ಚೆಲುವಿನ ಅಂದದ ಮೊಗಕೆ ಮೊಸರೇ ಕಾರಣ..

First Published Jul 21, 2018, 5:54 PM IST
Highlights

ಊಟದ ಕಡೆಯಲ್ಲಿ ಮೊಸರು ಸೇವಿಸುವುದರಿಂದ ಪಚನ ಕ್ರಿಯೆಗೆ ಅನುಕೂಲವೆಂಬುವುದು ಗೊತ್ತು. ಆದರೆ, ಇದೇ ಮೊಸರು ಕೇಶ ಹಾಗೂ ತ್ವಚೆಯ ಸೌಂದರ್ಯಕ್ಕೂ ಸಹಕಾರಿ ಎನ್ನುವುದು ಗೊತ್ತಾ? ಮೊಸರಲ್ಲಿ ಪ್ರೊಟೀನ್, ಕ್ಯಾಲ್ಸಿಯಮ್ ಮತ್ತು ವಿಟಮಿನ್ ಡಿ ಅಧಿಕವಾಗಿದ್ದು, ಮುಖಕ್ಕೆ ಹೆಚ್ಚು ಮೊಯಶ್ಚೈಸರ್ ನೀಡುವುದಲ್ಲದೇ, ಕೂದಲು ಗಟ್ಟಿ ಮುಟ್ಟಾಗಿ ಬೆಳೆಯಲು ಸಹಾಯ ಮಾಡುತ್ತದೆ. 

ಮೊಸರು ಬಳಸುವುದರಿಂದ ಮುಖದ ಮೇಲಿರುವ  ಮೊಡವೆ, ಟ್ಯಾನ್ ,ಕಣ್ಣಿನ ಸುತ್ತ ಇರುವ ಕಪ್ಪನ್ನು ಹೋಗಿಸುತ್ತದೆ. ತಲೆಹೊಟ್ಟಿಗೆ ರಾಮಬಾಣ. ಎಣ್ಣೆ ಇರೋ ತ್ವಚೆಯಿರಲಿ ಅಥವಾ ಒಣಗಿದ ಚರ್ಮವಾಗಿರಲಿ, ಮೊಸರು ಒಳ್ಳೆಯ ಫಲಿತಾಂಶ ನೀಡುತ್ತದೆ. 

ಬಳಸೋದು ಹೇಗೆ?

1. ಮೊಸರು + ಜೀನು

  • ಈ ಎರಡು ಅಂಶದಲ್ಲಿ ಹೆಚ್ಚು ತೇವಾಂಶ ಹೊಂದಿದ್ದು, ಡ್ರೈ ಚರ್ಮಕ್ಕೆ ತಂಪು ನೀಡುತ್ತದೆ. 
  • ಮುಖಕ್ಕೆ ಅರ್ಧ ಕಪ್ ಮೊಸರು, 2 ಚಮಚ ಜೇನಿಗೆ ರೋಸ್ ವಾಟರ್ ಸೇರಿಸಿ. 5 ನಿಮಿಷದ ಕಾಲ ಮುಖಕ್ಕೆ ಹಚ್ಚಿ ನಂತರ ತಣ್ಣಗಿರುವ ನೀರಿನಿಂದ ತೊಳೆಯಿರಿ. 
  • ಆದರೆ ಕೂದಲಿಗೆ ಅರ್ಧ ಕಪ್ ಮೊಸರು ಮತ್ತು 2 ಚಮಚ ಜೀನು ಮಾತ್ರ ಸೇರಿಸಿ ಹಚ್ಚಿ. 15 ನಿಮಿಷಗಳ ನಂತರ ತಣ್ಣಿರಿಂದ ತೊಳೆದರೆ ಕೂದಲು ನಯವಾಗುತ್ತದೆ. 

2. ಮೊಸರು+ಕಡಲೆ ಹಿಟ್ಟು+ಅರಿಶಿಣ

1 ಕಪ್ ಮೊಸರು,  ಅರ್ಧ ಕಪ್ ಕಡಲೆ ಹಿಟ್ಟು ಮತ್ತು 1 ಚಮಚ ಅರಿಶಿಣ ಸೇರಿಸಿ ಮುಖಕ್ಕೆ ಮತ್ತು ಕುತ್ತಿಗೆ ಸುತ್ತ ಹಚ್ಚಿ. 20 ನಿಮಿಷದ ನಂತರ ತಣ್ಣಗಿರುವ ನೀರಿನಿಂದ ತೊಳೆಯಬೇಕು. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚಿತ್ತದೆ.

3. ಮೊಸರು+ಸೌತೆಕಾಯಿ

ಅರ್ಧ ಕಪ್ ಮೊಸರು ಮತ್ತು 3 ಚಮಚ ತುರಿದ ಸೌತೆಕಾಯಿಯನ್ನು ಡಾರ್ಕ್ ಸರ್ಕಲ್  ಹಾಗು ಟ್ಯಾನ್ ಇರುವ ಜಾಗಕ್ಕೆ ಹಚ್ಚಿ 15 ನಿಮಿಷದ ನಂತರ ಕಣ್ಣಗಿರುವ ನೀರಿನಿಂದ ತೊಳೆಯಬೇಕು. ವಾರಕ್ಕೆರಡು ಬಾರಿ ಮಾಡುವುದರಿಂದ ಟ್ಯಾನ್ ಮತ್ತು ಚರ್ಮದ ಕಪ್ಪು ಕಡಿಮೆ ಮಾಡುತ್ತದೆ.

click me!