ರಟ್ಟಾಗದ ಗಗನಸಖಿಯರ ಗುಟ್ಟು!

Published : Jul 19, 2018, 04:25 PM IST
ರಟ್ಟಾಗದ ಗಗನಸಖಿಯರ ಗುಟ್ಟು!

ಸಾರಾಂಶ

ಚೆಂದುಳ್ಳಿ ಗೊಂಬೆಯಂತೆ ಬಳುಕುತ್ತಾ, ಕೈಯಲ್ಲಿ ಟ್ರೇ ಅಥವಾ ಸೂಟ್‌ಕೇಸ್ ಹಿಡಿದು, ಅತ್ತಿಂದಿತ್ತ ನಗು ಮುಖದಲ್ಲಿ ಓಡಾಡುವ ಗಗನಸಖಿಯರು ಕೆಲವೊಂದು ಗುಟ್ಟನ್ನು ಯಾವತ್ತೂ ಬಿಟ್ಟು ಕೊಡುವುದಿಲ್ಲ. ಪ್ರಯಾಣಿಕರನ್ನು ನಗೆಯಿಂದಲೇ ಮರಳು ಮಾಡೋ ಇವರು, ಉತ್ತರ ಹೇಳಲಾಗದಂಥ ಪ್ರಶ್ನೆಗಳು ಎದುರಾದರೆ, ಆ ನಗುವಿನಿಂದಲೇ ಉತ್ತರವನ್ನು ಮರೆ ಮಾಚುತ್ತಾರೆ.

- ಕುಡಿಯುವ ನೀರು

ವಿಮಾನದಲ್ಲಿ ನೀರನ್ನು ಬಹುಕಾಲ ಸುಂಗ್ರಹಿಸುವುದು ಅಸಾಧ್ಯ. ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿಡುತ್ತಾರೆ, ಬಾಟಲಿನಲ್ಲಿ ಸಿಗುವ ನೀರು ಮಾತ್ರ ಆರೋಗ್ಯಕರ.  ಆ ಕಾರಣದಿಂದ ಲೋಟದಲ್ಲಿ ನೀರು ಪೂರೈಸುತ್ತಾರೆ ಗಗನಸಖಿಯರು. ಈ ಬಗ್ಗೆ ಮಾತ್ರ ಹೇಳೋಲ್ಲ.

- ತೊಳೆಯದ ತಟ್ಟೆ-ಲೋಟ

ವಿಮಾನದಲ್ಲಿ ಪಾತ್ರೆಯನ್ನು ಸ್ವಚ್ಚಗೊಳಿಸಲಾಗುವುದಿಲ್ಲ. ಅದರಿಂದ ಅದನ್ನು ಒರೆಸಿ ಇಡಲಾಗುತ್ತದೆ. ಅದಕ್ಕಾಗಿಯೇ ಸ್ಯಾನಿಟೈಜರ್ ಇರುತ್ತದೆ. ಆಹಾರ ಸೇವಿಸೋ ಮುನ್ನ ಈ ಬಗ್ಗೆ ಗಮನ ಇರಲಿ. 

- ವೇತನ

ನಗೆ ಬುಗ್ಗೆಗಳಂತಿರುವ ಗಗನಸಖಿಯರು ಚೆಂದ ಡ್ರೆಸ್ ಮಾಡಿಕೊಂಡು, ಪುಟ ಪುಟನೇ ಓಡಾಡುತ್ತಿರುತ್ತಾರೆ. ಆದರೆ, ಅವರಿಗೆ ಹೇಳಿಕೊಳ್ಳುವಂಥ ಯಾವುದೇ ವೇತನವಾಗಲಿ, ಸೌಲಭ್ಯಗಳಾಗಲಿ ಇರುವುದಿಲ್ಲ. ಅದೂ ಅಲ್ಲದೇ ವಿಮಾನದಲ್ಲಿ ಹಾರಾಡುವಾಗ ಮಾತ್ರ ವೇತನ ನೀಡಲಾಗುತ್ತದೆಯೇ ಹೊರತು, ಬೋರ್ಡಿಂಗ್‌ನಲ್ಲಿರುವಾಗ ವೇತನ ನೀಡಲಾಗುವುದಿಲ್ಲ.

PREV
click me!

Recommended Stories

25 ವರ್ಷಗಳಲ್ಲಿ ಏನೇನ್‌ ಆಯ್ತು ಗೊತ್ತಾ? 21ನೇ ಶತಮಾನದ ಕಾಲು ಶತಮಾನಕ್ಕೆ ತೆರೆ, ಶರವೇಗದಲ್ಲಿ ಬದಲಾಗಿದೆ ಕಾಲ
ಯಶಸ್ವಿ ಜನರು ಪಾಲಿಸುವ ದಿನಚರಿ: 2026ರಲ್ಲಿ ನೀವು ಕೂಡ ಅನುಸರಿಸಬಹುದಾದ 10 ದಾರಿಗಳು