Jaipur Literature Festival 2022: ಅನುಭವಿ ಕಂಡಂತೆ ಸಾಹಿತ್ಯ ಜಾತ್ರೆ

By Suvarna News  |  First Published Mar 10, 2022, 3:55 PM IST

ಜೈಪುರ ಸಾಹಿತ್ಯ ಉತ್ಸವ(JLF)- ಸಾಹಿತ್ಯ ಪ್ರಿಯರಿಗೆ ಭೂರಿ ಭೋಜನ. ಸಂತೆಯ ನಡುವೆ ಬೆರಗಲ್ಲಿ ನಿಂತವಗೆ ಸಾಹಿತ್ಯ ಸಂತರೆಲ್ಲ ತಾಕಿಕೊಂಡು ಹೋಗುವಾಗ ಆಗುವ ರೋಮಾಂಚನ, ಸಾಹಿತ್ಯದ ಸರ್ವ ಪ್ರಾಕಾರಗಳನ್ನೂ ಸಂಭ್ರಮಿಸುವ ಭಾವಸಿಂಚನ.. ವೇದಿಕೆ, ಊಟೋಪಚಾರ, ವ್ಯಾಪಾರ.. ಎಲ್ಲವನ್ನೂ ಇಲ್ಲೊಬ್ಬರು ಅನುಭವಿ ಹಂಚಿಕೊಂಡಿದ್ದಾರೆ. 


ಕಲ್ಲಚ್ಚು ಮಹೇಶ ಆರ್. ನಾಯಕ್

ಆದನೇ ಹೇಳಿ ಸಾಹಿತ್ಯ(Literature) ನಮ್ಮ ನಿತ್ಯ ಜೀವನದ ಮುಖವೆ! ಅದೆಷ್ಟು ಕಾಲ್ಪನಿಕತೆ ಅದರಲ್ಲಿದ್ದರೂ ಕೊನೆಗೂ ಅದು ಸಮಾಗಮವಾಗುವುದು ಬದುಕಿನ ಬಹುಮುಖ ಸತ್ಯದಲ್ಲೇ. ಇದನ್ನೆಲ್ಲ ಕಾಣಲು ಜೈಪುರ ಸಾಹಿತ್ಯ ಹಬ್ಬ(Jaipur Literature Festival) ಒಂದು ಅತ್ಯುತ್ತಮ ತಾಣ. 

Latest Videos

undefined

ಆತ್ಯಾಧುನಿಕ ಉಡುಗೆ ತೊಡುಗೆ ಧರಿಸಿದ ನವ ತರುಣ ತರುಣಿಯರ ದಂಡು ಒಂದೆಡೆಯಾದರೆ ಪ್ಯೂರ್ ಕಾಂಜೀವರಂ ಧರಿಸಿ ಸರಸರ ಓಡಾಡುತ್ತಿದ್ದವರೂ ಅಲ್ಲಿದ್ದರು. ದಿನವೊಂದಕ್ಕೆ ತಲಾ 200/- ರೂಪಾಯಿ ಪಾವತಿಸಿ(ಇತರ ಹೆಚ್ಚು ಮೊತ್ತದ ಸ್ಕೀಮ್ಸ್ ಸಹ ಇದೆ) ಆಯಿತು. ಬಂದವರ ಉದರ ತಣಿಸಲು ಮಸಾಲೆ ದೋಸೆ, ಪನ್ನೀರು ರೊಟ್ಟಿ ಇತ್ಯಾದಿ ಹತ್ತಾರು ಬಗೆಯ ಪೇ ಅಂಡ್ಯ್ ಯೂಸ್ ಮಳಿಗೆಗಳ ನಡುವೆಯೇ ನಳನಳಿಪ ಬಾರ್ ಕೌಂಟರ್! ಹಸಿ ಚುನಾವಣಾ ಫಲಿತಾಂಶ(election result)ದ ಚರ್ಚೆಗಳ ನಡುವೆ ಒಂದಿಷ್ಟು ಹುಸಿಯನಾಡಲು ಈಗಾಗಲೇ ಬಿಸಿಯೇರಿದ ರಾಜಸ್ಥಾನ(Rajastan)ದ ಹವೆಯ ನಡುವೆ JLFನಲ್ಲಿ ಈ ಬಾರಿ ಕಾಣಸಿಗದ್ದೆಂದರೆ ವಿದ್ಯಾರ್ಥಿ ಗಣ. 

