ಕಿರಿಯ ವಯಸ್ಸಿನ ಹೆಮ್ಮೆಯ ಡ್ರಮ್ಮರ್ ಪ್ರಿಯಾ

By Web Desk  |  First Published Jan 2, 2019, 5:46 PM IST

ಸಂಗೀತ ಕುಟುಂಬದಿಂದ ಬಂದ ಪ್ರತಿಭೆ ಪ್ರಿಯಾ ಆಂಡ್ರೂ. ಓದಿಗಿಂತ ಸಂಗೀತಕ್ಕೇ ಹೆಚ್ಚು ಒತ್ತು. ಇಬ್ಬರು ಅಣ್ಣಂದಿರು, ಅಕ್ಕಂದಿರೂ ಸಹ ಸಂಗೀತಕ್ಕೆ ಹೆಚ್ಚು ಒತ್ತುನೀಡಿದ್ದರಿಂದ ಓದಿಗಿಂತ ಸಂಗೀತ ಕಲಿಕೆಯಲ್ಲಿ
ಮುಂದುವರಿದವರು. ಇವರ ಸಾಧನೆ ಕಥೆ ಇಲ್ಲಿದೆ ಓದಿ. 


ಬೆಂಗಳೂರು (ಜ. 02): ಓದಿಗಿಂತ ಸಂಗೀತಕ್ಕೇ ಹೆಚ್ಚು ಒತ್ತು. ಸಂಗೀತ ಕುಟುಂಬದಿಂದ ಬಂದ ಪ್ರತಿಭೆ ಪ್ರಿಯಾ ಆಂಡ್ರೂ. ಇಬ್ಬರು ಅಣ್ಣಂದಿರು, ಅಕ್ಕಂದಿರೂ ಸಹ ಸಂಗೀತಕ್ಕೆ ಹೆಚ್ಚು ಒತ್ತುನೀಡಿದ್ದರಿಂದ ಓದಿಗಿಂತ ಸಂಗೀತ ಕಲಿಕೆಯಲ್ಲಿ ಮುಂದುವರಿದವರು.

ಸುಮಾರು 8 ವರ್ಷದಲ್ಲಿಯೇ ವೇದಿಕೆ ಹತ್ತಿದ ಪ್ರಿಯಾ ಅವರು ರಾಜೇಶ್ ಕೃಷ್ಣನ್, ಶಮಿತಾ ಮಲ್ನಾಡ್, ವಿಜಯ್ ಪ್ರಕಾಶ್, ಹಾಡುಗಾರರ ಜೊತೆ ಡ್ರಮ್ ಬಾರಿಸಿದ್ದಾರೆ. ೩೨ ವರ್ಷದ ಪ್ರಿಯಾ ಅವರು ತಮ್ಮ ತಂದೆಯ ಕನಸನ್ನು ನನಸಾಗಿಸುತ್ತಾ ಡ್ರಮ್ ಬಾರಿಸುವ ಮೂಲಕ ಪ್ರಸಿದ್ಧಿ ಹೊಂದಿದ್ದಾರೆ. ಅಲ್ಲದೆ ರಾಜ್ಯದ ಏಕೈಕ ಮಹಿಳಾ ಡ್ರಮ್ಮರ್ ಎಂಬ ಖ್ಯಾತಿಯೂ ಇವರಿಗಿದೆ. ಪ್ರಿಯಾ ಅವರ ಈ ಸಾಧನೆ ಕುರಿತು ಮಾತನಾಡಿಸಿದಾಗ ಅವರ ಸಂಗೀತ ಜರ್ನಿ ಬಗ್ಗೆ ಹಂಚಿಕೊಂಡಿದ್ದು ಹೀಗೆ.

