45ರಲ್ಲಿ 18ರ ತರುಣನಾಗುವಾಸೆ: ವರ್ಷಕ್ಕೆ 2 ಮಿಲಿಯನ್ ವೆಚ್ಚ ಮಾಡುವ ಉದ್ಯಮಿ

By Anusha Kb  |  First Published Jan 26, 2023, 8:28 PM IST

ಇಲ್ಲೊಬ್ಬರು ಅಮೆರಿಕಾ ಉದ್ಯಮಿ ಈಗ ಚಿರಯುವತಿಯಂತೆ ಕಾಣುವುದಕ್ಕೋಸ್ಕರ 2 ಮಿಲಿಯನ್ ಡಾಲರ್ ವೆಚ್ಚ ಮಾಡುತ್ತಿದ್ದು, ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. 


ನ್ಯೂಯಾರ್ಕ್: ಚಿರ ಯೌವ್ವನವಿರಬೇಕು, ವಯಸಾಗಲೇ ಬಾರದು ಎನ್ನುವುದು ಬಹು ಜನರ ಕನಸು ಆಸೆ ಎಲ್ಲವೂ. ಚಿರಯುವಕ ಚಿರಯುವತಿಯಂತೆ ಕಾಣುವುದಕ್ಕೋಸ್ಕರ ಅನೇಕರು ಇನ್ನಿಲ್ಲದ ಸಾಹಸ ಮಾಡುತ್ತಾರೆ. ವಯಸ್ಸನ್ನು ವಿಳಂಬಗೊಳಿಸುವ ಕುರಿತು ಅನೇಕ ಸಂಶೋಧನೆಗಳೇ ನಡೆದಿವೆ. ಆಹಾರ ಕ್ರಮದಲ್ಲಿ ಬದಲಾವಣೆ ಮಾಡುತ್ತಾರೆ. ಯೋಗ ಮಾಡುತ್ತಾರೆ. ಸಸ್ಯಹಾರ ಸೇವಿಸುತ್ತಾರೆ. ಜಂಕ್‌ಫುಡ್‌ಗಳನ್ನೆಲ್ಲಾ ಬಿಟ್ಟು ಆರೋಗ್ಯಯುತ ಆಹಾರವನ್ನಷ್ಟೇ ಸೇವಿಸುತ್ತಾರೆ ಇದು ಜನ ಸಾಮಾನ್ಯರ ಕತೆಯಾದರೆ ಇನ್ನು ಸಿನಿಮಾ ತಾರೆಯರು, ಶ್ರೀಮಂತರು ಕಾಸ್ಮೆಟಿಕ್ ಸರ್ಜರಿಯ ಮೊರೆ ಹೋಗುತ್ತಾರೆ. ಆದರೂ ವಯಸ್ಸಾಗುವುದನ್ನು ಇದುವರೆಗೂ ಯಾರಿಗೂ ತಡೆಯಲಾಗಿಲ್ಲ.  ಆದರೂ ಅನೇಕರು ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಾರೆ. ಅದೇ ರೀತಿ ಇಲ್ಲೊಬ್ಬರು ಉದ್ಯಮಿ ಈಗ ಚಿರಯುವತಿಯಂತೆ ಕಾಣುವುದಕ್ಕೋಸ್ಕರ 2 ಮಿಲಿಯನ್ ಡಾಲರ್ ವೆಚ್ಚ ಮಾಡುತ್ತಿದ್ದು, ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. 

