ಜೇನು ಕೃಷಿಯಲ್ಲಿ ಕೋಟ್ಯಂತರ ರುಪಾಯಿ ದುಡಿದ ಶಿರಸಿ ಮಧುಕೇಶ್ವರ ಹೆಗಡೆ!

Kannadaprabha News   | Asianet News
Published : Feb 11, 2020, 03:42 PM ISTUpdated : Feb 11, 2020, 03:57 PM IST
ಜೇನು ಕೃಷಿಯಲ್ಲಿ ಕೋಟ್ಯಂತರ ರುಪಾಯಿ ದುಡಿದ ಶಿರಸಿ ಮಧುಕೇಶ್ವರ ಹೆಗಡೆ!

ಸಾರಾಂಶ

ಈ ಬಾರಿಯ ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದವರು ಶಿರಸಿ ತಾಲ್ಲೂಕು ಕಲ್ಲಳ್ಳಿ ಮನೆಯ ಮಧುಕೇಶ್ವರ ಹೆಗಡೆ. ಇವರು ಎರಡೂವರೆ ದಶಕಗಳಿಂದ ಜೇನು ಕೃಷಿಯಲ್ಲಿ ತೊಡಗಿಕೊಂಡು ‘ಮಧು ಬೀ’ ಸಂಸ್ಥೆ ಕಟ್ಟಿಬೆಳೆಸಿದ್ದಾರೆ.

ಶಿವಕುಮಾರ ಮುರಡಿಮಠ

ಬರೀ ಎಂಟನೇ ತರಗತಿ ಓದಿದ ಮಧುಕೇಶ್ವರ ಹೆಗಡೆ, ಬಂಡವಾಳದ ಕೊರತೆಯಿಂದ ಯಾವುದೇ ಉದ್ಯೋಗಕ್ಕೆ ಕೈ ಹಾಕುವ ಧೈರ್ಯ ತೋರಿರಲಿಲ್ಲ. ಸರ್ಕಾರಿ ನೌಕರರು, ಸ್ನೇಹಿತರ ಬಳಿ 500 ರು.ನಂತೆ ರು. 20 ಸಾವಿರ ಬಂಡವಾಳದೊಂದಿಗೆ ಆರಂಭಿಸಿದ ಜೇನು ಕೃಷಿ ಇದು ಬೃಹದಾಕಾರವಾಗಿ ಬೆಳೆದಿದೆ. ಆರಂಭದಲ್ಲಿ ಮಲೆæನಾಡಿನ ದಟ್ಟಅರಣ್ಯದಿಂದ ನೈಸರ್ಗಿಕವಾಗಿ ಜೇನು ಸಂಗ್ರಹಿಸುತ್ತಾರೆ. ಜೇನು ಮತ್ತು ಜೇನು ಉತ್ಪನ್ನಗಳ ಜೊತೆಗೆ ಹುತ್ತ ಜೇನು, ತುಡುವೆ, ಮಿಸೆರಿ, ಕೊಲ್ಜೇನು ಸಾಕಾಣಿಕೆ ಮಾಡಿ ವಾರ್ಷಿಕವಾಗಿ 8 ರಿಂದ 9 ಕೋಟಿ ಆದಾಯ ಗಳಿಸಿ ಯಶಸ್ವಿ ಜೇನು ಕೃಷಿಕರಾಗಿದ್ದಾರೆ.

ನಿಮ್ಮ ಜಾನುವಾರುಗಳು ಆರೋಗ್ಯಕರವಾಗಿರಲು ಕೆಲವು ಸಲಹೆಗಳು!

ಮಧುಕೇಶ್ವರ ಒಟ್ಟು 40 ಎಕರೆಯಲ್ಲಿ ಜೇನುಕೃಷಿ ಮಾಡುವ ಇವರು ಜೇನು ತುಪ್ಪ ಮಾರಾಟ, ಉಪ ಉತ್ಪನ್ನಗಳ ಮಾರಾಟದ ಜೊತೆಗೆ ಜೇನು ಹುಳು ಮಾರಾಟ, ಗೂಡು, ಜೇನು ಸಾಕುವ ಪಟ್ಟಿಗೆ, ಪರಾಗ ಇತ್ಯಾದಿ ಮಾರಾಟ ಮಾಡಿ ಆದಾಯ ಪಡೆಯುತ್ತಾರೆ.

