಂಡ್‌ ಇಡುತ್ತೇವೆ. ಮೆಡಿಕಲ್‌ ಶಾಫ್ಸ್‌, ಕಾಫಿ ಡೇ, ದರ್ಶಿನಿ, ಹೊಟೇಲ್‌, ಮಾಲ್‌, ಥಿಯೇಟರ್‌ ಹೀಗೆ ಎಲ್ಲೆಲ್ಲ ಕನ್ನಡಿಗರ ಓಡಾಟ ಇರುತ್ತದೋ ಅಲ್ಲೆಲ್ಲಾ ಪುಸ್ತಕದ ಒಂದು ಸ್ಟಾಂಡ್‌ ಇಡ್ತೀವಿ. ಒಂದು ಸ್ಟಾಂಡ್‌ನಲ್ಲಿ 20 ಪುಸ್ತಕಗಳು ಇರುತ್ತವೆ. ಪ್ರತೀವಾರ ಕನ್ನಡದ ಎರಡು ಪುಸ್ತಕ ಬಿಡುಗಡೆ ಮಾಡ್ತೀವಿ.

2. ಕನ್ನಡ ಪುಸ್ತಕಗಳ ಕಾಲ್‌ ಸೆಂಟರ್‌

ಓದುಗರಿದ್ದಾರೆ, ಆದರೆ ನಾವು ಅವರನ್ನು ತಲುಪುತ್ತಿಲ್ಲ. ಯಾರು ಆ ಓದುಗರು ಅನ್ನೋದನ್ನು ಹುಡುಕಿ ಸುಮಾರು 11 ಲಕ್ಷ ಜನರ ಡಾಟಾ ಕಲೆಕ್ಟ್ ಮಾಡಿದ್ದೀವಿ. ಆ ಜನರಿಗಾಗಿ ಮೊಟ್ಟಮೊದಲಿಗೆ ಕನ್ನಡದಲ್ಲಿ ಕಾಲ್‌ ಸೆಂಟರ್‌ ಮಾಡುತ್ತಿದ್ದೇವೆ. ವಾಟ್ಸಾಪ್‌, ಕಾಲ್‌, ಟೆಕ್ಸ್ಟ್‌ಮೆಸೇಜ್‌ ಮೂಲಕ ಕನ್ನಡ ಪುಸ್ತಕಗಳ ಮಾರಾಟ, ಪ್ರೇರಣೆ ಎರಡೂ ಕೆಲಸ ಇದರಿಂದಾಗುತ್ತೆ.

Buddha Purnima: ಬುದ್ಧ ಮಾನವತೆಯ ಮಂದಹಾಸ ತೊರೆದು ಹೋದವನು ತೋರಿದ ದಾರಿ

3. ಕನ್ನಡ ಪುಸ್ತಕಗಳ ಬ್ರ್ಯಾಂಡ್‌

ಮಾರಾಟಕ್ಕೆ ಬ್ರ್ಯಾಂಡ್‌ ಕ್ರಿಯೇಟ್‌ ಮಾಡಬೇಕಾದ್ದು ಇಂದಿನ ಅಗತ್ಯ. ನಾವು ಹಲ್ಲುಜ್ಜೋ ಪೇಸ್ಟ್‌ಗೂ ಬ್ರ್ಯಾಂಡ್‌, ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆಇದೆ. ಆದರೆ ಕನ್ನಡ ಪುಸ್ತಕಗಳಿಗೆ ಆ ಸೌಭಾಗ್ಯ ಇಲ್ಲ. ಆ ನಿಟ್ಟಿನಲ್ಲೂ ನಾವು ಹೆಜ್ಜೆ ಮುಂದಿಟ್ಟಿದ್ದೇವೆ.

4. ರಮೇಶ್‌ ಅರವಿಂದ ಕನ್ನಡ ಪುಸ್ತಕ ರಾಯಭಾರಿ

ಬ್ರ್ಯಾಂಡ್‌ ಅಂತ ಮಾಡಿದ ಮೇಲೆ ಬ್ರ್ಯಾಂಡ್‌ ಅಂಬಾಸಿಡರ್‌ ಅಂದರೆ ರಾಯಭಾರಿ ಬೇಕು. ನಮ್ಮೆಲ್ಲರ ಪ್ರೀತಿ ನಟ ರಮೇಶ್‌ ಅರವಿಂದ್‌ ಅವರೇ ಕನ್ನಡ ಪುಸ್ತಕಗಳ ರಾಯಭಾರಿ.

5. ಸಾಹಿತಿಗಳ ತಂಡದಿಂದ ಪ್ರಚಾರ

ನಮ್ಮ ಸಿನಿಮಾ ತಂಡಗಳು ಸಿನಿಮಾ ಬಗ್ಗೆ ಎಷ್ಟೆಲ್ಲ ಪ್ರಚಾರ ಮಾಡ್ತಾರೆ, ಅದೇ ಥರ ಸುತ್ತಲಿನ ಕಾಲೇಜುಗಳಲ್ಲಿ ಬಿಡುಗಡೆಯಾದ ಪುಸ್ತಕದ ಬಗ್ಗೆ ಪ್ರಚಾರ ಮಾಡುತ್ತೇವೆ. ಸಾಹಿತಿಗಳ ತಂಡದ ಮೂಲಕ ಸಂವಾದ ಏರ್ಪಡಿಸಿ ಹೆಚ್ಚು ಪುಸ್ತಕ ಮಾರಾಟ ಮಾಡುವ ಪ್ರಯತ್ನ ಮಾಡುತ್ತೇವೆ.

ಚಿತ್ರಕತೆ ಬರೆಯುವವರಿಗೆ ರಾಜ್‌ ಬಿ ಶೆಟ್ಟಿ ಅವರಿಂದ 7 ಪಾಠಗಳು

ಸ್ಟಾರ್‌ ಹೊಟೇಲ್‌ನಲ್ಲಿ ಕೃತಿ ಬಿಡುಗಡೆ

ಜೂನ್‌ 8ರ ಬುಧವಾರ ಸಂಜೆ ಜನಪ್ರಿಯ ಸಾಹಿತಿಗಳ ಹತ್ತು ಕೃತಿಗಳು ವೀರಲೋಕ ಪಬ್ಲಿಕೇಶನ್‌ ಮೂಲಕ ಬಿಡುಗಡೆಯಾಗಲಿವೆ. ಕಿಚ್ಚ ಸುದೀಪ್‌ ಕೃತಿಗಳ ಅನಾವರಣ ಮಾಡಲಿದ್ದಾರೆ. ಸುಮಾರು 200 ಸಾಹಿತಿಗಳ ಮುಕ್ತ ಸಂವಾದವಿರುತ್ತದೆ. ಪ್ರತೀ ಪುಸ್ತಕದ ಬಗ್ಗೆ ಸಿನಿಮಾ ಟ್ರೇಲರ್‌ ಥರ ಪ್ರೊಮೋ ಮಾಡಿಸಿದ್ದೇವೆ. ಪ್ರತೀ ಪುಸ್ತಕ ಬಿಡುಗಡೆಗೆ 5 ನಿಮಿಷ ಸಮಯ. 1 ಗಂಟೆಯಲ್ಲಿ 10 ಕೃತಿಗಳ ಬಿಡುಗಡೆ ಮುಗಿಯುತ್ತೆ.

click me!