Tap to resize

Latest Videos

undefined

ಅಪ್ಪನೇ ಮೊದಲ ಗುರು

ತಂದೆ ಫಿಲಿಪ್ಸ್ ಆಂಡ್ರೂ ಅವರು ಮ್ಯೂಜಿಷಿಯನ್ ಆಗಿದ್ದು, ನನ್ನ ಹೆಸರಿನಲ್ಲಿಯೇ ಪ್ರಿಯಾ ಆ್ಯಂಡ್ರೂ ಎಂದು ಆರ್ಕೆಸ್ಟ್ರಾ ಮಾಡಿದ್ದರು. ಅಪ್ಪನಿಗೆ ನಾನು ಸಂಗೀತ ಕಲಿಯಬೇಕು ಎಂಬುದು ತುಂಬಾ ಆಸೆ ಇತ್ತು. ಕುಟುಂಬದಲ್ಲಿ ಎಲ್ಲರೂ ಸಹ ಮ್ಯೂಜಿಷಿಯನ್ನು ಆಗಿದ್ದು, ಎಲ್ಲರಿಗೂ ಅಪ್ಪನೇ ಹೇಳಿಕೊಡುತ್ತಿದ್ದರಿಂದ ಓದಿಗಿಂತ ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದರು. ಅದು ಎಷ್ಟರ ಮಟ್ಟಿಗೆ ಎಂದರೆ ಅಪ್ಪ ಹೇಳಿಕೊಟ್ಟ ಸಂಗೀತವನ್ನು ರಾತ್ರಿ ಎಷ್ಟೊತ್ತಿದ್ದರು ಒಪ್ಪಿಸಬೇಕಿತ್ತು. ಅವರು ಹೇಳಿಕೊಟ್ಟಿದ್ದನ್ನು ಒಪ್ಪಿಸಿದ ನಂತರವಷ್ಟೇ ನಮಗೆ ಊಟ ಹಾಕುತ್ತಿದ್ದರು.

ಅಣ್ಣನೇ ನನಗೆ ಸ್ಫೂರ್ತಿ

ದೊಡ್ಡಣ್ಣ ಜಾನ್ ಆಂಡ್ರೂ ಗಿಟಾರ್ ಪ್ಲೇಯರ್ ಹಾಗೂ ಎರಡನೇ ಅಣ್ಣ ಅರುಣ್ ಆಂಡ್ರೂ ಅವರು ಡ್ರಮ್ಮರ್. ಎರಡನೇ ಅಣ್ಣ ಮ್ಯೂಸಿಕ್ ಕಂಪೋಸರ್ ಕೂಡ ಆಗಿದ್ದರು. ಅಪ್ಪ ಸಿಂಗ್‌ಯಿಂಗ್ ಕಲಿ ಎನ್ನುತ್ತಿದ್ದರು. ಆದರೆ ಎರಡನೇ ಅಣ್ಣನನ್ನು ನೋಡಿ ಸಂಗಿಂಗ್‌ಗಿಂತ ಡ್ರಮ್ ಬಗ್ಗೆ ಹೆಚ್ಚು ಆಸೆ ಹುಟ್ಟಿತು. ಅಲ್ಲದೆ ಪ್ರತಿ ಹೊಸ ವರ್ಷಕ್ಕೆ ಟಿವಿಯಲ್ಲಿ ಶಿವಮಣಿ ಅವರು ಡ್ರಮ್ ಬಾರಿಸುತ್ತಿದ್ದರು. ಅದನ್ನು ತಪ್ಪದೇ ನೋಡುತ್ತಿದ್ದೆ. ಅಣ್ಣ ಹಾಗೂ ಶಿವಮಣಿ ಸರ್ ಅವರಿಂದ ಡ್ರಮ್ ಹುಚ್ಚು ಹೆಚ್ಚಿಸಿತು.

ಆದ ಸಂಗೀತಕ್ಕಿಂತ ಡ್ರಮ್ ಕಲಿಯಬೇಕು ಎಂದು ಹಠ ಮಾಡಿದಾಗ, ಅಪ್ಪ ನನಗೆ ಡ್ರಮ್ ಕಲಿಸಿದರು. ಪ್ರಾರಂಭದಲ್ಲಿ ನಾನು ಬ್ಯಾಂಬೂಸ್, ಕಾಂಗೋಸ್, ರಿಧಮ್ ಪ್ಯಾಡ್, ಆನಂತರ ಡ್ರಮ್ ಕಲಿಯಲು ಶುರುಮಾಡಿದೆ. ಓದು ಹಾಗೂ ಡ್ರಮ್ ಪ್ಲೇ ನಿಭಾಯಿಸುತ್ತಿದ್ದದ್ದು ಹೇಗೆ ನಾನು 12 ವರ್ಷದಲ್ಲಿದ್ದಾಗ ಬೆಳಗ್ಗೆ ಸಂಜೆ ಎಲ್ಲ ಕಾರ್ಯಕ್ರಮಗಳು ಇರುತ್ತಿತ್ತು. ಮನೆಯಲ್ಲಿ ಬೇರೆ ಸಂಗೀತಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಹಾಗಾಗಿ ಹೋಮ್ ವರ್ಕ್ ಮಾಡಿಲ್ಲವೆಂದರೆ ಶಾಲೆಯಲ್ಲಿ ಶಿಕ್ಷೆಯೂ ಸಿಕ್ಕುತ್ತಿತ್ತು.

