ಪ್ರಿಯಾಳ ಮುಖಗವಸು: ಕೋವಿಡ್ ವಿರುದ್ಧ ಸೆಣೆಸುವ ಮೊದಲ ಕಾಮಿಕ್ ನಾಯಕಿಯ ಕಥೆ

By Suvarna NewsFirst Published Jan 23, 2021, 10:12 PM IST
Highlights

ಕೋವಿಡ್ ವಿರುದ್ಧ ಸೆಣೆಸುವ ಮೊದಲ ಕಾಮಿಕ್ ನಾಯಕಿಯ ಕಥೆ ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗೆಯಾಗಿದೆ.

ಚೆನ್ನೈ, (ಜ.23): ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯು ಜನಪ್ರಿಯ ಕಾಮಿಕ್ ಪುಸ್ತಕ “ಪ್ರಿಯಾಳ ಮುಖಗವಸು” ಅಂತರ್ಜಾಲ ಅವತರಣಿಕೆಯನ್ನು ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ದಕ್ಷಿಣ ಭಾರತದ ಸಾಮಾಜಿಕ ಜಾಲತಾಣ ಪ್ರಭಾವಿಗಳ ಮೂಲಕ ಬಿಡುಗಡೆ ಮಾಡಿದೆ.  

’ಪ್ರಿಯಾಳ ಮುಖಗವಸು’ ಕಥಾ ನಾಯಕಿಯನ್ನು ಹೊಂದಿದ ಭಾರತದ ಮೊಟ್ಟಮೊದಲ ಕಾಮಿಕ್ ಪುಸ್ತಕ. ಪ್ರಿಯಾ ಜಗತ್ತಿನ ಎಲ್ಲಾ ಹುಡುಗಿಯರಿಗೆ   ಸಾಮರ್ಥ್ಯ ಹಾಗೂ ಬದಲಾವಣೆಯ ಪ್ರೇರಕ ಶಕ್ತಿಯ ಸಂಕೇತವಾಗಿದ್ದಾಳೆ. ಎಲ್ಲಾ ದೇಶಗಳಲ್ಲಿ ಜನರ ಆರೋಗ್ಯ ಮತ್ತೆ ಸುರಕ್ಷೆಗೆ  ಆತಂಕ ತಂದೊಡ್ಡಿರುವ ಕೋವಿಡ್ 19 ಸಾಂಕ್ರಾಮಿಕ ಹಾಗೂ ಅದರ ಸುತ್ತ ಹರಡಿರುವ ತಪ್ಪು ಮಾಹಿತಿ ಮತ್ತು ಭಯದ ವಿರುದ್ಧ ಹೋರಾಡುತ್ತಾಳೆ. 

ಪ್ರಿಯಾಳ ಮುಖಗವಸು ಸರಣಿಯನ್ನು ಅಮೆರಿಕ ಮೂಲದದ ರಟಪಲಕ್ಸ್ ಮಾಧ್ಯಮ ಸಂಸ್ಥೆಯ ಸಂಸ್ಥಾಪಕರು, ಸಾಕ್ಷ್ಯಚಿತ್ರ ನಿರ್ದೇಶಕರು ಹಾಗೂ ತಂತ್ರಜ್ಞಾನ ಪರಿಣಿತರು ಆಗಿರುವ ರಾಮ್ ದೇವಿನೇನಿ ಅವರು ಸೃಜಿಸಿದ್ದು ಶುಭ್ರಾ ಪ್ರಕಾಶ್ ಅವರು ನವದೆಹಲಿಯ ಅಮೆರಿಕನ್ ಎಂಬೆಸ್ಸಿಯ  ಉತ್ತರ ಭಾರತ ಕಚೇರಿಯ(North India Office) ಸಹಾಯದೊಂದಿಗೆ  ಇದನ್ನು ಬರೆದಿದ್ದಾರೆ. 

ಜೋಗಿ ವಿರಚಿತ ‘ಗಿರಿಜಾ ಪರಸಂಗ’ ಕೃತಿ ಲೋಕಾರ್ಪಣೆ

 ವರ್ಧಿತ ವಾಸ್ತವದ ಕಾಮಿಕ್ ಪುಸ್ತಕವಾಗಿ ಬಿಡುಗಡೆಗೊಳ್ಳಲಿರುವ ಈ ಪುಸ್ತಕದ ಜೊತೆಗೆ ಭಾರತ ಮತ್ತು ಅಮೆರಿಕದ ಮಹಿಳಾವಾದದ ಪ್ರಮುಖರಾದ ರೊಸಾನ ಆರ್ಕೆಟ್, ವಿದ್ಯಾ ಬಾಲನ್, ಮೃಣಾಲ್ ಠಾಕುರ್ ಮತ್ತು ಸೈರಾ ಕಬೀರ್ ಅವರ ಧ್ವನಿಗಳನ್ನು ಹೊಂದಿದ  ಅನಿಮೇಟೆಡ್ ಕಿರುಚಿತ್ರ ಕೂಡ ಹೊರಬರಲಿದೆ.        

