ಬರಗಾಲದಲ್ಲಿ ಜನರಿಗೆ ಊಟ ಹಾಕಿದ್ದ ಸಿದ್ಧಗಂಗಾ ಮಠ

By Kannadaprabha News  |  First Published Jan 22, 2019, 11:12 AM IST

ನಿಲ್ಲಿಸಿದ್ದ ಅನುದಾನ ಮತ್ತೆ ಮುಂದುವರಿಸಿದ್ದ ದೇವರಾಜ ಅರಸು 


ದೇವರಾಜ ಅರಸು ಅವರು ಮೊದಲ ಬಾರಿಗೆ 1972ರಿಂದ 77ನೇ ಅವಧಿಗೆ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ತೀವ್ರ ಬರಗಾಲವಿತ್ತು. ಈ ಹಿನ್ನೆಲೆಯಲ್ಲಿ ಅವರು ಮಠಗಳಿಗೆ ನೀಡುತ್ತಿದ್ದ ಅನುದಾನ ನಿಲ್ಲಿಸಿಬಿಟ್ಟಿರು. ರಾಜ್ಯದೆಲ್ಲೆಡೆ ಬರಗಾಲ ಕಾಳ್ಗಿಚ್ಚಿನಂತೆ ವ್ಯಾಪಿಸಿದಾಗ ಎಲ್ಲರ ದೃಷ್ಟಿ ಬಿದ್ದದ್ದು ಸಿದ್ಧಗಂಗಾ ಮಠದ ಮೇಲೆ.

ಶಿವಕುಮಾರ ಸ್ವಾಮೀಜಿ ಅವರ ದಾಸೋಹದಿಂದ ನಾಡಿನಾದ್ಯಂತ ಸಿದ್ಧಗಂಗಾ ಮಠ ಗಮನ ಸೆಳೆದಿತ್ತು. ತೀವ್ರ ಬರಗಾಲ ಬಿದ್ದಾಗ ಎಲ್ಲರೂ ಉದ್ಯೋಗ ಅರಸಿಗುಳೆ ಹೊರಟರು. ಆದರೆ ಕೆಲಸವೇ ಸಿಗದಿದ್ದಾಗ ಊಟ, ವಸತಿಗಾಗಿ ಸಿದ್ಧಗಂಗೆ ಮಠದ ಕಡೆ ಮುಖ ಮಾಡಿದರು. ಮಠಕ್ಕೆ ಬರುವ ಯಾವುದೇ ಭಕ್ತ ಉಪವಾಸ ಹೋಗಬಾರದೆಂಬ ನಿಯಮ ಮಾಡಿದ್ದ ಸಿದ್ಧಗಂಗಾ ಶ್ರೀಗಳು ಮಠದ ಕಡೆ ಬರುತ್ತಿದ್ದ ಭಕ್ತರನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.

Tap to resize

Latest Videos

undefined

ಬಟ್ಟೆ ಹರಿದಿದ್ದರೂ ಪರವಾಗಿಲ್ಲ, ಕೈಲೊಂದು ಪುಸ್ತಕವಿರಲಿ: ಶಿವಕುಮಾರ ಸ್ವಾಮೀಜಿ

ಏಕಕಾಲದಲ್ಲಿ ಅಷ್ಟೊಂದು ಜನಕ್ಕೆ ಊಟ, ವಸತಿ ಕೊಡುವುದು ಮಠಕ್ಕೆ ತುಂಬಾ ಕಷ್ಟ ಇತ್ತು. ಆದರೆ ಮಠಕ್ಕೆ ಬರುವ ಯಾರನ್ನೂ ಉಪವಾಸ ಕಳಿಸಬಾರದೆಂಬ ನಿಯಮದ ಹಿನ್ನೆಲೆಯಲ್ಲಿ ಖುದ್ದು ಶ್ರೀಗಳೇ ಹೋಗಿ ಸೌದೆ ತಂದರು. ಅಕ್ಕಿ, ಬೇಳೆಯನ್ನು ಸಂಗ್ರಹಿಸಿ ಶ್ರೀ ಮಠದಲ್ಲಿ ನಿತ್ಯದಾಸೋಹ ಮಾಡುತ್ತಿದ್ದರು. ಸಿದ್ಧಗಂಗೆಯ ದಾಸೋಹ ಎಲ್ಲರ ಗಮನ ಸೆಳೆದಾಗ ಮತ್ತೆ ಮತ್ತೆ ಬೇರೆ ಬೇರೆ ಜಿಲ್ಲೆಗಳಿಂದ ಜನ ಬರಲು ಶುರುವಾದರು. ಯಾವುದಕ್ಕೂ ಎದೆಗುಂದದ ಶ್ರೀಗಳು ದಿನವಿಡಿ ಧವಸ ಧಾನ್ಯ, ಸೌದೆ ಸಂಗ್ರಹಕ್ಕೆ ತೊಡಗಿ ದಾಸೋಹ ನಿರ್ವಹಿಸಿದರು. ಸಿದ್ಧಗಂಗೆಯಲ್ಲಿ ಆಗುತ್ತಿದ್ದ ಈ ಮಹಾನ್ ಕಾರ್ಯದ ಬಗ್ಗೆ ದೇವರಾಜ ಅರಸು ಅವರಿಗೆ ತಿಳಿಯಿತು. ಕೂಡಲೇ ಶ್ರೀ ಮಠಕ್ಕೆ ಬಂದರು. ಅಲ್ಲಿ ನಿತ್ಯ ನಡೆಯುತ್ತಿದ್ದ ದಾಸೋಹವನ್ನು ಕಂಡು ನಿಲ್ಲಿಸಿದ್ದ ಅನುದಾನ ಮತ್ತೆ ಮುಂದುವರಿಸಿದರಂತೆ.

ಸಿದ್ಧಗಂಗಾ ಮಠದ ವೈಭವ ನೋಡಲು ಅರ್ಧ ದಿನವೇ ಬೇಕು!

 

click me!