ಜೇನು ಕೃಷಿಗೆ ಮಹತ್ವ ಹೆಚ್ಚಿದೆ. ಹಲವರು ಉಪಕಸುಬಾಗಿ ಜೇನು ಕೃಷಿ ಮಾಡುತ್ತಿದ್ದಾರೆ. ಜೇನು ಕೃಷಿಯಲ್ಲಿ ಆಸಕ್ತರು ಸಂಪರ್ಕಿಸಿದರೆ ಉಚಿತವಾಗಿ ಮಾಹಿತಿ ನೀಡುತ್ತೇನೆ.- ಮಧುಕೇಶ್ವರ ಹೆಗಡೆ, ಜೇನು ಕೃಷಿಕ

ಇವರು ಜೇನು ಸಾಕಾಣಿಕೆಯ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಆರ್ಯಭಟ ರಾಷ್ಟೀಯ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಕೃಷಿ ಸಾಧಕ ಪ್ರಶಸ್ತಿ, ಕರ್ನಾಟಕ ರತ್ನಇತ್ಯಾದಿ ಪ್ರಶಸ್ತಿಗಳು ಇವರಿಗೆ ಬಂದಿವೆ.

ಸೆಲೆಬ್ರಿಟಿಗಳು ಬಳಸುವ ರಾಯಲ್‌ ಜೆಲ್ಲಿ ಜೇನು ಇವರಲ್ಲಿದೆ

ಇವರ ತೋಟದಲ್ಲಿ ಅಡಿಕೆ, ಏಲಕ್ಕಿ, ಶತಾವರಿ, ಬಾಳೆ ಶುಂಠಿ, ನೆಲ್ಲಿ, ಬ್ರಾಹ್ಮಿ, ಕಾಳು ಮೆಣಸು, ಕೋಕಂ ಸೇರಿದಂತೆ 280ಕ್ಕೂ ಅಧಿಕ ಔಷಧೀಯ ಗಿಡಗಳಿವೆ. ಇವುಗಳಿಂದ ಲೆಮನ್‌ ಸ್ಕಾ್ಯಷ್‌, ಗಾರ್ಲಿಕ್‌ ಹನಿ, ಬೀ ಪೋಲನ್‌, ಜಿಂಜರ್‌ ಹನಿ, ಕಲ್ಲಳ್ಳಿ ಜೇನು ಇತ್ಯಾದಿ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರಿಸುತ್ತಾರೆ. ಸೆಲೆಬ್ರಿಟಿಗಳು ಬಳಸುವ ‘ರಾಯಲ್‌ ಜೆಲ್ಲಿ ಜೇನು’ ಇವರು ಸಿದ್ಧಪಡಿಸುತ್ತಾರೆ. ಅಳಿವಿನ ಅಂಚಿನಲ್ಲಿರುವ ಕೆಂಪು ಸರ್ಪಗಂಧ, ಏಕನಾಯಕ(ಸೆಲೆಷಿಯಾ), ಸೋಮಾರ ಬೇರು, ಕಾಡು ದಾಲ್ಚೀನ್ನಿ, ಆರ್ಕಿಡ್‌ ಇತ್ಯಾದಿ ಬೆಳೆಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ಮಧುಕೇಶ್ವರ ಅವರ ಮೊಬೈಲ್‌ ಸಂಖ್ಯೆ: 9480746335.

35ಕ್ಕೂ ಹೆಚ್ಚು ಹೊಸ ಕೃಷಿ ಯಂತ್ರ ಸಂಶೋಧನೆ; ಕೃಷಿ ಯಂತ್ರಕರ್ತೆ ಶೈಲಜಾ ವಿಠಲ್‌!

ಶಿರಸಿಯ ಹನಿ ಜ್ಯಾಂ ಇಗ್ಲೆಂಡ್‌ಗೆ

ಮಧುಕೇಶ್ವರ ಅವರು ಔಷಧೀಯ ಗುಣವುಳ್ಳ ಜೇನು ತುಪ್ಪದಿಂದ ನೈಸರ್ಗಿಕವಾದ ಹನಿ ಜ್ಯಾಂ ತಯಾರಿಸಿದ್ದಾರೆ. ಅದು ಇಂಗ್ಲೆಂಡ್‌ ಮಾರುಕಟ್ಟೆಯಲ್ಲಿಯೂ ಬಿಕರಿಯಾಗುತ್ತಿದೆ ಎಂಬುದು ವಿಶೇಷ.

PREV
click me!

Recommended Stories

ಮಾತಾಡಿ ಮಾತಾಡಿ ಕಾಸು ಮಾಡಿ.. ಹೇಗೆ ಅಂತೀರಾ? ಪಾಡ್‌ಕಾಸ್ಟ್‌ ಅಲ್ಲ ವೋಡ್‌ಕಾಸ್ಟ್‌
ಕ್ರೈಮ್‌ ರಿಪೋರ್ಟರ್ ಕಂಡಂತೆ ಐಪಿಎಸ್ ಅಧಿಕಾರಿ ಎನ್‌.ಎಸ್‌. ಮೇಘರಿಕ್