ಬೆಟ್ಟದ ಬುಡದಲ್ಲಿಯೇ ಹಳೆಯ ಮಠವಿದೆ. ಪಕ್ಕದಲ್ಲಿ ಶಿವ ಯೋಗ ಉದ್ದಾನ ಸ್ವಾಮಿಗಳ ಗದ್ದುಗೆಯಿದೆ. ಪಕ್ಕದಲ್ಲಿಯೇ ಶ್ರೀಗಳ ಶಿವಯೋಗಿ ಮಂದಿರವಿದೆ. ಹಿಂಭಾಗದಿಂದ ಮುಂದೆ ಸಾಗಿದರೆ ಕಣ್ಮನ ಸೆಳೆ ಯುವ ಅತಿಥಿ ಗೃಹವಿದೆ. ಅಲ್ಲಿಂದ ನೇರ ಹೋದರೆ ವಿದ್ಯಾರ್ಥಿ ನಿಲಯವಿದೆ. ಅಲ್ಲೇ ಸಮೀಪ ಪ್ರಸಾದ ವಿತರಣಾ ಮಂದಿರವಿದೆ. ಒಳಗೆ ಮುಪ್ಪಿನ ಸ್ವಾಮಿಗಳ ಮಹಾನವಮಿ ಮಂಟಪವಿದೆ. ಪಕ್ಕದಲ್ಲಿ ಮರುಳಾರಾ ಧ್ಯರ ಗದ್ದುಗೆ, ಹಿಂಭಾಗಕ್ಕೆ ಅನತಿ ದೂರದಲ್ಲಿ ಗೋಶಾಲೆ, ಮಠದ ಮುಂಭಾಗದಲ್ಲಿ ಪವಿತ್ರ ಗದ್ದುಗೆ, ಅಟವಿ ಸ್ವಾಮಿಗಳ ಗದ್ದುಗೆ, ಶ್ರೀಮಠಕ್ಕೆ ಬರುವಾಗ ಎಡ ಭಾಗದಲ್ಲಿ ದರ್ಶನ ಮಂಟಪ, ಬಲಭಾಗದಲ್ಲಿ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಾಲಯ, ಸಿದ್ಧಗಂಗಾ ಮಾಸಿಕ ಕಾರ್ಯಾಲಯ, ಸಿದ್ಧಲಿಂಗೇಶ್ವರ ಮುದ್ರಣಾಲಯ, ಮತ್ತೆ ಅವುಗಳ ಎದುರು ಭಾಗಕ್ಕೆ ಅಕ್ಕಿ ಗಿರಣಿ, ವಜ್ರಮಹೋತ್ಸವ ಸ್ಮಾರಕ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿ ಅಂಧ ಮಕ್ಕಳ ಪಾಠಶಾಲೆ, ಮುಂದೆ ಬೃಹತ್ ಕಲ್ಯಾಣಿ, ಅದಕ್ಕೆ ಎದುರಾಗಿ ಬೃಹತ್ ಕಲ್ಯಾಣ ಮಂಟಪ, ಎಲ್ಲಕ್ಕೂ ಮೊದಲೇ ಕಣ್ಣಿಗೆ ಕಾಣುವ ಸಿದ್ಧಲಿಂಗೇಶ್ವರ ಸಂಸ್ಕೃತ ಮತ್ತು ವೇದ ಮಹಾಪಾಠಶಾಲೆ ಇದೆ.

ಗೋಶಾಲೆ ಸಮೀಪ ಸಾರ್ವಜನಿಕ ವಿದ್ಯಾರ್ಥಿನಿಲಯ, ಕ್ಯಾತ್ಸಂದ್ರ ಕಡೆಯಿಂದ ಬರುವಾಗ ಕಾಣುವ ವಸತಿಗೃಹಗಳು, ಬಸವೇಶ್ವರ ಉಪಾಧ್ಯಾಯ ತರಬೇತಿ ಸಂಸ್ಥೆ, ವಸ್ತು ಪ್ರದರ್ಶನದ ವಿಶಾಲ ಆವರಣ, ಶ್ರೀ ಮಠದ ಪರಿಸರವನ್ನು ಸದಾ ತಂಪಾಗಿಟ್ಟಿರುವ ತೋಟಗಳು, ಎಲ್ಲಕ್ಕೂ ಶಿವಮಯ, ಬೇಸತ್ತ ಮನಸಿಗೆ ಆನಂದ ಕೊಡುವ ಶಾಂತ ವಾತಾವರಣ, ಜನರು ನೋಡಲೇಬೇಕಾದ ಶ್ರೀಮಠದ ಚೇತೋಹಾರಿ ಪವಿತ್ರ ರಮಣೀಯ ದೃಶ್ಯ. ಸಂಜೆ ವಿದ್ಯಾರ್ಥಿಗಳು ಮಾಡುವ ಸಾಮೂಹಿಕ ಪ್ರಾರ್ಥನೆ ಇವೆಲ್ಲವೂ ಮಠದ ಆವರಣದಲ್ಲಿರುವ ವಿಶೇಷ ಸ್ಥಳಗಳು.

ನೋಡಬೇಕಾದ ಸ್ಥಳಗಳು:

  • ಜನರಲ್ ಹಾಸ್ಟೆಲ್, ಸಂಜೆ ಶ್ರೀ ಮಠದಲ್ಲಿ ನಡೆಯುವ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನಾ ಶಾಲೆ
  • ಬೆಟ್ಟದ ಮೇಲಿನ ಸಿದ್ಧಲಿಂಗೇಶ್ವರ ಸ್ವಾಮಿ ಮತ್ತು ಸಿದ್ಧಗಂಗಾ ಜಲೋದ್ಭವ ಪವಿತ್ರಕುಂಡ, ಶಿವಲಿಂಗ ಮತ್ತು ನಂದಿ ವಿಗ್ರಹ
  • ಹಳೇಮಠ, ಉದ್ಧಾನ ಶಿವಯೋಗಿಗಳ ಗದ್ದುಗೆ
  • ವಿದ್ಯಾರ್ಥಿಗಳು ಹಾಗೂ ಯಾತ್ರಾರ್ಥಿಗಳಿಗಾಗಿ ನಿರಂತರ ಸೇವಾ ನಿರತವಾದ ಪಾಕಶಾಲೆ ಮತ್ತು ಪ್ರಸಾದ ನಿಲಯ, ಶ್ರೀಗಳ ಸೇವಾ ಕಾರ್ಯಾಲಯ
  • ಅಟವಿಸ್ವಾಮಿ ಗದ್ದುಗೆ, ಉದ್ಧಾನ ಸ್ವಾಮಿ ಸಮುದಾಯ ಭವನ
  • ತಿಳಿನೀರಿನ ಕಲ್ಯಾಣಿ, ವಜ್ರಮಹೋತ್ಸವ ಸ್ಮಾರಕ, ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಆವರಣ, ದರ್ಶನ ಮಂಟಪ
  • ಸಿದ್ಧಲಿಂಗೇಶ್ವರ ಪುಸ್ತಕ ಮಳಿಗೆ, ಫೋಟೋ ಕೌಂಟರ್.