31ರ ಹರೆಯದಲ್ಲಿ 48 ಮಕ್ಕಳಿಗೆ ತಂದೆಯಾದ ಮಹಾ ಅಪ್ಪ: ಈತ ಅಮೆರಿಕಾದ ವಿಕ್ಕಿ ಡೋನರ್!

By Suvarna News  |  First Published Aug 16, 2022, 12:01 PM IST

ಅಮೆರಿಕಾದ 31ರ ಹರೆಯದ ಯುವಕನೊರ್ವ ಮದುವೆಯಾಗದೆಯೇ ಬರೋಬ್ಬರಿ 48 ಮಕ್ಕಳಿಗೆ ತಂದೆ ಆಗಿದ್ದಾನೆ. ವೀರ್ಯದಾನ ಮಾಡುವ ಮೂಲಕ ಮಕ್ಕಳಿಲ್ಲವೆಂದು ಕೊರಗುತ್ತಿದ್ದ ದಂಪತಿಗಳ ಬಾಳಿಗೆಬೆಳಕು ತುಂಬಿದ್ದಾನೆ.


ಅಮೆರಿಕಾದ 31ರ ಹರೆಯದ ಯುವಕನೊರ್ವ ಮದುವೆಯಾಗದೆಯೇ ಬರೋಬ್ಬರಿ 48 ಮಕ್ಕಳಿಗೆ ತಂದೆ ಆಗಿದ್ದಾನೆ. ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ ಅಥವಾ ಅದು ಅಮೆರಿಕಾ ಅಲ್ಲಿ ಮದುವೆಯಾಗದೇ ಏನೂ ಬೇಕಾದರೂ ಮಾಡಬಹುದು ಅಂತ ಅಂದುಕೊಂಡಿದ್ದೀರಾ? ಅಥವಾ ಇವನೇನಾದರೂ ಅನಾಥ ಮಕ್ಕಳನ್ನು ದತ್ತು ಪಡೆದನೇ ಎಂದು ಅಚ್ಚರಿಯಾಗಿದ್ದೀರಾ ಅಂತದ್ದೇನು ಇಲ್ಲಾರೀ. ಈತ ಮಾಡಿದ್ದು ಒಂದು ದಾನ. ಈತ ಮಕ್ಕಳಿಲ್ಲದ ಕೊರಗುತ್ತಿದ್ದ ಅನೇಕ ದಂಪತಿಗಳಿಗೆ ವೀರ್ಯದಾನ ಮಾಡುವ ಮೂಲಕ ಮಕ್ಕಳಿಲ್ಲವೆಂದು ಕೊರಗುತ್ತಿದ್ದ ದಂಪತಿಗಳ ಬಾಳಿಗೆಬೆಳಕು ತುಂಬಿದ್ದಾನೆ. ಈ ಮೂಲಕ 48 ಮಕ್ಕಳ ಜೈವಿಕ ತಂದೆಯಾಗಿದ್ದಾನೆ. 

ಮದುವೆಯಾದ ಮೇಲೆ ಮಕ್ಕಳಾಗಲೇ ಬೇಕು ಎಂಬುದು ವಿಶೇಷವಾಗಿ ಭಾರತದಲ್ಲಿರುವ ಅಲಿಖಿತ ನಿಯಮ. ಆದರೆ ಮಕ್ಕಳಿಲ್ಲದ ಕೊರಗು ದಂಪತಿಯನ್ನು ಕಾಡುವುದು ಒಂದೇ ರೀತಿ ಅದು ಅಮೆರಿಕಾವೇ ಆಗಿರಬಹುದು ಅಥವಾ ಭಾರತವೇ ಆಗಿರಬಹುದು. ನಮ್ಮದೊಂದು ಮಗು ಬೇಕು. ಆ ಮಗುವನ್ನು ಎತ್ತಿ ಮುದ್ದಾಡಬೇಕು ಎಂದು ಬಹುತೇಕ ದಂಪತಿ ಆಸೆ ಪಡುತ್ತಾರೆ. ಆದರೆ ಆ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಭಾರತದಲ್ಲಿ ವೀರ್ಯದಾನ ಅಷ್ಟೊಂದು ಪ್ರಚಲಿತದಲ್ಲಿ ಇಲ್ಲ. ಆದರೆ ಅಮೆರಿಕಾದಲ್ಲಿ ಇದು ಸಾಮಾನ್ಯ. ಮಕ್ಕಳಿಲ್ಲದವರು ಜೀವನಪೂರ್ತಿ ಕೊರಗುವ ಬದಲು ಹಲವು ವಿಧಾನಗಳ ಮೂಲಕ ತಮ್ಮ ಕೊರತೆಯನ್ನು ತುಂಬಿಕೊಳ್ಳುತ್ತಾರೆ. ದತ್ತು ಪಡಯುವ, ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ಅಥವಾ ವೀರ್ಯದಾನದಿಂದ ಮಗು ಪಡೆಯುತ್ತಾರೆ. ಹಾಗೆಯೇ ಹೀಗೆ ವೀರ್ಯದಾನದ ಮೂಲಕ ಮಗು ಪಡೆಯಲು ಬಂದವರ ಪಾಲಿಗೆ ಅಮೆರಿಕದ ಮೂಲದ 31 ವರ್ಷದ ಕೈಲ್ ಗೋರ್ಡಿ ಮಹಾದಾನಿ ಎನಿಸಿದ್ದಾರೆ. 

