ಪೊಲೀಸ್ ಮಂಜು ಬರೆದ ‘24 ಸೆಕೆಂಡ್ಸ್’ ಸ್ಕ್ರಿಪ್ಟ್!

Published : Jan 29, 2019, 10:08 AM IST
ಪೊಲೀಸ್ ಮಂಜು ಬರೆದ ‘24 ಸೆಕೆಂಡ್ಸ್’ ಸ್ಕ್ರಿಪ್ಟ್!

ಸಾರಾಂಶ

ಲೋಕಾಯುಕ್ತ ನ್ಯಾಯಾಧೀಶ ಪಿ. ವಿಶ್ವನಾಥ್‌ ಶೆಟ್ಟಿಯವರ ಪೊಲೀಸ್‌ ಭದ್ರತಾ ಸಿಬ್ಬಂದಿ ಮಂಜು ತರೀಕೆರೆ ಸಿನಿಮಾಗೆಂದೇ ಕ್ರೈಂ ಥ್ರಿಲ್ಲರ್‌ ಕಥೆ ಬರೆದಿದ್ದಾರೆ. ಅದರ ಹೆಸರು ‘24 ಸೆಕೆಂಡ್ಸ್‌’. ಇಂಟರೆಸ್ಟಿಂಗ್‌ ಎಂದರೆ ಚಿತ್ರಕತೆ ಮಾದರಿಯಲ್ಲೇ ಅವರು ಪುಸ್ತಕ ಬರೆದಿದ್ದಾರೆ. 

 ಅಷ್ಟೇ ಅಲ್ಲದೆ, ಚಿತ್ರದ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ಮಂಡಳಿಯಲ್ಲಿ ಈಗಾಗಲೇ ನೋಂದಾಯಿಸಿದ್ದಾರೆ.

ಈ ಕತೆ, ಚಿತ್ರಕತೆ ರಚಿಸಲು ಮಂಜು ಒಂದು ವರ್ಷ ತೆಗೆದುಕೊಂಡಿದ್ದಾರೆ. ಮಂಗಳಮುಖಿಯರ ಜೀವನದ ಕಥಾ ಹಂದರ ಹಾಗೂ ಹಳ್ಳಿಯೊಂದರಲ್ಲಿ ಶಾಮಿಯಾನ ಹೊಡೆಯುವ ಒಬ್ಬ ಅಮಾಯಕನ ದುರಂತ ಪ್ರೇಮ ಕಥೆಯನ್ನು ಈ ಕೃತಿ ಒಳಗೊಂಡಿದೆ. ‘ಒಬ್ಬ ಭಾರತೀಯ ಪ್ರಜೆಯಾಗಿ ತಮ್ಮ 24 ಗಂಟೆಗಳ ಸ್ವಾರ್ಥ ಜೀವನವನ್ನು ಮರೆತು, ಕನಿಷ್ಠ 24 ಸೆಕೆಂಡ್ಸ್‌ನಷ್ಟುಸಮಯವನ್ನಾದರೂ ಕಷ್ಟದಲ್ಲಿರುವವರಿಗೆ ಮೀಸಲಿಡಬೇಕು ಎಂಬ ಸಂದೇಶ ಇರುವ ಕತೆ ಇದು’ ಎನ್ನುತ್ತಾರೆ ಮಂಜು ತರೀಕೆರೆ.

ಉತ್ತಮ ಕಥೆ ಸಿಕ್ಕರೆ ಸಿನಿಮಾ ಮಾಡಲು ಇಚ್ಛಿಸುವ ನಿರ್ಮಾಪಕರು ಪೊಲೀಸ್‌ ಬರೆದ ಈ ಕತೆ- ಚಿತ್ರಕತೆ ಹಕ್ಕು ಪಡೆಯಲು ಸಂಪರ್ಕಿಸಬಹುದು. ದೂ: 9739670959, 9945046659

'ಪುನರ್ವಸು' ಕಾದಂಬರಿ ಲೋಕಾರ್ಪಣೆಯ ಸಾರ್ಥಕ ಕ್ಷಣ

PREV
click me!

Recommended Stories

ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು-ಮೆಲುಕು
ಬಿಗ್‌ಬಾಸ್ ಮನೆಯ ಕಹಿ ಅನುಭವ ಬಿಚ್ಚಿಟ್ಟ ಆನಂದ್