“ಜಾಗತಿಕ ಆರೋಗ್ಯಕ್ಕೆ ಎದುರಾಗಿರುವ ಸವಾಲುಗಳಸನ್ನು ಎದುರಿಸಲು ಅಮೆರಿಕ ಹಾಗೂ ಭಾರತದ ಪ್ರಖರ ಪ್ರತಿಭೆಗಳು ಜೊತೆಗೂಡಿ ಕೆಲಸ ಮಾಡಲು ಸಾಧ್ಯ ಎನ್ನುವುದಕ್ಕೆ ಈ ಕಾಮಿಕ್‌  ಪುಸ್ತಕ ಒಂದು ಉತ್ತಮ ಉದಾಹರಣೆ.  

ರಾಮ್ ದೇವಿನೇನಿ ಅವರು ಸೃಷ್ಟಿಸಿರುವ ಈ ಪುಸ್ತಕ ಈಗ ಪೋಷಕರಿಗೆ,ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಓದಲು ತಮಿಳು, ಕನ್ನಡ, ಹಾಗೂ ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ. ಈ ಚಿತ್ರಕಥೆಯಲ್ಲಿ ಪ್ರಿಯಾ ಕೋವಿಡ್ 19 ಸಾಂಕ್ರಾಮಿಕದ ಸುತ್ತ ಹರಡಿರುವ ತಪ್ಪು ಮಾಹಿತಿಯನ್ನು ಎದುರಿಸುವ ಬಗೆಯಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಮಕ್ಕಳು ಅನುಭವಿಸುವ ಭಯ ಮತ್ತು ಏಕಾಂಗಿತನವನ್ನು ವಿಶದವಾಗಿ ವಿವರಿಸಲಾಗಿದೆ,” ಎಂದು ಚೆನ್ನೈನಲ್ಲಿನ ಅಮೆರಿಕ ದೂತಾವಾಸದ ವಕ್ತಾರರಾದ ಕೋರಿ ಬೈಕಲ್‌ ಹೇಳಿದರು. 

ಜನವರಿ 24, ಅಂತರ್ರಾಷ್ಟ್ರೀಯ ಶಿಕ್ಷಣ ದಿನಕ್ಕೆ ಪೂರ್ವಭಾವಿಯಾಗಿ ದಕ್ಷಿಣ ಭಾರತದ ಸಾಮಾಜಿಕ ಜಾಲತಾಣ ಪ್ರಭಾವಿಗಳಾದ ಚಂದನ್ ಶೆಟ್ಟಿ (ಕರ್ನಾಟಕ) @chandanshettyofficial, ಅಪರ್ಣಾ ಮಲ್ಬರಿ (ಕೇರಳ) @invertedcocounut ಮತ್ತು ಇರ್ಫಾನ್ ಮೊಹಮದ್ (Tamil Nadu) @irfansview ಅವರುಗಳು ತಮ್ಮ ಜಾಲತಾಣಗಳಲ್ಲಿ ಪ್ರಿಯಾ – ಕಥಾ ನಾಯಕಿ ಕೋವಿಡ್ 19 ಅನ್ನು ಹೇಗೆ ನಿಯಂತ್ರಣಕ್ಕೆ ತರುತ್ತಾಳೆ ಎನ್ನುವ ಬಗ್ಗೆ ಚರ್ಚೆ ಮಾಡುವುದನ್ನು ನೋಡಬಹುದು. 

ಇದರ ಜೊತೆಗೆ ಚೆನ್ನೈ ಅಮೆರಿಕ ದೂತಾವಾಸ ಕಚೇರಿಯ ಇನ್ಸ್ಟಾ ಗ್ರಾಂ ಅಕೌಂಟ್ @usconsulatechennai ಅನ್ನು ಕೂಡ ಫಾಲೋ ಮಾಡಬಹುದು.   

ಪ್ರಿಯಾಳ ಮುಖಗವಸು ಚಿತ್ರಕಥೆಯ ತಮಿಳು, ಕನ್ನಡ ಮತ್ತು ಮಲಯಾಳಂ ಭಾಷಾ ಅವೃತ್ತಿಗಳನ್ನು ಉಚಿತವಾಗಿ  https://www.priyashakti.com/priyas-mask ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಅಮೆರಿಕ ದೂತಾವಾಸದ ಪ್ರಾಂತೀಯ ಇಂಗ್ಲಿಷ್ ಭಾಷಾ ಕಚೇರಿಯ (Regional English Language Office (RELO)) ಇಂಧ ಸಿದ್ಧ ಪಡಿಸಲಾದ ಉಚಿತ ಭಾಷಾ ಪಠ್ಯವನ್ನು ಬೋಧಕರು ಮತ್ತು ವಿದ್ಯಾರ್ಥಿಗಳು https://www.priyashakti.com/curriculum ಅನ್ನು ಬಳಸಿಕೊಳ್ಳಬಹುದು. 

click me!