Latest Videos

undefined

ಬುದ್ಧಿಮಾಂದ್ಯತೆಯನ್ನು ಮುಚ್ಚಿಟ್ಟು ವೀರ್ಯದಾನ: 15 ಮಕ್ಕಳಿಗೆ ತಂದೆಯಾದ ಪಾಪಿ

 31 ವರ್ಷದ ಕೈಲ್ ಗೋರ್ಡಿ ಮಕ್ಕಳಾಗದ ದಂಪತಿಗೆ ತನ್ನ ವಿರ್ಯ ದಾನ ಮಾಡಿ ಸಹಾಯ ಮಾಡುತ್ತಿದ್ದಾರೆ. ಇದೇ ವಿಚಾರಕ್ಕಾಗಿ ಕೈಲ್ ಗೋರ್ಡಿ ಈಗ ಸುದ್ದಿಯಲ್ಲಿದ್ದು, ಇವರ ವೀರ್ಯದಿಂದ ಇದುವರೆಗೆ ಬರೋಬರಿ 48 ಮಕ್ಕಳು ಜನಿಸಿದ್ದು ಮಹಾತಂದೆ ಎನಿಸಿದ್ದಾರೆ. ಆದರೆ ಅಚ್ಚರಿ ಎಂದರೆ ಇಷ್ಟೊಂದು ತಂದೆಯ ಮಕ್ಕಳಾಗಿರುವ ಈ ಅಮೆರಿಕಾದ ಲಾಸ್ ಏಂಜಲೀಸ್ ಮೂಲದ ಕೈಲ್‌ಗೊರ್ಡಿಗೆ ಯಾವುದೇ ಗರ್ಲ್‌ಫ್ರೆಂಟ್ ಇಲ್ವಂತೆ. ಅಲ್ಲದೇ ಮದುವೆಯೂ ಆಗಿಲ್ಲ. ಆದರೆ ಯುವತಿಯರ ಜೊತೆ ಡೇಟಿಂಗ್‌ನ್ನು ಅವರು ಇಷ್ಟ ಪಡುತ್ತಾರಂತೆ. ಇನ್ನು ಡೇಟಿಂಗ್ ವಿಚಾರವಾಗಿ ಹೇಳಿಕೊಂಡಿರುವ ಕೈಲ್ ಗೋರ್ಡಿ , ಡೇಟಿಂಗ್ ಮಾಡುವ ಯುವತಿಯರೊಂದಿಗೆ ಈ ವೀರ್ಯದಾನದ ವಿಚಾರವನ್ನು ಅವರು ಹೇಳಿಕೊಂಡರೆ ಬಹುತೇಕರು ಈ ವಿಚಾರವನ್ನು ಸಕರಾತ್ಮಕವಾಗಿ ನೋಡಿಲ್ಲ. ಅಲ್ಲದೇ ಈ ಕಾರ್ಯವನ್ನು ಇಷ್ಟಪಟ್ಟಿಲ್ಲವಂತೆ. ಇದೇ ಕಾರಣಕ್ಕೆ ಈ ಯುವಕನೊಂದಿಗೆ ಡೇಟಿಂಗ್ ಮಾಡಲು ಯುವತಿಯರು ಹಿಂದೇಟು ಹಾಕುತ್ತಿದ್ದಾರಂತೆ. 

