ಕುಳಿತಲ್ಲೇ ಕೂತು ಕೆಲ್ಸ ಮಾಡಿದರೆ, ಡೇಂಜರ್!

Published : Jul 22, 2018, 11:51 AM IST
ಕುಳಿತಲ್ಲೇ ಕೂತು ಕೆಲ್ಸ ಮಾಡಿದರೆ, ಡೇಂಜರ್!

ಸಾರಾಂಶ

ಈ ಆಧುನಿಕ ಜಗತ್ತಿನಲ್ಲಿ ಎಲ್ಲರೂ ಕೂತು ಕೆಲಸ ಮಾಡುವವರೇ. 'ಆರಾಮಾಗಿ ಏಸಿ ಆಫೀಸ್‌ನಲ್ಲಿ ಕುಳಿತು ಮಾಡುವ ಕೆಲಸ...' ಎಂದು ಜನ ಮಾತನಾಡಿಕೊಳ್ಳುತ್ತಾರೆ. ಆದರಿದು ಆರೋಗ್ಯಕ್ಕೆ ಕುತ್ತು ಎಂಬುವುದು ಗೊತ್ತಾ? ಅದಕ್ಕೇನು ಮಾಡಬೇಕು?

ಇಂದು ಎಲ್ಲ ಕೆಲಸಗಳೂ ಕಂಪ್ಯೂಟರ್‌ನಿಂದಲೇ ಆಗೋದ್ರಿಂದ ಗಂಟೆ ಗಟ್ಟಲೆ ಕುಳಿತು ಕೆಲಸ ಮಾಡಬೇಕಾಗುತ್ತದೆ. ಕೆಲವರಂತೂ ಒಂದು ಬಾರಿ ಕೆಲ್ಸಕ್ಕೆ ಕುಳಿತುಕೊಂಡರೆ ಎರಡು ಮೂರು ಗಂಟೆಗೊಮ್ಮೆ ಎದ್ದೇಳ್ತಾರೆ.ಇದರಿಂದ ಸಮಸ್ಯೆ ಏನಿದೆ ಎಂದು ಅನಿಸಬಹುದು. ಆದರೆ ಹೆಚ್ಚು ಹೊತ್ತು ಕುಳಿತುಕೊಂಡಷ್ಟು ಆರೋಗ್ಯ ಸಂಬಂಧಿಗಳೂ ಹೆಚ್ಚುತ್ತಾ ಹೋಗುತ್ತದೆ. 
ಹೆಚ್ಚು ಹೊತ್ತು ಕುಳಿತುಕೊಳ್ಳುವುದೆಂದರೆ ಸ್ಮೋಕ್ ಮಾಡಿದಷ್ಟೇ ಡೇಂಜರ್. ಜೊತೆಗೆ ಬೊಜ್ಜೂ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಡಯಾಬಿಟೀಸ್, ಹೃದಯ ಸಂಬಂಧೀ ಕಾಯಿಲೆಗಳು, ಖಿನ್ನತೆ, ಕ್ಯಾನ್ಸರ್ ಮತ್ತು ಗಂಟು ಮತ್ತು ಮಾಂಸಖಂಡಗಳ ನೋವೂ ಕಾಣಿಸಿಕೊಳ್ಳುತ್ತದೆ. ಎಷ್ಟು ಹೊತ್ತಿಗೊಮ್ಮೆ ಬೇಕು ರೆಸ್ಟ್?ಎಂಥ ಕೆಲಸವೇ ಆಗಿರಲಿ 30 ನಿಮಿಷಕ್ಕಿಂತ ಹೆಚ್ಚು ಹೊತ್ತು ಕುಳಿತಿರಬಾರದು. 30 ನಿಮಿಷಕ್ಕೆ ಒಂದು ಬಾರಿ ವಾಕ್ ಮಾಡಿ, ವಾಷ್ ರೂಮ್‌ಗೆ ಹೋಗಿ ಮುಖಕ್ಕೆ ನೀರು ಹಾಕಿಕೊಳ್ಲಿ.  ಇದರಿಂದ ಕಣ್ಣಿಗೂ ರಿಲ್ಯಾಕ್ಸ್ ಆಗುತ್ತದೆ. ಹಾಗು ದೇಹಕ್ಕೂ ವಿಶ್ರಾಂತಿ ಸಿಗುತ್ತದೆ. ಹೆಚ್ಚೊತ್ತು ಕೂತರೇನಾಗುತ್ತದೆ?- 30 ನಿಮಿಷ ಕಳೆದ ನಂತರ ಮೆಟಾಬಾಲಿಸಂ ನಿಧಾನವಾಗುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ಬೊಜ್ಜು ತುಂಬಿಕೊಳ್ಳುತ್ತದೆ. ಇದರಿಂದ ಬೆಲ್ಲಿ ಫ್ಯಾಟ್ ಕೂಡ ಕಾಣಿಸಿಕೊಳ್ಳುತ್ತದೆ. - ಯಾವ ವ್ಯಕ್ತಿ ತುಂಬಾ ಸಮಯದವರೆಗೆ ಕುಳಿತುಕೊಂಡು ಕೆಲಸ ಮಾಡುತ್ತಾರೆ ಅವರಲ್ಲಿ ಟೈಪ್ 2 ಡಯಾಬಿಟೀಸ್, ಹೃದಯ ಸಮಸ್ಯೆ ಮತ್ತು ಕ್ಯಾನ್ಸರ್ ಸಾಮಾನ್ಯರಿಗಿಂತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. 

PREV
click me!

Recommended Stories

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?