ಮನೇಲಿ ವಿಂಡ್ ಬೆಲ್ ಇದ್ದರೆ ಆರ್ಥಿಕಾಭಿವೃದ್ಧಿ

By Web DeskFirst Published Jul 17, 2018, 5:09 PM IST
Highlights

ಸಾಮಾನ್ಯವಾಗಿ ಮನೆ ಸೌಂದರ್ಯ ಹೆಚ್ಚಿಸುವ ವಿಂಡ್ ಚೈಮ್ ಅಥವಾ ವಿಂಡ್ ಬೆಲ್ ಫೆಂಗ್‌ಶ್ಯೂ ಪ್ರಕಾರ ಶುಭವೆನ್ನುತ್ತಾರೆ. ಧನಾತ್ಮಕ ಶಕ್ತಿ ಹೆಚ್ಚಿಸಿ, ದುಷ್ಟ ಶಕ್ತಿಗಳನ್ನು ದೂರವಾಗಿಸೋ ಇಂಥದ್ದೊಂದು ಗಂಟೆ ಮನೆನಲ್ಲಿ ಇರಬೇಕು. ಏಕೆ ಮನೆಗೆ ಇದು ಒಳ್ಳೆಯದು?

ಗಾಳಿ ಬಂದಾಗ ಮೆಲ್ಲಗೆ, ಮಧುರ ಶಬ್ಧ ಕೇಳಿಸೋ ವಿಂಡ್ ಬೆಲ್ ಮನೆಯಲ್ಲಿದ್ದರೆ, ಮನಸ್ಸಿಗೇನೋ ನೆಮ್ಮದಿ. ಫೆಂಗ್‌ಶ್ಯೂ ಪ್ರಕಾರ ಇಂಥದ್ದೊಂದು ಬೆಲ್ ಮನೆನಲ್ಲಿದ್ದರೆ ಶುಭವೂ ಹೌದು. ದುಷ್ಟ ಶಕ್ತಿಯನ್ನೂ ಓಡಿಸುವ ಇಂಥದ್ದೊಂದು ಬೆಲ್ ಮನೆಯಲ್ಲಿ ಏಕಿರಬೇಕು?

  • ಹೇಗಿದ್ದಾದರೂ ಸರಿ, ಮನೆ ಮುಂದೆ ವಿಂಡ್ ಬೆಲ್ ಇದ್ದರೆ ಕೆಟ್ಟ ಶಕ್ತಿಯ ಪ್ರವೇಶ ಆಗುವುದಿಲ್ಲ. 
  • ಗಾಳಿ ಗಂಟೆಯನ್ನು ಪಶ್ಚಿಮ ದಿಕ್ಕಿಗೆ ನೇತು ಹಾಕಿದರೆ, ಅದರಿಂದ ಮನೆಯಲ್ಲಿ ಶುಭವಾಗುತ್ತದೆ. ಉತ್ತರ ದಿಕ್ಕಿಗೆ ಹಾಕಿದರೆ ಉದ್ಯೋಗ ಜೀವನ ಸುಸ್ಥಿತಿಗೊಳ್ಳುತ್ತದೆ. 
  • ಮನೆ ಅಥವಾ ಕಚೇರಿ ಹೊರ ಭಾಗದಲ್ಲಿ ಗಾಳಿ ಗಂಟೆಯನ್ನು ನೇತು ಹಾಕಿದಾಗ ಅದು ಪ್ರತಿ ಬಾರಿ ಗಾಳಿಗೆ ಶಬ್ದ ಮಾಡಿದಾಗಲೂ ಮನೆಯ ಶಕ್ತಿ ಹೆಚ್ಚುತ್ತದೆ. 
  • ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಕಾಡಿದರೆ ಕೊನೆಯಲ್ಲಿ ಆರು ರಾಡ್  ಗಾಳಿ ಗಂಟೆಯನ್ನು ಬಳಸಿ ಇದರಿಂದ ಕೆಟ್ಟ ಶಕ್ತಿ ನಾಶವಾಗುತ್ತದೆ. 
  • ಫೆಂಗ್‌ಶ್ಯೂ ಪ್ರಕಾರ 6,7,8 ಮತ್ತು 9 ರಾಡ್ ಜೊತೆ ಗಂಟೆಯಿರುವ ಗಾಳಿ ಗಂಟೆಯನ್ನು ಹಾಕಬೇಕು. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ. 
  • 7 ಮತ್ತು 8 ರಾಡ್ ಇರುವ ಗಾಳಿಗಂಟೆ ಹಾಕುವುದರಿಂದ ಮನೆಗೆ ಸಂಪತ್ತು ಬರಲಿದೆ.
  • 2 ರಿಂದ 9 ರಾಡ್‌ ಇರುವ ಚೈಮ್‌ನ್ನು ಲೀವಿಂಗ್‌ ರೂಮ್‌ನ ದಕ್ಷಿಣ ಪಶ್ಚಿಮ ಭಾಗದಲ್ಲಿಟ್ಟರೆ ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ. 
  • ಐದು ರಾಡ್ ಇರುವ ಗಾಳಿಗಂಟೆ ಮನೆಗೆ ನಕರಾತ್ಮಕ ಶಕ್ತಿ ಪ್ರವೇಶವಾಗುವ ಸಾಧ್ಯತೆ ಇದೆ.
  • ಬಾಗಿಲಿಗೆ ತಾಗುವಂತೆ ವಿಂಡ್‌ಚೈಮ್‌ ಯಾವತ್ತೂ ಇಡಬೇಡಿ. ಅಲ್ಲದೆ ನೀವು ಕುಳಿತುಕೊಳ್ಳುವ, ಮಲಗುವ ಹಾಗೂ ಕೆಲಸ ಮಾಡುವ ಜಾಗದಲ್ಲೂ ತೂಗಿಸಬೇಡಿ. 
click me!