ಕೆಲವರು ಈ ಬಗ್ಗೆ ಆತಂಕಗೊಂಡಿದ್ದರೆ ಹಲವರು ಆ ನಂದಿಗೆ ಆದಷ್ಟು ಬೇಗ ಜೀವ ಬರಲಿ ಎಂದು ಕಾಯುತ್ತಿದ್ದಾರಂತೆ. ಕಾರಣ, ಕಲಿಯುಗವನ್ನು ನೋಡಿ ಅವರಿಗೆ ಸಾಕು ಸಾಕಾಗಿದೆಯಂತೆ...
ಕಲಿಯುಗದ ಅಂತ್ಯವನ್ನು ಸೂಚಿಸುವ ಒಂದು ನಂದಿ ವಿಗ್ರಹ ಇದೆ ಅಂದ್ರೆ ನಂಬ್ತೀರಾ? ಹೌದು, ಇಂತಹ ಒಂದು ನಂದಿ ವಿಗ್ರಹ ಆಂಧ್ರ ಪ್ರದೇಶದ ಯಾಗಂಟಿಯಲ್ಲಿ ಇದೆ. ತೊಂಬತ್ತು ವರ್ಷಗಳ ಹಿಂದೆ ಈ ನಂದಿ ಇರುವ ಜಾಗದಲ್ಲಿ ಸುತ್ತಲೂ ನಾಲ್ಕು ಕಂಬಗಳ ಮಧ್ಯೆ ಜನರು ಪ್ರದಕ್ಷಿಣೆ ಹಾಕುವಷ್ಟು ಜಾಗವಿತ್ತಂತೆ. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ. ಈಗ ಆ ನಂದಿ ವಿಗ್ರಹ ಸುತ್ತಲಿನ ನಾಲ್ಕೂ ಕಂಬಗಳಿಗೆ ಅಂಟಿಕೊಂಡಿದೆ. ಹೀಗಾಗಿ ಜನರು ಈಗ ನಂದಿ ವಿಗ್ರಹವನ್ನು ಪ್ರದಕ್ಷಿಣೆ ಹಾಕಲು ಸಾಧ್ಯವಿಲ್ಲ.
ಭಾರತೀಯ ಪುರಾತತ್ವ ಇಲಾಖೆ ಈ ಬಗ್ಗೆ ಮಾಡಿರುವ ಸಂಶೋಧನೆಯಿಂದ ಈ ಕಲ್ಲಿನ ವಿಗ್ರಹ ಬೆಳೆಯುತ್ತಿದೆ ಎಂದು ದೃಢೀಕರಿಸಿದೆ. ಒಮ್ಮೆ ಈ ನಂದಿ ವಿಗ್ರಹಕ್ಕೆ ಜೀವ ಬಂದರೆ ಕಲಿಯುಗ ಅಂತ್ಯವಾಗುತ್ತದೆ ಎಂದು ಪೋತನೂರು ವೀರಬ್ರಹ್ಮೇಂದ್ರು ತಮ್ಮ ಕಾಲಜ್ಞಾನದಲ್ಲಿ ಹೇಳಿದ್ದಾರೆ. ಈ ಕಲ್ಲು 20 ವರ್ಷಕ್ಕೆ ಒಂದು ಇಂಚಿನಷ್ಟು ಬೆಳೆಯುತ್ತಿದೆ ಎಂದು ದಾಖಲೆ ಸಮೇತ ಪ್ರೂವ್ ಆಗಿದೆ. ಒಮ್ಮೆ ಜನರು ಹೇಳುತ್ತಿರುವಂತೆ, ಕಾಲಜ್ಞಾನದಲ್ಲಿ ಉಲ್ಲೇಖವಾಗಿರುವಂತೆ ಈ ನಂದಿ ವಿಗ್ರಹಕ್ಕೆ ಜೀವ ಬಂದರೆ ಏನು ಗತಿ ಎಂದು ಕೆಲವರು ಚಿಂತಾಕ್ರಾಂತರಾಗಿದ್ದಾರೆ ಎನ್ನಲಾಗಿದೆ.
undefined
ಮತ್ತೊಂದು ದಾಖಲೆ ವಿಷ್ಣುವರ್ಧನ್ ಹೆಸರಲ್ಲಿದೆ, ಅದ್ಯಾಕೆ ಹೊರಗೆ ಬಂದಿರ್ಲಿಲ್ಲ ಅಂತ ಗೊತ್ತಿಲ್ಲ..!
