ದುಡ್ಡು ಉಳಿಯಲು ಮನೆಯಲ್ಲಿ ಇದಿರಲಿ..

By Web DeskFirst Published Aug 21, 2018, 4:52 PM IST
Highlights

ಉಡುಗೊರೆಯಾಗಿಯೇ ಸ್ವೀಕರಿಸಿದ ಲಾಫಿಂಗ್ ಬುದ್ಧ ಮನೆಯಲ್ಲಿದ್ದರೆ ಒಳ್ಳೆಯದೆಂಬ ನಂಬಿಕೆ ಜನರಲ್ಲಿದೆ. ವಿಭಿನ್ನವಾಗಿ, ವಿವಿಧ ಗಾತ್ರಗಳಲ್ಲಿ ಸಿಗುವ ಈ ವಿಗ್ರಹವನ್ನು ಎಲ್ಲಿ, ಹೇಗೆ ಇಟ್ಟರೆ ಒಳಿತು. ಓದಿ ಈ ಲೇಖನವನ್ನು.

ಕಷ್ಟ ಪಟ್ಟು ದುಡಿತೀವಿ, ಆದರೆ, ಕೈಯಲ್ಲೇ ದುಡ್ಡೇ ನಿಲ್ಲೋಲ್ಲ ಎನ್ನುವುದು ಶ್ರೀ ಸಾಮಾನ್ಯನ ಸಂಕಟ. ಸೇವಿಂಗ್ಸ್ ಮಾಡ್ಲಿಕ್ಕೆ ಎಲ್ಲರೂ ಕಷ್ಟಪಡುವವರೇ. ದುಡಿದದ್ದು ಉಳಿದು, ಮನೆಯಲ್ಲಿ ಸಮೃದ್ಧಿ ಹೆಚ್ಚಾಗಲು ಮನೆಯಲ್ಲಿ ಲಾಫಿಂಗ್ ಬುದ್ಧ ಅಥವಾ ಕುಬೇರನಿರಬೇಕು.

ಮದುವೆ, ಮುಂಜಿಯಂಥ ಸಂದರ್ಭಗಳಲ್ಲಿ ಹಿತೈಷಿಗಳಿಗೆ ಮೊದಲು ಉಡುಗೊರೆ ಕೊಡಬೇಕು ಎಂದೆನಿಸುವುದು ಅಧಿಪತಿ ಕುಬೇರ. ಅದೃಷ್ಟ, ಸಮೃದ್ಧಿ, ಸಂತೋಷ ಮತ್ತು ಐಶ್ವರ್ಯ ಹೆಚ್ಚಿಸುವ ಈ ಕುಬೇರ ಎಂಥವರನ್ನೂ ಹಿತ ಬಯಸುತ್ತಾನೆ. ವಿವಿಧ ವಿನ್ಯಾಸ, ಗಾತ್ರಗಳಲ್ಲಿ ದೊರೆಯುವ ಈ ಕುಬೇರ ಮನೆಯಲ್ಲಿದ್ದರೆ ಸಿರಿವಂತರಾಗಬಹುದು ಎಂಬುವುದು ಪಿಂಗ್ ಶ್ಯೂ ನಂಬಿಕೆ.

  • ಡೊಳ್ಳು ಹೊಟ್ಟೆಯ ಈ ಬುದ್ಧ ವಿಗ್ರಹದ ಹೊಟ್ಟೆಯನ್ನು ಆಗಾಗ ಸವರುತ್ತಿರಬೇಕು. 
  • ಅದೃಷ್ಟದ ಮೂಟೆ ಹೊತ್ತ ವಿಗ್ರಹವನ್ನಿಟ್ಟುಕೊಂಡರೆ, ಯಾವುದೇ ಕೆಟ್ಟ ದೃಷ್ಟಿಯೂ ಬೀಳುವುದಿಲ್ಲ. ಅಲ್ಲದೇ ಆಯುಷ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
  • ಕೈಯಲ್ಲಿ ಚಿನ್ನದ ಕಾಸಿರುವ ಕುಬೇರನಿದ್ದರೆಸ ಮನೆಯಲ್ಲಿ ಸಂಪತ್ತು ದ್ವಿಗುಣಗೊಳ್ಳಲಿದೆ.
  • ಡ್ರ್ಯಾಗನ್ ಮೇಲೆ ಕೂತಿರುವ ಕುಬೇರನನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇರಿಸಬೇಕು. ಇದು ಔದ್ಯೋಗಿಕ ಜೀವನವನ್ನು ಉತ್ತಮಗೊಳಿಸುತ್ತದೆ.
  • ಸ್ಫಟಿಕ ಕುಬೇರನ ಕೈಯಲ್ಲಿ ಮುತ್ತಿದ್ದು, ಅದನ್ನು ಮನೆ ಅಥವಾ ಕೋಣೆ ಮದ್ಯೆ ಇಟ್ಟರೆ ಕುಟುಂಬದ ಎಲ್ಲರ ಜ್ಞಾನ ಹೆಚ್ಚುತ್ತದೆ. 
  • ಮಕ್ಕಳೊಂದಿಗೆ ಕುಬೇರ ಇರುವ ವಿಗ್ರಹವನ್ನು ಇಟ್ಟುಕೊಂಡರೆ, ಸಂತಾನ ಯೋಗ ಇಲ್ಲದವರಿಗೆ, ಸಂತಾನ ಪ್ರಾಪ್ತಿಯಾಗುತ್ತದೆ. ಮಲಗೋ ಕೋಣೆಯ ಪಶ್ಚಿಮ ದಿಕ್ಕಿನಲ್ಲಿ ಇದನ್ನಿಡಬೇಕು.
click me!