ಕೂದಲ ರಕ್ಷಣೆಗೇನು ಮಾಡಬೇಕು?

By Web DeskFirst Published Jul 22, 2018, 1:21 PM IST
Highlights
ಅಬ್ಬಾ! ಧೂಳು, ಜೀವನಶೈಲಿ, ತಲೆಬಿಸಿ...ಹೀಗೆ ನೂರಾರು ಸಮಸ್ಯೆಗಳಿಂದ ಬೊಕ್ಕ ತಲೆ ಸಮಸ್ಯೆಯೂ ವಿಪರೀತವಾಗುತ್ತಿದೆ. ಆದರೆ, ಕೆಲವು ಟಿಪ್ಸ್ ಫಾಲೋ ಮಾಡೋದ್ರಿಂದ ದಲುದುರುವ ಸ್ವಲ್ಪ ಸಮಸ್ಯೆಯನ್ನು ತಡೆಯಬಹುದು. ಇಲ್ಲಿವೆ ಟಿಪ್ಸ್...
ಕೂದಲು ಸದೃಢ ಸುಂದರವಾಗಿ ಬೆಳೆಯಬೇಕೆಂದರೆ ಸ್ಕಿನ್‌ನಂತೆ ಕೂದಲಿನ ಆರೈಕೆ ಮಾಡಬೇಕು. ಅದಕ್ಕಾಗಿ ತುಂಬಾ ಕೇರ್ ತೆಗೆದುಕೊಳ್ಳಬೇಕು. ತಲೆಗೆ ಹಚ್ಚುವ ಕಂಡೀಷನರ್‌ನಿಂದ ಹಿಡಿದು ಹೆಚ್ಚು ವಾಷ್ ಮಾಡುವವರೆಗೂ ಕೂದಲಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಕೆಲವೊಂದು ಅಂಶಗಳು ಇಲ್ಲಿವೆ.. 
- ಪದೇ ಪದೇ ತಲೆ ಬಾಚುವುದರಿಂದ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಜೊತೆಗೆ ಕೂದಲು ತುಂಡಾಗುತ್ತದೆ. ತಲೆಯಲ್ಲಿ ಎಣ್ಣೆ ಅಂಶ ಹೆಚ್ಚಾಗಿ ಕೂದಲು ಗ್ರೀಸ್ ಹಚ್ಚಿದಂತೆ ಕಾಣುತ್ತದೆ. 

- ಕಡಿಮೆ ಬಾರಿ ಶಾಂಪೂ ಹಚ್ಚಿಕೊಂಡರೆ ಉತ್ತಮ. ಹೆಚ್ಚು ಬಾರಿ ಕೂದಲು ತೊಳೆದರೆ ಕೂದಲು ಹೆಚ್ಚು ಉದುರುತ್ತವೆ. ಅಲ್ಲದೆ ಸಹಜ ತೈಲದ ಅಂಶ ಕಡಿಮೆಯಾಗುತ್ತದೆ. ಇದರಿಂದ ಕೂದಲು ಡ್ರೈ ಆಗಿ ಕಾಣುತ್ತದೆ. 

- ಒದ್ದೆ ಕೂದಲನ್ನು ಬಾಚುವುದು ಅಥವಾ ಡ್ರೈ ಮಾಡುವುದು, ಸ್ಟ್ರೈಟ್ ಮಾಡುವುದು ಮಾಡಬೇಡಿ. ಕೂದಲು ಅದಾಗಿಯೇ ಒಣಗಲು ಬಿಡಿ. ನಂತ್ರ ಏನು ಬೇಕಾದರೂ ಮಾಡಬಹುದು. 

- ಕಂಡೀಷನರ್ ಅನ್ನು ಯಾವತ್ತೂ ಕೂದಲಿನ ಬುಡಕ್ಕೆ ಹಚ್ಚಬೇಡಿ. ಕೇವಲ ಕೂದಲಿಗೆ ಮಾತ್ರ ಹಚ್ಚಿ. ಇಲ್ಲವಾದರೆ ತಲೆಯಲ್ಲಿ ಎಣ್ಣೆ ಅಂಶ ಹೆಚ್ಚಾದಂತೆ ಕಾಣಿಸುತ್ತದೆ.

- ಶಾಂಪೂ ಹಚ್ಚಿದ ಮೇಲೆ ಕಂಡೀಷನರ್ ಹಚ್ಚಲೇಬೇಕು. ಇಲ್ಲವಾದರೆ ಕೂದಲು ಉದುರುವ, ತುಂಡಾಗುವ ಸಾಧ್ಯತೆ ಇದೆ. 

- ಯಾವುದೇ ಕಾರಣಕ್ಕೂ ತುಂಬಾ ಬಿಸಿ ನೀರನ್ನು ತಲೆ ಸ್ನಾನ ಮಾಡಲು ಬಳಸಬೇಡಿ. ಇದರಿಂದ ಕೂದಲು ಬೇಗನೆ ಡ್ಯಾಮೇಜ್ ಆಗುತ್ತದೆ. ಜೊತೆಗೆ ಕೂದಲು ದುರ್ಬಲವಾಗುತ್ತದೆ. 
click me!