ದಾಳಿಂಬೆ ತಿನ್ನಿ ಅನ್ನೋದ್ಯಾಕೆ?

By Kannadaprabha NewsFirst Published Jul 30, 2018, 1:51 PM IST
Highlights

ದಾಳಿಂಬೆ ಹಣ್ಣಿನಲ್ಲಿ ಗ್ಲುಕೋಸ್, ಜೀವಸತ್ವ ಸಿ, ನಾರು, ಆಂಥೋಸಯಾನಿನ್, ಗ್ಯಾಲಿಕ್ ಆಮ್ಲ, ಫ್ಲೇವಾನ್‌ಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳಂಥಾ ಅಂಶಗಳಿವೆ
 

ದಾಳಿಂಬೆಯ ಪ್ರತಿಯೊಂದು ಭಾಗವು ಅಂದರೆ, ಬೇರು, ತೊಗಟೆ, ಎಲೆಗಳು, ಹೂವುಗಳು, ರಸ ಮತ್ತು ಬೀಜಗಳು ಹಲವಾರು ರೀತಿಯ ರಾಸಾಯನಿಕ ಘಟಕಗಳನ್ನು (ಪೋಷಕಾಂಶಗಳನ್ನು) ಹೊಂದಿದ್ದು, ಪ್ರತಿಯೊಂದು ಭಾಗವು ವಿವಿಧ ರೀತಿಯ ಔಷಧೀಯ ಗುಣಗಳನ್ನು ಹೊಂದಿವೆ. ದಾಳಿಂಬೆಯನ್ನು ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಪರಿಹಾರವಾಗಿ ಉಪಯೋಗಿಸುತ್ತಾರೆ. ಉದಾಹರಣೆಗೆ: ಕೆಮ್ಮು, ಬೇಧಿ, ತಲೆನೋವು, ಪಾರ್ಶ್ವವಾಯು. ದಾಳಿಂಬೆಯಲ್ಲಿರುವ ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್ ಗಳಂತಹ ನ್ಯೂಟ್ರಾಸ್ಯೂಟಿಕಲಗಳು ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಮತ್ತು ಪ್ರೋಸ್ಟೇಟ್ ಕ್ಯಾನ್ಸರ್‌ಗಳಂತಹ ಅಪಾಯಕಾರಿ ರೋಗಗಳನ್ನು ನಿಯಂತ್ರಿಸುತ್ತವೆ. ದಾಳಿಂಬೆ ರಸವು ಪ್ರಕೃತಿಯ ಅತ್ಯಂತ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದೆ ಹಾಗೂ ದೇಹಕ್ಕೆ ಸೋಂಕು ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.

click me!