ಫಟಾಫಟ್ ತೂಕ ಇಳಿಸಿಕೊಳ್ಳಲು ಇಲ್ಲಿವೆ ಟಿಪ್ಸ್

Published : Aug 23, 2018, 07:14 PM ISTUpdated : Sep 09, 2018, 09:48 PM IST
ಫಟಾಫಟ್ ತೂಕ ಇಳಿಸಿಕೊಳ್ಳಲು ಇಲ್ಲಿವೆ ಟಿಪ್ಸ್

ಸಾರಾಂಶ

ಸುಖಾ ಸುಮ್ಮನೆ ತೂಕ ಇಳಿಸುವ ಮದ್ದೆಂದು ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳನ್ನು ಸೇವಿಸಿದರೆ ಹಣವೂ ವೇಸ್ಟ್, ಟೈಮ್ ಸಹ ವೇಸ್ಟ್. ಅಲ್ಲದೇ ದೇಹದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಬದಲಾಗಿ ಆಹಾರದಲ್ಲಿ ತುಸು ಬದಲಾವಣೆ ಮಾಡಿಕೊಂಡು, ನೈಸರ್ಗಿಕವಾಗಿಯೇ ಕೆಲವು ನಿಯಮಗಳನ್ನು ಪಾಲಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.

ತೂಕ ಕಡಿಮೆ ಮಾಡಿಕೊಳ್ಳಲು ಪ್ರತಿಯೊಂದೂ ಹೆಣ್ಣೂ ಏನೇನೋ ಕಸರತ್ತು ಮಾಡುತ್ತಾಳೆ. ಇದಕ್ಕಾಗಿ ಹೆಚ್ಚಿನವರು ಔಷಧಿಗಳ ಮೊರೆ ಹೋಗುವುದೂ ಇದೆ. ಇದರಿಂದ ಬೇಗನೆ ತೂಕ ಇಳಿಸಿಕೊಳ್ಳಬಹುದು ಎಂದೇ ಭಾವಿಸುತ್ತಾರೆ. ಆದರೆ ಇದರಿಂದ ತುಂಬಾನೇ ಸೈಡ್ ಎಫೆಕ್ಟ್ಸ್ ಇರುತ್ತವೆ. ಅದಕ್ಕಾಗಿ ಕೆಲವೊಂದು ನ್ಯಾಚುರಲ್ ಥೆರಪಿಯೇ ಬೆಸ್ಟ್. 

- ಬೆಳಗ್ಗೆ ಎದ್ದು ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿ ನೀರು ಕುಡಿಯಿರಿ. ಇದರಿಂದ ದೇಹದ ಟಾಕ್ಸಿನ್ಸ್‌ ಹೊರಗೆ ಬರುವುದರ ಜೊತೆ ತೂಕ ಇಳಿಯುತ್ತದೆ.
- ಇದಲ್ಲದೆ ನಿಂಬೆ ಜ್ಯೂಸ್ ಸಹ ಸೇವಿಸಬಹುದು. ಆದರೆ ಅದಕ್ಕೆ ಸಕ್ಕರೆ ಬದಲು ಜೇನನ್ನು ಬೆರೆಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
- ಗ್ರೀನ್‌ ಟೀ ಆರೋಗ್ಯಕ್ಕೆ ಅತ್ಯುತ್ತಮ ಪಾನೀಯ. ಇದು ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ.


- ಪ್ರತಿದಿನ ವ್ಯಾಯಾಮ, ವಾಕಿಂಗ್ ಮತ್ತು ಜಾಕಿಂಗ್ ಮಾಡಿ. 
- ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಇದರಿಂದ ಹೊಟ್ಟೆ ಅರ್ಧ ತುಂಬುತ್ತದೆ. ಅನಗತ್ಯವಾಗಿ ಹೆಚ್ಚಿಗೆ ತಿನ್ನುವುದನ್ನು ತಪ್ಪಿಸುತ್ತದೆ.
- ಬ್ರೇಕ್ ಫಾಸ್ಟ್ ಮಿಸ್ ಮಾಡಬೇಡಿ. 
- ಸಂಜೆ ಹೊತ್ತು ಬೇಡವಾದ ಸ್ನ್ಯಾಕ್ಸ್ ಸೇವಿಸಬೇಡಿ.  ಹಸಿವೆಯಾದರೆ ಪಪ್ಪಾಯಿ ತಿನ್ನಿ. ಇದರಲ್ಲಿರುವ ಫೈಬರ್‌ ಅಂಶ ತೂಕ ಇಳಿಸಲು ಸಹಕರಿಸುತ್ತದೆ. 
- ಡಯಟ್‌ನಲ್ಲಿ ಸಕ್ಕರೆ ಮತ್ತು ಉಪ್ಪನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಸಕ್ಕರೆ ಬದಲಾಗಿ ಜೇನು ಬಳಸಿ.
- ರಾತ್ರಿ ಊಟದ ಬದಲು ಚಪಾತಿ ಸೇವಿಸಿ. ಇದರಲ್ಲಿ ಕ್ಯಾಲರಿ ಕಡಿಮೆ ಇದ್ದು, ತೂಕ ಹೆಚ್ಚುವುದಿಲ್ಲ. 
- ಡಯಟ್‌ನಲ್ಲಿ ಫೈಬರ್‌ಯುಕ್ತ ಆಹಾರವನ್ನು ಹೆಚ್ಚಿರಲಿ. 
- ಜಿಮ್‌ಗೆ ಜಾಯಿನ್ ಆಗಿ. ಟ್ರೈನರ್ ಬಳಿ ನಿಮ್ಮ ಉದ್ದೇಶ ಹೇಳಿದರೆ ಅದಕ್ಕೆ ಸರಿಯಾದ ಎಕ್ಸರ್‌ಸೈಜ್ ಮಾಡುವಂತೆ ಹೇಳುತ್ತಾರೆ. ಅದನ್ನು ಪಾಲಿಸಿ. 

ಲೈಫ್‌ಸ್ಟೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


 

PREV
click me!

Recommended Stories

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?