ಹೀಗಾಗಿ ಡೇಟಿಂಗ್ ಮಾಡುವ ಮೂಲಕ ಸಂಬಂಧ ಹೊಂದುವ ಕೈಲ್‌ ಗೋರ್ಡಿ ಆಸೆಗೆ ಈ ವೀರ್ಯದಾನ ಒಂದು ರೀತಿ ಅಡ್ಡಿಯಾಗಿದೆ. ಆದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಗೋರ್ಡಿ, ಇನ್ನು ಮುಂದೆಯೂ ಮಕ್ಕಳಿಲ್ಲದ ಅನೇಕ ಜೋಡಿಗೆ ವೀರ್ಯದಾನ ಮಾಡಿ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಕೈಲ್‌ನಿಂದಾಗಿ ಕಳೆದ 8 ವರ್ಷಗಳಲ್ಲಿ 4 ಡಜನ್ ಮಹಿಳೆಯರು ತಾಯಂದಿರಾಗಿದ್ದಾರೆ. ನಾನು 10 ವರ್ಷಗಳಿಂದ ಯಾರೊಂದಿಗೂ ಡೇಟಿಂಗ್ ಮಾಡಿಲ್ಲ. ನಾನು ವೀರ್ಯ ದಾನಿ ಎಂದು ಹುಡುಗಿಯರಿಗೆ ಹೇಳಿದ ಕೂಡಲೇ ಅವರು ನನ್ನ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ ಎಂದು ಗೋರ್ಡಿ ಹೇಳಿದರು.  ಪ್ರಾರಂಭದಲ್ಲಿ ಲೆಸ್ಬಿಯನ್ ದಂಪತಿಯ ಕೋರಿಕೆಯ ಮೇರೆಗೆ 8 ವರ್ಷಗಳ ಹಿಂದೆ ವೀರ್ಯ ದಾನ ಆರಂಭಿಸಿದ ಕೈಲ್ ಗೋರ್ಡಿ ನಂತರ, ಆನ್‌ಲೈನ್ ವಿನಂತಿ ಮೇರೆಗೆ  ವಿವಿಧ ಮಹಿಳೆಯರಿಗೆ ವೀರ್ಯವನ್ನು ದಾನ ಮಾಡಲು ಪ್ರಾರಂಭಿಸಿದರಂತೆ.

ಕ್ರೀಡಾ ನಿರೂಪಕಿ ಭಾವನಾ ಬಾಲಕೃಷ್ಣನ್ ಹೃತಿಕ್‌ ವೀರ್ಯದಾನ ಮಾಡಿ ಅಂದ್ರಾ?

ಹೆಣ್ಣಿನ ಫಲವತ್ತತೆ ಕಡಿಮೆ ಇದ್ದಾಗ ಹಾಗೂ ಗಂಡಿನ ವೀರ್ಯಾಣುಗಳ ಸಂಖ್ಯೆ ಕಡಿಮೆ ಆದಾಗ ಮಕ್ಕಳಾಗದ ಕೊರತೆ ಉಂಟಾಗುತ್ತದೆ. ಹೀಗಾಗಿ ಕಡಿಮೆ ವೀರ್ಯಾಣುಗಳ ಸಂಖ್ಯೆಯಿಂದಾಗಿ ಗರ್ಭಿಣಿಯಾಗಲು ಸಾಧ್ಯವಾಗದವರು ಆತನನ್ನು ಸಂಪರ್ಕಿಸುತ್ತಾರಂತೆ. ಮಕ್ಕಳ ಕೊರತೆಯಿಂದ ಸಂಕಷ್ಟಕ್ಕಿಡಾಗಿರುವ ವಿವಾಹಿತರ ಕಷ್ಟವನ್ನು ಅರ್ಥ ಮಾಡಿಕೊಂಡಿರುವ ಕೈಲ್‌ಗೋರ್ಡಿ ತಮ್ಮ ವೀರ್ಯದಾನದ ಮೂಲಕ ದಂಪತಿಗಳ ಬಾಳಿಗೆ ಬೆಳಕಾಗಿದ್ದಾರೆ.  ವಿದೇಶಗಳಲ್ಲಿ ಬ್ಲಡ್‌ಬ್ಯಾಂಕ್‌ನಂತೆ ವೀರ್ಯ ಬ್ಯಾಂಕ್‌ಗಳಿವೆ ಆದರೆ ದಾನಿಗಳು ಯಾರು? ಏನು? ಹೇಗಿದ್ದಾರೆ ಎಂದು ತಿಳಿಯದೇ ಇರುವ ಕಾರಣ ಬಹುತೇಕ ದಂಪತಿಗಳು ವೀರ್ಯಬ್ಯಾಂಕ್‌ನಿಂದ ವೀರ್ಯ ಪಡೆಯಲು ಹಿಂಜರಿಯುತ್ತಾರಂತೆ. 
 

click me!