ಓದುಗರನ್ನು ರಾಮ ನಾಮ ಸ್ಮರಣೆಯಲ್ಲಿ ಮುಳುಗಿಸುವ "ವಾಲ್ಮೀಕಿ ರಾಮಾಯಣ ಕಾವ್ಯರೂಪ" ಲೋಕಾರ್ಪಣೆ

By Suvarna News  |  First Published Apr 19, 2024, 3:00 PM IST

ಪ್ರಸ್ತುತ ಎಚ್.ಕೆ. ಅನಂತಸುಬ್ಬರಾವ್‌ ಅವರು ಬರೆದಿರುವ ರಾಮಾಯಣ ಮಹಾಕಾವ್ಯ ಕೃತಿಯು ಇತ್ತೀಚಿನದು. ತಮಗೆ ಸೂಕ್ತವೆನಿಸಿದ ಆಡುಮಾತಿನ ಶೈಲಿಯಲ್ಲೇ ಪದ್ಯಗಳನ್ನು ರಚಿಸಿರುವುದು  ಓದುಗರ ಮನಸ್ಸಿಗೆ ಮುದ ನೀಡುತ್ತದೆ. 


ನನ್ನ  ಬಾಲ್ಯಮಿತ್ರ ಎಚ್.ಕೆ. ಅನಂತಸುಬ್ಬರಾವ್ ಅವರು ಬರೆದ "ವಾಲ್ಮೀಕಿ ರಾಮಾಯಣ ಕಾವ್ಯರೂಪ" ರಾಮನವಮಿಯ ದಿನವೇ ಲೋಕಾರ್ಪಣೆಗೊಂಡಿದೆ. ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರಾದ ಜಿ.ಎನ್. ಲಕ್ಷ್ಮೀನಾರಾಯಣರಾವ್ ಅವರು ಈ ಕೃತಿಯನ್ನು ಬಿಡುಗಡೆ ಮಾಡಿದರು ಎಂದು ಡಾ. ಲಕ್ಷ್ಮೀನಾರಾಯಣಪ್ಪ ತಿಳಿಸಿದ್ದಾರೆ. 

ಎಚ್.ಕೆ. ಅನಂತಸುಬ್ಬರಾವ್ ಭಗವದ್ಗೀತೆ, ಕುಮಾರವ್ಯಾಸ ಭಾರತದ ಎಂಟು ರಸ ಪ್ರಸಂಗಗಳು ಪುಸ್ತಕ ಬರೆದು ಈಗಾಗಲೇ ಓದುಗರಿಗೆ ಪರಿಚಿತರಾದವರು. ಆಧ್ಯಾತ್ಮಿಕ ಸಾಹಿತ್ಯದಲ್ಲಿ ಹೆಸರಾದ ಹೊಸಕೆರೆ ಚಿದಂಬರಯ್ಯ ಅವರ ಊರಾದ ಗುಬ್ಬಿ ತಾಲ್ಲೂಕು ಹೊಸಕೆರೆ ಗ್ರಾಮದವರು. 

Tap to resize

Latest Videos

undefined

ಎರಡನೇ ಮಹಾಯುದ್ಧದ ಫ್ಲಾಶ್​ಬ್ಯಾಕ್​​ನಲ್ಲಿ ಬಂಗಾರ ಹೊತ್ತ ರೈಲು ಹುಡುಕುವ ಥ್ರಿಲ್ಲರ್​ ಕಾದಂಬರಿ 'ಹನುಕಿಯಾ'

ಪ್ರಸ್ತುತ ಎಚ್.ಕೆ. ಅನಂತಸುಬ್ಬರಾವ್‌ ಅವರು ಬರೆದಿರುವ ರಾಮಾಯಣ ಮಹಾಕಾವ್ಯ ಕೃತಿಯು ಇತ್ತೀಚಿನದು. ತಮಗೆ ಸೂಕ್ತವೆನಿಸಿದ ಆಡುಮಾತಿನ ಶೈಲಿಯಲ್ಲೇ ಪದ್ಯಗಳನ್ನು ರಚಿಸಿರುವುದು  ಓದುಗರ ಮನಸ್ಸಿಗೆ ಮುದ ನೀಡುತ್ತದೆ. 
ಮೂಲ ವಾಲ್ಮೀಕಿ ರಾಮಾಯಣದ ಮೊದಲ ನಾಲ್ಕು ಕಾಂಡಗಳಾದ ಬಾಲಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ ಮತ್ತು ಕಿಷ್ಕಿಂದಾ ಕಾಂಡ ಇವು ಈ ಸಂಪುಟ-೧ರಲ್ಲಿ ಪದ್ಯ ರೂಪದಲ್ಲಿ ಅನಾವರಣಗೊಂಡಿವೆ. ಉಳಿದ ಮೂರು

ಕಾಂಡಗಳು ಸಂಪುಟ ೨ಕ್ಕೆ ಮೀಸಲು. 

ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಎರಡು ಕ್ರೌಂಚ ಪಕ್ಷಿಗಳಲ್ಲಿ  ಒಂದನ್ನು ವ್ಯಾಧನೋರ್ವನು ಬಾಣದಿಂದ ಕೊಂದುದನ್ನು ಕಂಡು ಮರುಗಿ ವಾಲ್ಮೀಕಿ ಮಹರ್ಷಿಗಳು ಉದ್ಘರಿಸಿದ ವಾಕ್ಯದಿಂದಲೇ ಮೂಲ ವಾಲ್ಮೀಕಿ ರಾಮಾಯಣ  ಪ್ರಾರಂಭವಾಗುತ್ತದೆ.  ಎಚ್ ಕೆ ಅನಂತಸುಬ್ಬರಾವ್ ಅವರ ಈ ಕೃತಿಯಲ್ಲಿ ವೇದಾಧ್ಯಯನ ಸಂಪನ್ನರಾದ ಆನೇಕ ಶಿಷ್ಯರಿಂದ ಕೂಡಿದ ವಾಲ್ಮೀಕಿ ಋಷಿಗಳ ಆಶ್ರಮಕ್ಕೆ  ನಾರದ ಮುನಿಗಳು ನಾರಾಯಣ ನಾಮ ಸ್ಮರಣೆ  ಮಾಡುತ್ತಾ ಆಗಮಿಸಿದ ಕುರಿತ  ಪದ್ಯದಿಂದ ಕಥನ ಪ್ರಾರಂಭವಾಗುತ್ತದೆ. ಮೂಲ ರಾಮಾಯಣದಂತೆಯೇ ಇಲ್ಲಿಯೂ ಏಳು ಪರ್ವಗಳಲ್ಲಿ ರಾಮಾಯಣ ವರ್ಣಿತವಾಗಿದೆ. 

ಇಡೀ ಕೃತಿಯಲ್ಲಿ ಭಕ್ತಿಯೇ ಪ್ರಧಾನವಾಗಿ ಉಕ್ಕಿ ಹರಿದಿದ್ದು ಓದುಗರನ್ನು ರಾಮ ನಾಮ ಸ್ಮರಣೆಯಲ್ಲಿ ಮುಳುಗಿ ತೇಲಿಸುತ್ತದೆ. ಬಾಲಕಾಂಡದ ಮೂರನೆಯ ಪದ್ಯದಲ್ಲಿಯೇ ಶ್ರೀರಾಮನಲ್ಲಿದ್ದ ಸಕಲ ಸದ್ಗುಣಗಳನ್ನೂ ಲೇಖಕರು ನಾರದರ ಮಾತಿನ ಮೂಲಕ ವರ್ಣಿಸಿದ್ದಾರೆ.  ಸರಳ ಕನ್ನಡದಲ್ಲೇ ಕವಿತೆಗಳು ಇರುವುದರಿಂದ ಸುಲಭವಾಗಿ ಓದಿಸಿಕೊಂಡು, ಕಥೆ ಮುಂದೆ ಸಾಗುತ್ತದೆ. ಪ್ರಾಸಕ್ಕೆ ಪ್ರಾಧಾನ್ಯತೆ ನೀಡದೆ ವಸ್ತು ವಿಷಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಮೂಲ ರಾಮಾಯಣದ ಎಲ್ಲ ಅಂಶಗಳನ್ನೂ ಚಾಚೂ ತಪ್ಪದೆ ಯಥಾವತ್ತಾಗಿ ನಿರೂಪಿಸಲಾಗಿದೆ, ಈ ದಿಶೆಯಲ್ಲಿ ಲೇಖಕರ ಶ್ರಮ ಸಾರ್ಥಕವೆನಿಸಿದೆ. ಆಯೋಧ್ಯೆಯ ಭೂಮಿಯಲ್ಲಿ ಸುಂದರವಾದ ಶ್ರೀ ಬಾಲ ರಾಮನ ಮೂರ್ತಿ ಮರು ಪ್ರತಿಷ್ಠಾಪನೆಯ ನಂತರ ಪ್ರಕಟವಾಗುತ್ತಿರುವ ಪ್ರಥಮ ಕನ್ನಡ ರಾಮಾಯಣ ಇದು ಎಂಬ ಹೆಗ್ಗಳಿಕೆ ಈ ಕೃತಿಗೆ ಸಂದಿರುವ ಸುಂದರ ಮೆರುಗು. 

ಡಾ. ಲಕ್ಷ್ಮೀನಾರಾಯಣಪ್ಪ
(ದೂರವಾಣಿ : 9448658185)

click me!