ಕೆಲವೊಂದು ಬಾರಿ ಸುಳ್ಳು ಹೇಳಿದ್ದು ಇದೆ. ಸಂಗೀತಕ್ಕಾಗಿ ಹೀಗೆ ಮಾಡುತ್ತಿದ್ದೆ. ನನ್ನ ಶಿಕ್ಷಕರು ಸಹ ಕೆಲ ಕಾರ್ಯಕ್ರ ಮಗಳಿಗೆ ಬರುತ್ತಿದ್ದರಿಂದ ನನ್ನ ಪ್ರತಿಭೆ ನೋಡಿ ಪ್ರೋತ್ಸಾಹಿದ್ದು ಇದೆ, ಹಾಗೆ ಓದಿನಲ್ಲಿ,
ಹೋಮ್ ವರ್ಕ್, ಮಾರ್ಕ್ ಕಡಿಮೆ ಬಂದರೆ ಶಾಲೆಯಲ್ಲಿ ಬೈಸಿಕೊಂಡಿದ್ದು ಇದೆ. ಮೊದಲನೇ ವೇದಿಕೆ ಸುಮಾರು 8 ವರ್ಷಕ್ಕೆ ವೇದಿಕೆ ಮೇಲೆ ಡ್ರಮ್ ಬಾರಿಸಲು ಶುರು ಮಾಡಿದೆ. ಅಪ್ಪನ ಆಕ್ರೆಸ್ಟ್ರಾ ಇದ್ದಲ್ಲೆಲ್ಲಾ ನಾನು ಸ್ಕೂಲ್ ಮುಗಿಸಿಕೊಂಡು ಹೋಗಿ ಕಾರ್ಯಕ್ರಮದಲ್ಲಿ ಡ್ರಮ್ ಬಾರಿಸುತ್ತಿದ್ದೆ.

ಇನ್ಸಟ್ರುಮೆಂಟ್‌ಗಳು ಕೈಗೆ ಎಟುಕುತ್ತಿರಲಿಲ್ಲ. ಆಗಲೇ ಚೇರ್ ಹಾಕಿಕೊಂಡು ಡ್ರಮ್ ಬಾರಿಸುತ್ತಿದ್ದೆ. ಅದಾದನಂತರ ನನ್ನ ಪ್ರತಿಭೆ ಗುರುತಿಸಿ ಹಲವು ಕಡೆ ಕಾರ್ಯಕ್ರಮ ನೀಡಲು ಕರಿಯುತ್ತಿದ್ದರು. ಈವರೆಗೂ ಲೆಕ್ಕವೇ ಸಿಗದಷ್ಟು ಕಾರ್ಯಕ್ರಮಗಳನ್ನು ನೀಡಿದ್ದೇನೆ.

ವಿದೇಶಗಳಲ್ಲೂ ಡ್ರಮ್

ಕರ್ನಾಟಕದಲ್ಲಿ ಹಲವು ಕಡೆ ನಡೆದ ಕಾರ್ಯಕ್ರಮಗಳಲ್ಲಿ ಡ್ರಮ್ ಬಾರಿಸಿದ್ದು, ಹಲವು ಸಂಗೀತ ದಿಗ್ಗಜರ ಜೊತೆ ಡ್ರಮ್ ಬಾರಿಸಿದ್ದೀನಿ. ಮೈದೂರಿನಲ್ಲಿ ಎಸ್. ಜಾನಕಿ ಅವರ ಅಂತಿಮ ಸ್ಟೇಜ್ ಪರ್ಫಾಮೆನ್ಸ್‌ನಲ್ಲೊಯೂ ಡ್ರಮ್ ಬಾರಿಸಿದ್ದಲ್ಲದೆ, ರಾಜೇಶ್ ಕೃಷ್ಣನ್, ಅನುರಾಧ ಭಟ್, ಶಮಿತಾ ಮಲ್ನಾಡ್, ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಹೀಗೆ ಹಲವು ಗಣ್ಯರ ಜೊತೆ ವೇದಿಕೆ ಹಂಚಿಕೊಂಡಿದ್ದೇನೆ. ರಾಜ್ಯದಲ್ಲಿ ಅಷ್ಟೇ ಅಲ್ಲದೆ ದುಬೈ, ಮಲೇಷಿಯಾ, ಸಿಂಗಾಪೂರ್, ದಕ್ಷಿಣ ಆಫ್ರಿಕಾಗಳಲ್ಲೂ ಡ್ರಮ್ ಬಾರಿಸಿದ್ದೇನೆ. 

- ಮೇಘ ಎಂ ಎಸ್ 

click me!