ಜೈಪುರ(Jaipur) ಸಿಟಿ ಮಧ್ಯದಿಂದ ನಗರದ ಹೊರವಲಯದ ಪಂಚತಾರಾ ಹೋಟೆಲ್ ಅವರಣಕ್ಕೆ ಬಂದು ಜಗತ್ತಿನ ಆತೀ ದೊಡ್ಡ ಮಟ್ಟಿನ ಸಾಹಿತ್ಯ ಹಬ್ಬ ಎಂದೆಣಿಸಿಕೊಳ್ಳುತ್ತಿದ್ದ ಪಟ್ಟದಿಂದ ವಂಚಿತವಾಗಿದೆ. ಆದರೂ ಸಡಗರ ಸಂಭ್ರಮಕ್ಕೇನೂ ಕಿಂಚಿತ್ತೂ ಕಡಿಮೆ ಇಲ್ಲದಂತಿದೆ ಈ ಉತ್ಸವ. ಏಕಕಾಲಕ್ಕೆ ಸಾಹಿತ್ಯ ಮತ್ತು ಪೂರಕವಾದ ಐದು ವೇದಿಕೆಯ ಮಾತುಕತೆ ನಡೆಯುತ್ತಿದ್ದರೆ ಎತ್ತ ಕಡೆ ಕಣ್ಣು, ಕಿವಿ ಹಾಯಿಸುವುದೆಂಬ ಗೊಂದಲ ಸಾಹಿತ್ಯ ಪ್ರೇಕ್ಷಕನದ್ದು. 

ಜೈಪುರ ಸಾಹಿತ್ಯ ಉತ್ಸವದ ಆನ್‌ಗ್ರೌಂಡ್ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ನೊಬೆಲ್ ಪ್ರಶಸ್ತಿ ವಿಜೇತರನ್ನು, ಬೂಕರ್(Booker), ಅಕಾಡೆಮಿ ಪ್ರಶಸ್ತಿ ವಿಜೇತರನ್ನು ಬಹಳ ಸಮಯದಿಂದ ಮುಖತಃ ನೋಡಬೇಕು, ಸಾಧ್ಯ ಆದರೆ ಮಾತನಾಡಬೇಕು ಎಂದು ಕನಸು ಕಾಣುವ ಸಾಹಿತ್ಯಾಸಕ್ತರು ನಾವು. ಅಂಥದರಲ್ಲಿ ಈ ಉತ್ಸವದಲ್ಲಿ ಜಗತ್ತಿನ ವಿವಿಧ ಭಾಗದ ಸಾಹಿತಿಗಳು ನಮ್ಮ ತೋಳು ಒರೆಸಿಕೊಂಡೇ ಹೋಗುವ ಸಂತಸ ಒಂದು ರೀತಿ ಅವ್ಯಕ್ತವೇ ಸರಿ. ಇಂದು ಕಥೆ ಕವನಗಳೇ ಬರಿ ಸಾಹಿತ್ಯವಾಗಿ ಉಳಿದಿಲ್ಲ, ಬದಲಾಗಿ ಯುಕ್ರೇನ್‍ ಯುದ್ಧದ ಮಗುವಿನ ಆಳು ಸಹ ಇದೀಗ ಭಾವವೇಶ ರೋಚಕತೆ ಫ್ಯಾಂಟಸಿ! ಎಲ್ಲವನ್ನೂ ಬದಿಗಿಟ್ಟು ಮಾನವೀಯ ನೆಲೆಯಲ್ಲಿ ನೋಡುವ ಕೇಳುವ ಅಗತ್ಯವನ್ನು ತೆರೆದಿಡುತ್ತಿದೆ 15ನೇ ಆವೃತ್ತಿಯ ಜೈಪುರ ಸಾಹಿತ್ಯ ಹಬ್ಬ. ಸಂಜೆಯ ಕಲಾ ವೈವಿಧ್ಯತೆ ಜತೆಗೆ ಒಂದೊಳ್ಳೆ ಲಾಭದಾಯಕವಾದ ಈವೆಂಟ್ ರೂಪ ತಾಳಿ ಆಕರ್ಷಕತೆ ಹೆಚ್ಚಿದೆ.

Election 2022 Result ಕೈತಪ್ಪಿದ್ದು ಪಂಜಾಬ್ ಮಾತ್ರ, ಪಂಚ ರಾಜ್ಯ ಸೋಲು ಸಮರ್ಥಿಸಿಕೊಂಡ ಸಿದ್ದು!

ಸಾಹಿತ್ಯ ಹಬ್ಬದ ಪ್ರಾಂಗಣದ ಬುಕ್ ಸ್ಟಾಲ್(book stall) ಖಂಡಿತ ಪುಸ್ತಕ ಓದುವವರಿಲ್ಲ ಎಂಬ ಜನರ ಮಾತನ್ನು ಸಾರಾಸಗಟಾಗಿ ಸುಳ್ಳಾಗಿಸುತ್ತಿದೆ ಭರ್ಜರಿ ವ್ಯಾಪಾರದೊಡನೆ! ಸುತ್ತಲ ಬಜಾರ್ ರಾಜಸ್ಥಾನದ ಬಟ್ಟೆಬರೆ ಕಲಾತ್ಮಕ ವಸ್ತುಗಳನ್ನು ಮನೆಯ ಮನದನ್ನೆಗೆ ಹೊತ್ತೊಯ್ಯಲು ಕಾದಿದೆ- ದೇಶದ ಉದ್ದಗಲದಿಂದ ಬಂದಿರುವ, ಸಾಹಿತ್ಯ ಹಬ್ಬಗಳ  ಹಿಂದೆ ಸತತವಾಗಿ ಓಡಾಡುವ ಸಾಹಿತಿ ಮತ್ತು ಸಾಹಿತ್ಯ ಪ್ರಿಯರಿಗೆ!

click me!