ಅಮೆರಿಕಾದ ಉದ್ಯಮಿ, ಲೇಖಕ ಹಾಗೂ ಬರಹಗಾರ ಬ್ರಿಯಾನ್ ಜಾನ್ಸನ್ ಎಂಬುವವರೇ ಹೀಗೆ ಚಿರಯುವತಿಯಂತೆ ಕಾಣುವುದಕ್ಕೋಸ್ಕರ ತಮ್ಮ 45ನೇ ವಯಸ್ಸಿನಲ್ಲಿ ದಿನಕ್ಕೆ 2 ಮಿಲಿಯನ್ ಡಾಲರ್ ವೆಚ್ಚ ಮಾಡುತ್ತಿರುವವರು. ಮಿದುಳಿನ ಚಟುವಟಿಕೆಯನ್ನು ಗಮನಿಸುವ ಹಾಗೂ ದಾಖಲಿಸುವ ಕೆರ್ನೆಲ್ ಎಂಬ ಸಂಸ್ಥೆಯೊಂದರ ಸಂಸ್ಥಾಪಕಿಯೂ ಆಗಿದ್ದಾರೆ.  45ರ ಪ್ರಾಯದ ಇವರು 18ರ ಹುಡುಗಿಯ ದೇಹವನ್ನು ಪಡೆಯುವ ಮಹದಾಸೆಯನ್ನು ಹೊಂದಿದ್ದು, ಇದಕ್ಕಾಗಿ 30  ವಿಶೇಷ ವೈದ್ಯರ ತಂಡದಿಂದ ಇವರ ಆರೋಗ್ಯ ಹಾಗೂ ಚಟುವಟಿಕೆಯ ಮೇಲುಸ್ತುವಾರಿ ಮಾಡಲಾಗುತ್ತಿದೆ. 

Tap to resize

Latest Videos

undefined

ಮತ್ತಷ್ಟು ಸುಂದರವಾಗಿ ಕಾಣಲು ಕಾಸ್ಮೆಟಿಕ್ ಸರ್ಜರಿ ಮಾಡಿಸ್ಕೊಂಡ ಸೌತ್ ಸುಂದರಿಯರಿವರು…

ಬ್ಲೂಮ್‌ಬರ್ಗ್ ಪ್ರಕಾರ, ಬಯೋಟೆಕ್ ಪ್ರವರ್ತಕನಾಗಿರುವ ಬ್ರಿಯಾನ್ ಜಾನ್ಸನ್ ಅವರು ವರ್ಷಕ್ಕೆ 2 ಮಿಲಿಯನ್ ಡಾಲರ್‌ವರೆಗೆ ವೆಚ್ಚ ತಗಲಬಹುದಾದ ದುಬಾರಿ  ವೈದ್ಯಕೀಯ ಕ್ರಮಗಳಿಗೆ ಒಳಗಾಗುತ್ತಿದ್ದಾರೆ. ಈ ವೈದ್ಯಕೀಯ ಕ್ರಮಗಳಿಂದಾಗಿ ಅವರು 18 ವರ್ಷ ವಯಸ್ಸಿನವರಿಗಿರುವ ಶ್ವಾಸಕೋಶದ ಸಾಮರ್ಥ್ಯ ಮತ್ತು ದೈಹಿಕ ಸಾಮರ್ಥ್ಯ, 37 ವರ್ಷ ವಯಸ್ಸಿನ ಹೃದಯ ಮತ್ತು 28 ವರ್ಷದ ವಯಸ್ಸಿನವರ ಚರ್ಮವನ್ನು ಪಡೆಯಲಿದ್ದಾರಂತೆ. 

ಆಗರ್ಭ ಶ್ರೀಮಂತ ಸಾಫ್ಟ್‌ವೇರ್ ಉದ್ಯಮಿಯಾಗಿರುವ ಜಾನ್ಸನ್  ಅವರ  ವಯಸ್ಸನ್ನು ಕಡಿಮೆಗೊಳಿಸುವ ಈ ಪ್ರಕ್ರಿಯೆಗಾಗಿ 30 ಕ್ಕೂ ಹೆಚ್ಚು ವೈದ್ಯರು ಮತ್ತು ಆರೋಗ್ಯ ತಜ್ಞರು ಬ್ರಿಯಾನ್ ಜಾನ್ಸನ್ ಅವರ ಪ್ರತಿ ದೈಹಿಕ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಾರೆ. ಪುನರುತ್ಪಾದಕ ಔಷಧ ವೈದ್ಯ 29  ವರ್ಷದ ಆಲಿವರ್ ಜೋಲ್ಮನ್ ನೇತೃತ್ವದ ತಂಡವು ಜಾನ್ಸನ್ ಅವರ ಎಲ್ಲಾ ಅಂಗಗಳಲ್ಲಿ ವಯಸ್ಸಾದ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದೆ. 

