ವಿದೇಶದಲ್ಲೂ ಆಚರಿಸುತ್ತಾರೆ ಕೃಷ್ಣನ ಹುಟ್ಟುಹಬ್ಬ

Published : Sep 02, 2018, 04:03 PM ISTUpdated : Sep 09, 2018, 08:51 PM IST
ವಿದೇಶದಲ್ಲೂ ಆಚರಿಸುತ್ತಾರೆ ಕೃಷ್ಣನ ಹುಟ್ಟುಹಬ್ಬ

ಸಾರಾಂಶ

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಾಚೀನ ಹಬ್ಬಗಳಲ್ಲಿ ಒಂದು. ಜಗದೋದ್ಧಾರಕ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ. 

ಬೆಂಗಳೂರು (ಸೆ. 02): ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಾಚೀನ ಹಬ್ಬಗಳಲ್ಲಿ ಒಂದು. ಜಗದೋದ್ಧಾರಕ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ. ಹೇಗೆಲ್ಲಾ ಆಚರಿಸಲಾಗುತ್ತದೆ? ಎಲ್ಲೆಲ್ಲಿ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ. 

ಬಾಂಗ್ಲಾದೇಶ
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ನೆರೆಯ ಬಾಂಗ್ಲಾ ದೇಶದಲ್ಲೂ ಅತ್ಯಂತ ಶ್ರದ್ಧಾಭಕ್ತಿ ಮತ್ತು  ಸಂಭ್ರಮದಿಂದ ಆಚರಿಸುತ್ತಾರೆ. ಢಾಕಾದಲ್ಲಿರುವ ಢಾಕೇಶ್ವರಿ ದೇವಾಲಯದಲ್ಲಿ ಹೆಚ್ಚಿನ ಪೂಜಾಕೈಂಕರ್ಯಗಳು ನೆರವೇರುತ್ತವೆ.

ಅಮೆರಿಕ

ಶ್ರೀಲ ಪ್ರಭುಪಾದ ದೇಶ ವಿದೇಶಗಳಲ್ಲಿ ಸುತ್ತಿ ಶ್ರೀಕೃಷ್ಣನ ಸಂದೇಶಗಳನ್ನು ಸಾರಿದರು. ಬಳಿಕ ಅಮೆರಿಕದಲ್ಲಿ ‘ಹರೇ ಕೃಷ್ಣ’ ಚಳುವಳಿ ಆರಂಭವಾಯಿತು. ಇಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಹರೇ ಕೃಷ್ಣ ತಂಡಗಳು ವಿವಿದೆಡೆ ವರ್ಣರಂಜಿತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. 

ನೇಪಾಳ

ನೇಪಾಳದ ಶೇ. 80 ರಷ್ಟು ಜನರು ಹಿಂದುಗಳಾಗಿದ್ದು, ಕೃಷ್ಣ ಜನ್ಮಾಷ್ಟಮಿ ಅಲ್ಲಿ ಒಂದು ಪ್ರಮುಖ ಹಬ್ಬ. ಜನರು ಉಪವಾಸವಿದ್ದು, ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ, ಭಕ್ತಿಗೀತೆಗಳನ್ನು ಹಾಡಿ ಕೃಷ್ಣನಿಗೆ ಅರ್ಪಿಸುತ್ತಾರೆ.

ಟೊರಾಂಟೋ (ಕೆನಡ)

ಕೆನಡದ ಭಾರತೀಯರು ಹತ್ತಿರದ ರಾಧಾ-ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ್ನು ಆರಾಧಿಸುತ್ತಾರೆ.ಮಹಿಳೆಯರು ಉಪವಾಸವಿದ್ದು ಎಲ್ಲಾ ಪೂಜಾಕಾರ್ಯ ಮುಗಿದ ಬಳಿಕವೇ ಆಹಾರ ಸೇವಿಸುತ್ತಾರೆ. 

ಫ್ರಾನ್ಸ್

ಕೃಷ್ಣ ಜನ್ಮಾಷ್ಟಮಿಯ ಹಿಂದಿನ ಎರಡ್ಮೂರು ದಿನಗಳಿಂದಲೇ ಇಲ್ಲಿ ಸಿದ್ಧತೆ ನಡೆಯುತ್ತವೆ. ಜನರು ಹತ್ತಿರದ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಭಕ್ತಿಗೀತೆಗಳನ್ನು ಹಾಡುತ್ತಾರೆ. ಇದಲ್ಲದೆ ಸಿಂಗಾಪುರ, ಮಲೇಷಿಯಾ, ನ್ಯೂಜಿಲೆಂಡ್‌ಗಳಲ್ಲಿಯೂ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ.

PREV
click me!

Recommended Stories

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?