ಕೆಲವರು ಈ ಬಗ್ಗೆ ಆತಂಕಗೊಂಡಿದ್ದರೆ ಹಲವರು ಆ ನಂದಿಗೆ ಆದಷ್ಟು ಬೇಗ ಜೀವ ಬರಲಿ ಎಂದು ಕಾಯುತ್ತಿದ್ದಾರಂತೆ. ಕಾರಣ, ಕಲಿಯುಗವನ್ನು ನೋಡಿ ಅವರಿಗೆ ಸಾಕು ಸಾಕಾಗಿದೆಯಂತೆ. ಎಲ್ಲಿ ನೋಡಿದರೂ ವ್ಯಭಿಚಾರ, ಅವ್ಯವಹಾರ, ಅತ್ಯಾಚಾರ, ಕೊಲೆ ಹಾಗೂ ಸುಲಿಗೆಗಳೇ ತಾಂಡವವಾಡುತ್ತಿವೆ. ಇದು ಕಲಿಯುಗ ಅಂತ್ಯವಾಗುವವರೆಗೂ ಮುಂದುವರಿಯುತ್ತದೆ. ಹಾಗೆ ಹೇಳುವುದಕ್ಕಿಂತ, ಕಲಿಯುಗ ಅಂತ್ಯವಾಗುವುದೇ ಈ ಅನ್ಯಾಯ-ಅತ್ಯಾಚಾರಗಳ ಮೂಲಕ ಎನ್ನಲಾಗುತ್ತಿದೆ.
ನಾನಿನ್ನೂ ಬಾಡಿಗೆ ಮನೆಲ್ಲಿ ಇರೋದಕ್ಕೆ ಜೆನ್ಯೂನ್ ಕಾರಣವಿದೆ, ಗುಟ್ಟು ಬಿಚ್ಚಿಟ್ಟ ದಿನಕರ್ ತೂಗುದೀಪ!
ಹೀಗಾಗಿ ಯಾಗಂಟಿ ಸ್ಥಳೀಯ ಜನರು ಈ ದೇವಸ್ಥಾನಕ್ಕೆ ಬಂದಾಗ ಈ ನಂದಿ ವಿಗ್ರಹವನ್ನು ತಪ್ಪದೇ ಸ್ವತಃ ತಮ್ಮ ಕಣ್ಣಿಂದ ನೋಡುತ್ತಾರೆ ಎನ್ನಲಾಗಿದೆ. ಕಾರಣ, ಮೊದಲು ತಾವು ನೋಡಬೇಕು ಎನ್ನುವುದು ಒಂದು ಸಂಗತಿಯಾದರೆ, ಮೊದಲು ತಿಳಿದುಕೊಂಡರೆ ಕೆಲವು ಸಂಗತಿಗಳನ್ನು ಬೇರೆಯವರಿಗಿಂತ ಮೊದಲು ಮಾಡಬಹುದು ಎಂಬುದು ಇನ್ನೊಂದು ಸಂಗತಿಯಾಗಿರಬಹುದು. ಇದು ಊಹೆ ಅಷ್ಟೇ, ಕಾರಣ, ಬೇರೆ ಬೇರೆ ಜನರ ಮನಸ್ಸಿನಲ್ಲಿ ಏನಿದೆ ಎಂದು ಯಾರಾದರೂ ತಿಳಿದುಕೊಳ್ಳುವುದು ಕಷ್ಟವೇ ಸರಿ!