ಝೋಲ್ಮನ್ (Zolman) ಮತ್ತು ಜಾನ್ಸನ್ (Johnson) ಅವರು ವಯಸ್ಸಾದ ಮತ್ತು ದೀರ್ಘಾಯುಷ್ಯದ ಬಗೆಗಿನ ವಿಜ್ಞಾನ ಸಂಬಂಧಿ ಸಾಹಿತ್ಯವನ್ನು(scientific literature) ಹೆಚ್ಚು ಹೆಚ್ಚು ಓದಿದ್ದು, ಜಾನ್ಸನ್ ಅವರನ್ನು ಈ ಅತ್ಯಂತ ಭರವಸೆಯ ಚಿಕಿತ್ಸೆ ವಿಧಾನದ ಪರೀಕ್ಷಾರ್ಥ ವಾಗಿ ಬಳಸಲಾಗುತ್ತಿದೆ. ಅಲ್ಲದೇ ಇದರ ಫಲಿತಾಂಶಗಳನ್ನು ತಮಗೆ ತಿಳಿದ ಪ್ರತಿಯೊಂದು ಮಾರ್ಗದಿಂದ ಪತ್ತೆ ಮಾಡುತ್ತಾರೆ. 

Man Dies Of Hair Transplant: ಕೂದಲು ಕಸಿ ಮಾಡಿಕೊಳ್ಳೋ ಮುನ್ನ ಇವಿಷ್ಟು ಗೊತ್ತಿರಲಿ

ಈ ವಯಸ್ಸನ್ನು ಮರೆ ಮಾಡುವ ಈ ವೈದ್ಯಕೀಯ ಪ್ರಯೋಗಕ್ಕಾಗಿ ಕ್ಯಾಲಿಫೋರ್ನಿಯಾದ ವೆನಿಸ್‌ನಲ್ಲಿರುವ ಜಾನ್ಸನ್ ಅವರ ಮನೆಯಲ್ಲಿ ಹಲವಾರು ಮಿಲಿಯನ್ ಡಾಲರ್ ಹೂಡಿಕೆಯ ಅಗತ್ಯವಿದೆ.  ಈ ವರ್ಷ ಅವರು ಸುಮಾರು 2 ಮಿಲಿಯನ್ ಡಾಲರ್ ವೆಚ್ಚ ಮಾಡುವ ಹಾದಿಯಲ್ಲಿದ್ದಾರೆ. 18ರ ಹರೆಯದ ತರುಣನ  ಮೆದುಳು, ಹೃದಯ (heart), ಶ್ವಾಸಕೋಶಗಳು, ಯಕೃತ್ತು, ಮೂತ್ರಪಿಂಡಗಳು (kidneys), ಸ್ನಾಯುರಜ್ಜುಗಳು (tendons), ಹಲ್ಲುಗಳು, ಚರ್ಮ, ಕೂದಲು, ಮೂತ್ರಕೋಶ, ಶಿಶ್ನ ಹಾಗೂ ಗುದನಾಳವನ್ನು ಜಾನ್ಸನ್ ಹೊಂದಲು ಬಯಸಿದ್ದಾರೆ ಎಂದು ವೆಬ್‌ಸೈಟೊಂದು ವರದಿ ಮಾಡಿದೆ. 

ವೃದ್ಧಾಪ್ಯ ವಿಳಂಬವಾಗಬಹುದು ಆದರೆ ನಿಧಾನವಾಗಿಯಾದರೂ ಆಯಸ್ಸು ಶಕ್ತಿ ಸಾಮರ್ಥ್ಯ ಎಲ್ಲವೂ ಕ್ಷಿಣಿಸುತ್ತಾ ಹೋಗುತ್ತದೆ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಪ್ರಕೃತಿಯ ವಿರುದ್ಧದ ಹಲವು ಪ್ರಯೋಗಗಳು ಮನು ಕುಲಕ್ಕೆ ಮಾರಕವಾದ ಹಲವು ನಿದರ್ಶನಗಳಿವೆ. ಆದರೂ ಮಾನವ ತನ್ನ ಪ್ರಯೋಗವನ್ನು ಮುಂದುವರಿಸುತ್ತಲೇ ಹೋಗಿದ್ದು,  ತಾರುಣ್ಯಕ್ಕೆ ಸಂಬಂಧಿಸಿದ ಈ ಪ್ರಯೋಗ ಒಂದು ವೇಳೆ ಯಶಸ್ವಿಯಾದಲ್ಲಿ ದೊಡ್ಡ ಮೈಲುಗಲ್ಲಾಗಲಿದೆ. 

click me!